ಸಿದ್ದರಾಮಯ್ಯ ಪ್ರತಿತಂತ್ರ

ಜಾರ್ಜ್‌ ರಕ್ಷಣೆಗೆ ಹಿರಿಯ ಸಚಿವರೊಂದಿಗೆ ಚರ್ಚೆ

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಹೋರಾಟ ನಡೆಸಲು ವಿರೋಧ ಪಕ್ಷ ಬಿಜೆಪಿ ಸಜ್ಜಾಗಿರುವ ಬೆನ್ನಲ್ಲೇ ಪ್ರತಿತಂತ್ರ ಹೆಣೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಜಾರ್ಜ್‌ ರಕ್ಷಣೆಗೆ ಹಿರಿಯ ಸಚಿವರೊಂದಿಗೆ ಚರ್ಚೆ

ಬೆಳಗಾವಿ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಹೋರಾಟ ನಡೆಸಲು ವಿರೋಧ ಪಕ್ಷ ಬಿಜೆಪಿ ಸಜ್ಜಾಗಿರುವ ಬೆನ್ನಲ್ಲೇ ಪ್ರತಿತಂತ್ರ ಹೆಣೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಹಿರಿಯ ಸಚಿವರ ಜೊತೆ ಸೋಮವಾರ ರಾತ್ರಿ ಸಮಾಲೋಚನೆ ನಡೆಸಿದ ಅವರು, ಉಭಯ ಸದನಗಳಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗುವಂತೆ ಸೂಚಿಸಿದರು.

‘ಸಚಿವರು ತಮಗೆ ನಿಗದಿಯಾದ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ, ಯಡಿಯೂರಪ್ಪ ಸೇರಿದಂತೆ ಸಚಿವರಾಗಿದ್ದವರು ಜೈಲು ಸೇರಿದ ಪ್ರಕರಣಗಳನ್ನು ಪ್ರಸ್ತಾಪಿಸಿ ಅವರ ಬಣ್ಣವನ್ನು ಬಯಲು ಮಾಡಬೇಕು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

‘ಈ ಪ್ರಕರಣದಲ್ಲಿ ಜಾರ್ಜ್ ನಿರಪರಾಧಿ. ಅವರ ಪಕ್ಷದ ವರಿಷ್ಠರು ಸೂಚಿಸಿದ ಕಾರಣಕ್ಕೆ ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ರಾಜಕೀಯವಾಗಿ ಇದನ್ನು ಎದುರಿಸಬೇಕಾಗಿದೆ. ಎರಡು ದಿನಕ್ಕಿಂತ ಹೆಚ್ಚು ದಿನ ಅವರು ಮುಂದುವರಿಸಲಾರರು. ಅದನ್ನು ಮೀರಿ ಮುಂದುವರಿಸಿದರೆ, ಬಿಜೆಪಿಯವರು ಉತ್ತರ ಕರ್ನಾಟಕದ ವಿರೋಧಿಗಳು ಎಂದೂ ಸದನದಲ್ಲಿ ಪ್ರಸ್ತಾಪಿಸಲು ಹಿಂಜರಿಯುವುದು ಬೇಡ’ ಎಂದು ಮುಖ್ಯಮಂತ್ರಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

Comments
ಈ ವಿಭಾಗದಿಂದ ಇನ್ನಷ್ಟು
ನಟನ ಹತ್ಯೆಗೆ ಸುಪಾರಿ; ದೂರು

ಬೆಂಗಳೂರು
ನಟನ ಹತ್ಯೆಗೆ ಸುಪಾರಿ; ದೂರು

25 Mar, 2018
‘ಬಂಗಾರ’ದ ಮಗನಿಗಾಗಿ ಭೂಮಿ ಕೊಳ್ಳುವ ಕನಸು

ತೋಟಗಾರಿಕೆ ವಿ.ವಿ ಏಳನೇ ಘಟಿಕೋತ್ಸವ
‘ಬಂಗಾರ’ದ ಮಗನಿಗಾಗಿ ಭೂಮಿ ಕೊಳ್ಳುವ ಕನಸು

25 Mar, 2018
ಶಾಸಕ ರುದ್ರೇಶ್‌ ಗೌಡ ವಿಧಿವಶ

ಬೇಲೂರು
ಶಾಸಕ ರುದ್ರೇಶ್‌ ಗೌಡ ವಿಧಿವಶ

25 Mar, 2018
ವರ್ಗಾವಣೆ: ಹೈಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ

ಬೆಂಗಳೂರು
ವರ್ಗಾವಣೆ: ಹೈಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ

25 Mar, 2018
ರಾಜ್ಯ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ

ಲೈಂಗಿಕ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ

25 Mar, 2018