ಬೆಂಗಳೂರು

ಗೋವಾ ಮದ್ಯ ಅಕ್ರಮ ಸಾಗಣೆ: ಮೂವರ ಬಂಧನ

ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ನಗರದ ಅಬಕಾರಿ ಪೊಲೀಸರು, 250 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು: ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ನಗರದ ಅಬಕಾರಿ ಪೊಲೀಸರು, 250 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.

‘ಪ್ರವೀಣ್‌ ನಾಯಕ, ಮುಕುಂದದತ್ತ ಖಂಡೇಕರ್‌, ನಾರಾಯಣ ಬಂಧಿತರು. ಅವರು ಹಲವು ವರ್ಷಗಳಿಂದ ಈ ಕೃತ್ಯ ಎಸಗುತ್ತಿದ್ದರು ಎಂಬ ಮಾಹಿತಿ ಇದ್ದು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

‘ಅಂಕೋಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆತಂದಿದ್ದ ಖಾಸಗಿ ಕಂಪೆನಿಯ ಬಸ್‌ನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಗಾಂಧಿನಗರದ ಸೀಬರ್ಡ್ ಟ್ರಾವೆಲ್ಸ್‌ ಕಚೇರಿಯ ಮುಂಭಾಗದಲ್ಲಿ ನಿಂತಿದ್ದ ಬಸ್‌ನಲ್ಲಿ ತಪಾಸಣೆ ನಡೆಸಿದಾಗ ಮದ್ಯ ಸಿಕ್ಕಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

ಇಂದಿರಾ ನಗರದಲ್ಲಿ ಘಟನೆ
ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

16 Jan, 2018
ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿದರು

ಸಂಕ್ರಾಂತಿ ಸಂಭ್ರಮ
ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿದರು

16 Jan, 2018

ಬೆಂಗಳೂರು
ಸೊಪ್ಪು ತರಕಾರಿ ಮೂಲಕ ದೇಹ ಸೇರುತ್ತಿದೆ ವಿಷ!

ಕೊಳಚೆ ನೀರು ಬಳಸಿ ಬೆಳೆಯುತ್ತಿರುವ ತರಕಾರಿ, ಸೊಪ್ಪು, ಹಣ್ಣುಹಂಪಲು ವಿಷಯುಕ್ತವಾಗಿವೆ. ಇವುಗಳನ್ನು ಜನರು ಅರಿವಿಲ್ಲದೆ ಸೇವಿಸುತ್ತಿದ್ದು, ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ...

16 Jan, 2018

ಬೆಂಗಳೂರು
ಹಿಂದೂ ಧರ್ಮದ ತತ್ವವೇ ಸಹಿಷ್ಣುತೆ: ದೇವೇಗೌಡ

ಹಿಂದು ಧರ್ಮದ ತತ್ವವೇ ಸಹಿಷ್ಣುತೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

16 Jan, 2018
ಮೂಕಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ

ಕಾಮಧೇನು ಹಂಸ ಸೇವಾ ಟ್ರಸ್ಟ್‌
ಮೂಕಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ

16 Jan, 2018