ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುರುಬ ಸಮಾಜ ಶೈಕ್ಷಣಿಕವಾಗಿ ಬೆಳೆಯಲಿ

Last Updated 14 ನವೆಂಬರ್ 2017, 5:03 IST
ಅಕ್ಷರ ಗಾತ್ರ

ಮುನವಳ್ಳಿ: ‘ಕುರುಬ ಸಮಾಜ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು’ ಎಂದು ಶಾಸಕ ವರ್ತೂರ ಪ್ರಕಾಶ ಹೇಳಿದರು. ಸಮೀಪದ ಶಿಂದೋಗಿ ಗ್ರಾಮದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದ ನಿಮಿತ್ತ ಇತ್ತೀಚೆಗೆ ನಡೆದ ಆಧ್ಯಾತ್ಮಿಕ ಪ್ರವಚನ  ಮಂಗಲೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ದರೆ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅವರನ್ನು ಪ್ರೋತ್ಸಾಹಿಸಬೇಕು’ ಎಂದರು.
ಧಾರವಾಡ ಜಿಲ್ಲಾ ಪಂಚಾಯ್ತಿ  ಉಪಾಧ್ಯಕ್ಷ ಶಿವಾನಂದ ಕರಿಗಾರ, ಹಾಲುಮತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಡಿ. ಟೋಪೋಜಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಫಕ್ಕೀರಪ್ಪ ಹದ್ದಣ್ಣವರ, ಎಂ.ಎಸ್. ಹಿರೇಕುಂಬಿ, ಶಿವಗಂಗಾ ಗೊರವನಕೊಳ್ಳ, ನಿಶಾಂತ ದಳವಾಯಿ, ಪ್ರವಚನಕಾರ ಅಮರೇಶ್ವರ ಮಹಾರಾಜರು ಇದ್ದರು.

ಎಫ್.ವೈ. ಮುಶೆನ್ನವರ ಸ್ವಾಗತಿಸಿ ದರು. ಎ.ವಿ. ನರಗುಂದ ನಿರೂಪಿಸಿದರು. ಮಲ್ಲಿಕಾರ್ಜುನ ದಸ್ತಿ ವಂದಿಸಿದರು. ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಬೈಕ್  ರ‍್ಯಾಲಿ, ಆರತಿ, ಕುಂಭಗಳು, ವಾದ್ಯ ಮೇಳ ಮೆರುಗು ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT