ವೆರಿಫಿಕೇಷನ್ ಕೋಡ್‌

ಗೂಗಲ್‌ ಅಕೌಂಟ್‌ ಸುರಕ್ಷತೆಗೆ ಎರಡು ಕೀ

ಗೂಗಲ್‌ ಅಕೌಂಟ್‌ನ ಎರಡು ಹಂತದ ಸುರಕ್ಷತೆಯ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿದೆ. ಎರಡು ಹಂತದ ಸುರಕ್ಷತಾ ವಿಧಾನ ಅಳವಡಿಸಿಕೊಂಡಿರುವವರಿಗೆ ಲಾಗ್ಇನ್ ಸಂದರ್ಭದಲ್ಲಿ ಪಾಸ್‌ವರ್ಡ್‌ ನಮೂದಿಸಿದ ಬಳಿಕ ಗೂಗಲ್‌ ಅಕೌಂಟ್‌ ಜತೆಗೆ ಸಂಪರ್ಕ ಹೊಂದಿರುವ ಮೊಬೈಲ್‌ ಸಂಖ್ಯೆಗೆ ವೆರಿಫಿಕೇಷನ್ ಕೋಡ್‌ ಬರುತ್ತದೆ.

ಗೂಗಲ್‌ ಅಕೌಂಟ್‌ ಸುರಕ್ಷತೆಗೆ ಎರಡು ಕೀ

ಸಾಕಷ್ಟು ಮಂದಿ ಆನ್‌ಲೈನ್‌ ಅಕೌಂಟ್‌ಗಳ ಪಾಸ್‌ವರ್ಡ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವುದಿಲ್ಲ. ತಮ್ಮ ಆನ್‌ಲೈನ್ ಅಕೌಂಟ್‌ಗಳ ಪಾಸ್‌ವರ್ಡ್‌ ಆಗಿ ತಮ್ಮ ಅಡ್ಡ ಹೆಸರನ್ನೋ, ನೆಚ್ಚಿನ ಚಿತ್ರದ ಹೆಸರನ್ನೋ, ನೆಚ್ಚಿನ ಕ್ರೀಡಾ ತಂಡದ ಹೆಸರನ್ನೋ ಅಥವಾ 111222333ಯನ್ನೋ ಬಳಸುವುದು ಹಲವರ ರೂಢಿ. ಇಂಥ ದುರ್ಬಲ ಪಾಸ್‌ವರ್ಡ್‌ಗಳಿಂದ ನಿಮ್ಮ ಆನ್‌ಲೈನ್‌ ಅಕೌಂಟ್‌ಗಳಿಗೆ ಯಾವುದೇ ಸಂದರ್ಭದಲ್ಲೂ ಕುತಂತ್ರಿಗಳು ಕನ್ನ ಹಾಕಬಹುದು. ಹೀಗೆ ದುರ್ಬಲ ಪಾಸ್‌ವರ್ಡ್‌ಗಳಿಂದ ಕುತಂತ್ರಿಗಳಿಗೆ ಸುಲಭವಾಗಿ ಬಲಿಯಾಗುವುದರ ಬದಲು ಸುರಕ್ಷಿತ ಪಾಸ್‌ವರ್ಡ್ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

ಗೂಗಲ್‌ ಅಕೌಂಟ್‌ನ ಎರಡು ಹಂತದ ಸುರಕ್ಷತೆಯ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿದೆ. ಎರಡು ಹಂತದ ಸುರಕ್ಷತಾ ವಿಧಾನ ಅಳವಡಿಸಿಕೊಂಡಿರುವವರಿಗೆ ಲಾಗ್ಇನ್ ಸಂದರ್ಭದಲ್ಲಿ ಪಾಸ್‌ವರ್ಡ್‌ ನಮೂದಿಸಿದ ಬಳಿಕ ಗೂಗಲ್‌ ಅಕೌಂಟ್‌ ಜತೆಗೆ ಸಂಪರ್ಕ ಹೊಂದಿರುವ ಮೊಬೈಲ್‌ ಸಂಖ್ಯೆಗೆ ವೆರಿಫಿಕೇಷನ್ ಕೋಡ್‌ ಬರುತ್ತದೆ.

ಈ ಕೋಡ್‌ ಅನ್ನು ನಮೂದಿಸಿದ ಬಳಿಕವೇ ನಿಮ್ಮ ಗೂಗಲ್ ಅಕೌಂಟ್‌ ತೆರೆದುಕೊಳ್ಳುವುದು. ಗೂಗಲ್‌ನ ಈ ಎರಡು ಹಂತದ ಸುರಕ್ಷತೆಯ ಬಗ್ಗೆಯೂ ಈಗ ಹಲವರಿಗೆ ನಂಬಿಕೆ ಇಲ್ಲ. ಏಕೆಂದರೆ ಟೆಕ್ಸ್ಟ್‌ ಮೆಸೇಜ್‌ ಮೂಲಕ ಬರುವ ಈ ಲಾಗ್‌ಇನ್ ವೆರಿಫಿಕೇಷನ್ ಕೋಡ್‌ ಅನ್ನು ಕೂಡಾ ಕುತಂತ್ರಿಗಳು ಕದಿಯುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಂತ್ರಜ್ಞರು.

ಲಾಗ್‌ಇನ್ ವೆರಿಫಿಕೇಷನ್ ಕೋಡ್‌ ಅನ್ನೂ ಪೂರ್ಣವಾಗಿ ಸುರಕ್ಷಿತ ಅಂದುಕೊಳ್ಳಲಾಗದ ಈ ಕಾಲದಲ್ಲಿ ಆನ್‌ಲೈನ್ ಅಕೌಂಟ್‌ಗಳನ್ನು ಕುತಂತ್ರಿಗಳಿಂದ ಕಾಯ್ದುಕೊಳ್ಳುವುದೊಂದು ದೊಡ್ಡ ಸವಾಲು. ಹೀಗಾಗಿ ಆನ್‌ಲೈನ್‌ ಅಕೌಂಟ್‌ಗಳಿಗೂ ಕೀ ಬಳಸುವ ಕಾಲ ಈಗ ಬಂದಿದೆ.

ಗೂಗಲ್‌ ತನ್ನ ಮುಂದುವರಿದ ಸುರಕ್ಷತಾ ವಿಧಾನ (Advanced Protection) ಬಳಸಲು ಎರಡು ಡಿಜಿಟಲ್‌ ಕೀಗಳನ್ನು ಶಿಫಾರಸು ಮಾಡುತ್ತಿದೆ. ಈ ಕೀಗಳನ್ನು ಬಳಸಿ ಸುರಕ್ಷಿತವಾಗಿ ನಿಮ್ಮ ಅಕೌಂಟ್‌ ತೆರೆಯಬಹುದು.

ಗೂಗಲ್‌ನ ಈ ಮುಂದುವರಿದ ಸುರಕ್ಷತಾ ವಿಧಾನ ಅಳವಡಿಸಿಕೊಳ್ಳಲು ನೀವು ಎರಡು ಕೀಗಳನ್ನು ಖರೀದಿಸಬೇಕಾಗುತ್ತದೆ. ಗೂಗಲ್‌ನ Advanced Protection Program ಪೇಜ್‌ಗೆ (ಲಿಂಕ್‌: landing.google.com/advancedprotection/) ಹೋಗಿ ಅಲ್ಲಿ Get Started ಎಂಬಲ್ಲಿ ಕ್ಲಿಕ್ಕಿಸಿ. ಈಗ ಗೂಗಲ್‌ ಅಕೌಂಟ್‌ಗೆ ಲಾಗ್‌ಇನ್ ಆಗಲು ಕೇಳುತ್ತದೆ.

ಇಲ್ಲಿ ನಿಮ್ಮ ಗೂಗಲ್‌ ಅಕೌಂಟ್‌ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ ನಮೂದಿಸಿ ಲಾಗ್‌ಇನ್‌ ಆಗಿ. ಈಗ ತೆರೆದುಕೊಳ್ಳುವ ಪುಟದಲ್ಲಿ ‘ಫಿಡೊ ಬ್ಲ್ಯೂಟೂತ್ ಕೀ’ (FIDO Security Key) ಮತ್ತು ‘ಫಿಡೊ ಯುಎಸ್‌ಬಿ ಕೀ’ (FIDO U2F Security Key) ಕೊಳ್ಳಲು ಲಿಂಕ್‌ ಕಾಣುತ್ತದೆ. ಈ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಕೀ ಕೊಳ್ಳಬಹುದು. ಸದ್ಯ ಪ್ರತಿ ಕೀ ಬೆಲೆ ಸುಮಾರು ₹ 1,500.

ಕೀ ಆರ್ಡರ್ ಮಾಡಿ, ಅವು ನಿಮ್ಮನ್ನು ತಲುಪಿದ ಬಳಿಕ Advanced Protection Program ಪೇಜ್‌ಗೆ ಲಾಗ್‌ಇನ್ ಆಗಿ. ಇಲ್ಲಿ ಕಾಣುವ I HAVE 2 SECURITY KEYS ಮೇಲೆ ಕ್ಲಿಕ್ ಮಾಡಿ. ಈಗ ಮತ್ತೆ ನಿಮ್ಮ ಅಕೌಂಟ್‌ಗೆ ಪಾಸ್‌ವರ್ಡ್‌ ನಮೂದಿಸುವಂತೆ ಕೇಳುತ್ತದೆ. ಪಾಸ್‌ವರ್ಡ್‌ ನಮೂದಿಸಿ ಕೀ ಸೆಟ್ಟಿಂಗ್‌ ಮಾಡಿ, Advanced Protection Program ಅನ್ನು Turn On ಮಾಡಿ.

ಫಿಡೊ ಬ್ಲೂಟೂತ್ ಕೀ ಅನ್ನು ಬಳಸಿ ಫೋನ್, ಟ್ಯಾಬ್ಲೆಟ್ ಮತ್ತು ಕೇಬಲ್ ಮೂಲಕ ಕಂಪ್ಯೂಟರ್‌ನಲ್ಲೂ ಸುರಕ್ಷಿತವಾಗಿ ಗೂಗಲ್‌ ಅಕೌಂಟ್‌ಗೆ ಲಾಗ್‌ಇನ್‌ ಆಗಬಹುದು. ಪೆನ್‌ಡ್ರೈವ್‌ನಂತಿರುವ ಫಿಡೊ ಯುಎಸ್‌ಬಿ ಕೀ ಅನ್ನು ಯುಎಸ್‌ಬಿ ಪೋರ್ಟ್‌ಗೆ ಪ್ಲಗ್‌ಇನ್ ಮಾಡುವ ಮೂಲಕ ಕಂಪ್ಯೂಟರ್‌ನಲ್ಲಿ ಗೂಗಲ್‌ ಅಕೌಂಟ್‌ಗೆ ಲಾಗ್‌ಇನ್ ಆಗಬಹುದು.

ಈ ಕೀಗಳಲ್ಲಿರುವ ಡಿಜಿಟಲ್‌ ಸಹಿಯು ನಿಮ್ಮ ಗುರುತನ್ನು ನಿಮ್ಮ ಡಿವೈಸ್‌ಗೆ ತಿಳಿಸುತ್ತದೆ. ನೀವು ಒಂದಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಬೇರೆ ಬೇರೆ ಭಾಗಗಳಲ್ಲಿ ಬಳಸುತ್ತಿದ್ದೀರಿ ಎಂದಾದರೆ ಅಲ್ಲಿಗೆಲ್ಲಾ ಈ ಕೀಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

ಒಂದು ವೇಳೆ ಈ ಕೀಗಳು ಕಳೆದುಹೋದರೆ ಸರಳ ವಿಧಾನದ ಮೂಲಕ ಅಕೌಂಟ್‌ ರಿಕವರಿ ಮಾಡಿಕೊಳ್ಳಬಹುದು. ಕಂಪೆನಿಗಳಲ್ಲಿ ತಂಡಗಳಾಗಿ ಕೆಲಸ ಮಾಡುವವರು ತಂಡದ ಕಾಮನ್‌ ಅಕೌಂಟ್‌ಗೆ ಲಾಗ್‌ಇನ್‌ ಆಗಲು ಈ ಕೀಗಳನ್ನು ಬಳಸಬಹುದು ಎನ್ನುತ್ತದೆ ಗೂಗಲ್‌.
–ನ್ಯೂಯಾರ್ಕ್ ಟೈಮ್ಸ್

Comments
ಈ ವಿಭಾಗದಿಂದ ಇನ್ನಷ್ಟು
ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ತಂತ್ರೋಪನಿಷತ್ತು
ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

22 Mar, 2018
ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ

ಪಾಸ್‌ವರ್ಡ್‌
ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ

21 Mar, 2018
ಬದಲಾದವು ಸ್ಮಾರ್ಟ್ ಸಾಧನಗಳು

ಸುಧಾರಿತ ಅಲಾರಾಂ
ಬದಲಾದವು ಸ್ಮಾರ್ಟ್ ಸಾಧನಗಳು

21 Mar, 2018
ವಿದ್ಯಾರ್ಥಿವೇತನಕ್ಕೆ ‘ಸಿಎಸ್‌ಆರ್‌’ ಬಳಕೆ

ತಂತ್ರಜ್ಞಾನ
ವಿದ್ಯಾರ್ಥಿವೇತನಕ್ಕೆ ‘ಸಿಎಸ್‌ಆರ್‌’ ಬಳಕೆ

21 Mar, 2018

ತಂತ್ರಜ್ಞಾನ
ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಸುವುದು ಹೇಗೆ?

ಮೊಬೈಲ್ ವೈಬ್ರೇಷನ್ ಮೋಡ್‍ನಲ್ಲಿದ್ದರೆ ಹೆಚ್ಚು ಬ್ಯಾಟರಿ ವಿನಿಯೋಗವಾಗುತ್ತದೆ. ಹಾಗಾಗಿ ಅತ್ಯಗತ್ಯವೆಂದಾಗ ಮಾತ್ರ ವೈಬ್ರೇಷನ್‍ನಲ್ಲಿಟ್ಟರೆ ಸಾಕು. ವೈಬ್ರೇಟ್ ಮಾಡಿ ರಿಂಗ್ ಆಗುವ ರೀತಿ ಇಟ್ಟುಕೊಳ್ಳುವುದು ಬೇಡವೇ...

15 Mar, 2018