ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಹೃದಯದ ತಯಾರಿಯಲ್ಲಿ!

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಝೂರಿಚ್‌ ವಿಶ್ವವಿದ್ಯಾಲಯದ ತಂಡವೊಂದು ಕೈಗೊಂಡಿರುವ ಕೃತಕ ಹೃದಯ ತಯಾರಿ ಯತ್ನ ಸಫಲವಾದರೆ ಜಗತ್ತಿನಲ್ಲಿ ಸಾವಿರಾರು ಮಂದಿಯ ಬದುಕು ಮತ್ತೆ ಲಯಬದ್ಧವಾದೀತು. ಹೃದ್ರೋಗಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುವ ಮಹತ್ವಾಕಾಂಕ್ಷಿ ಯೋಜನೆ ಇದು.

ಈ ತಂಡವು ಕೆಲವು ವರ್ಷಗಳಿಂದ ಈ ಸಂಬಂಧ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಹೃದಯದ ವಿವಿಧ ಭಾಗಗಳನ್ನು ತಯಾರಿಸುವ ಹಂತ ತಲುಪಿದೆ. ಯಾವುದೇ ಅಂಗವನ್ನು ಕಸಿ ಮಾಡಿದ ನಂತರ ಅದು ಫಲಾನುಭವಿಯ ದೇಹಕ್ಕೆ ಒಗ್ಗದೇ ಇರುವ ಮತ್ತು ಸೋಂಕು ತಗುಲುವ ಅಪಾಯ ಹೆಚ್ಚು. ಕೃತಕ ಹೃದಯವನ್ನು ಕಸಿ ಮಾಡಿದಾಗ ಇಂತಹ ಸಮಸ್ಯೆ ಎದುರಾಗಬಾರದು ಎನ್ನುವುದು ತಂಡದ ಗುರಿ. ಯಾವುದೇ ರಕ್ತದ ಗುಂಪು ಹಾಗೂ ದೇಹಸ್ಥಿತಿಯ ವ್ಯಕ್ತಿಗೆ ಹೊಂದುವಂತೆ ಹೃದಯವನ್ನು ರೂಪಿಸುವ ಪ್ರಯತ್ನಗಳು ಸಾಗಿವೆ.

‘ಮಾನವನ ಹೃದಯವು ವಿಭಿನ್ನ ಪದರಗಳ ಜೀವಕೋಶಗಳಿಂದ ಕೂಡಿರುತ್ತದೆ. ಹೃದಯದ ಬಡಿತ ಸರಾಗವಾಗಿ ನಡೆಯಲು ನಾರಿನಂಥ ಮಾಂಸಗುಚ್ಛಗಳ (ಮಸಲ್‌ ಫೈಬರ್‌) ಪಾತ್ರ ದೊಡ್ಡದು. ಈ ಮಾಂಸಗುಚ್ಛಗಳನ್ನು ಹಲವು ಪದರಗಳಲ್ಲಿ ಅಭಿವೃದ್ಧಿಪಡಿಸುವುದು ನಮ್ಮೆದುರು ಇರುವ ಸವಾಲು’ ಎಂದಿದ್ದಾರೆ ತಂಡದ ಸದಸ್ಯ, ಸಂಶೋಧಕ ಲ್ಯೂಕಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT