ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಅಗ್ರಸ್ಥಾನ ಉಳಿಸುವ ಭರವಸೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಲಿದೆ: ಉಪನಾಯಕ ಅಜಿಂಕ್ಯ ರಹಾನೆ
Last Updated 14 ನವೆಂಬರ್ 2017, 19:56 IST
ಅಕ್ಷರ ಗಾತ್ರ

ಕೋಲ್ಕತ್ತ: ಐಸಿಸಿ ರ‍್ಯಾಂಕಿಂಗ್‌ ನಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ಭರವಸೆಯೊಂದಿಗೆ ಶ್ರೀಲಂಕಾ ಎದು ರಿನ ಟೆಸ್ಟ್ ಸರಣಿಯಲ್ಲಿ ಭಾರತ ಕಣಕ್ಕೆ ಇಳಿಯಲಿದೆ ಎಂದು ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದರು.

ಸರಣಿಯ ಮೊದಲ ಪಂದ್ಯ ಇದೇ 16ರಂದು ಇಲ್ಲಿ ಆರಂಭಗೊಳ್ಳಲಿದೆ. ಮಂಗಳವಾರ ಅಭ್ಯಾಸದ ವೇಳೆ ಅವರು ಮಾಧ್ಯಮದವರ ಜೊತೆ ಮಾತ ನಾಡಿದರು.

‘ಶ್ರೀಲಂಕಾ ವಿರುದ್ಧ ಭಾರತ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಈ ದಾಖಲೆಯನ್ನು ತಂಡ ಮುಂದುವರಿಸಲಿದೆ. ತಂಡ ಈಗ ಅತ್ಯಂತ ಬಲಿಷ್ಠವಾಗಿರುವುದರಿಂದ ಇದು ಕಷ್ಟಕರವೇನಲ್ಲ. ಆದರೂ ಪ್ರವಾಸಿ ತಂಡವನ್ನು ನಾವು ಹಗುರವಾಗಿ ಕಾಣುವುದಿಲ್ಲ’ ಎಂದು ಹೇಳಿದರು.

ಲಂಕಾ ವಿರುದ್ಧದ ಸರಣಿಯ ನಂತರ ತಂಸಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಆದ್ದರಿಂದ ತವರಿನಲ್ಲಿ ಅತ್ಯುತ್ತಮ ಸಾಮರ್ಥ್ಯ ಮೆರೆಯುವ ಅಗತ್ಯವಿದೆ’ ಎಂದು ಹೇಳಿದ ರಹಾನೆ ‘ನಿರಂತರ ಕ್ರಿಕೆಟ್ ಆಡುವುದರಿಂದ ಯಾವುದೇ ಮಾರಕ ಪರಿಣಾಮ ಆಗಿಲ್ಲ.

ಆದ್ದರಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ತಂಡ ಉತ್ತಮವಾಗಿ ಆಡಲಿದೆ’ ಎಂದರು.

ತಮ್ಮ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು ‘ನಾನು ಈಗ ಉತ್ತಮ ಲಯದಲ್ಲಿದ್ದೇನೆ. ಶ್ರೀಲಂಕಾ ವಿರುದ್ಧದ ಸರಣಿಗೆ ಕೆಲವು ನಿರ್ದಿಷ್ಟ ಹೊಡೆತಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೇನೆ. ಸಾಕಷ್ಟು ಅಭ್ಯಾಸ ಮಾಡಿದ್ದೇನೆ’ ಎಂದರು.

ಪೂಜಾರ ಮೇಲೆ ಕಣ್ಣು

ರಣಜಿ ಟ್ರೋಫಿ ಪಂದ್ಯಗಳಲ್ಲಿ ಮಿಂಚಿರುವ ಚೇತೇಶ್ವರ ಪೂಜಾರ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದಾರೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ 12ನೇ ದ್ವಿಶತಕ ಬಾರಿಸಿದ್ದ ಪೂಜಾರ ನಂತರ 182 ರನ್‌ ಗಳಿಸಿ ಸೌರಾಷ್ಟ್ರ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಲ್ಲಿ ಮಂಗಳವಾರ 45 ನಿಮಿಷ ಗಳಿಗೂ ಹೆಚ್ಚು ಬ್ಯಾಟಿಂಗ್ ಅಭ್ಯಾಸ ಮಾಡಿದ ಅವರು ರಕ್ಷಣಾತ್ಮಕವಾಗಿ ಆಡುವುದರ ಜೊತೆಯಲ್ಲಿ ಹುಕ್‌ ಶಾಟ್‌ಗಳನ್ನು ಬಾರಿಸುವುದರ ಕಡೆಗೂ ಗಮನ ನೀಡಿದರು.

ಅವರು ನೆಟ್ಸ್ ತೊರೆದ ನಂತರ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ ಕೂಡ ಬ್ಯಾಟಿಂಗ್ ಅಭ್ಯಾಸ ಮಾಡಿದರು. ನೆರವು ಸಿಬ್ಬಂದಿಯ ‘ಥ್ರೋಡೌನ್‌’ಗಳನ್ನು ಅವರು ಎದುರಿಸಿದರು. ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಹೆಚ್ಚು ಕಾಲ ಬೌಲಿಂಗ್‌ ಅಭ್ಯಾಸದಲ್ಲಿ ತೊಡಗಿದ್ದರು. ಕೆಲವು ಲೆಗ್ ಸ್ಪಿನ್ ಎಸೆತಗಳನ್ನು ಕೂಡ ಹಾಕಿ ಅವರು ಗಮನ ಸೆಳೆದರು.

ಪಿಚ್ ಪರಿಶೀಲಿಸಿದ ಸೌರವ್ ಗಂಗೂಲಿ

ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಮಂಗಳವಾರ ಈಡನ್‌ ಗಾರ್ಡನ್ಸ್‌ನ ಪಿಚ್ ಪರಿಶೀಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ‘ಇದು ಉತ್ತಮ ಪಿಚ್‌. ಪಂದ್ಯದಲ್ಲಿ ಉತ್ತಮ ಸ್ಪರ್ಧೆ ಕಂಡುಬರುವ ಸಾಧ್ಯತೆ ಇದೆ’ ಎಂದರು.

ಚಾಂಡಿಮಲ್‌ಗೆ ಗೆಲುವಿನ ನಿರೀಕ್ಷೆ

ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತಂಡ ಉತ್ತಮ ಆಟವಾಡಲಿದ್ದು ಗೆಲುವಿನ ನಿರೀಕ್ಷೆ ಇದೆ ಎಂದು ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್ ಹೇಳಿದರು.

‘ಯುಎಇಯಲ್ಲಿ ನಡೆದ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯಲ್ಲಿ ತಂಡ ಉತ್ತಮ ಆಟವಾಡಿತ್ತು. ಅದೇ ಲಯದಲ್ಲಿ ಭಾರತದ ವಿರುದ್ಧವೂ ಆಡಲಿದ್ದೇವೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿ ಇದೆ ನಿಜ. ಆದರೆ ನಾವು ಭರವಸೆ ಕಳೆದುಕೊಂಡಿಲ್ಲ’ ಎಂದು ಅವರು ಹೇಳಿದರು.

**

ಅಗ್ರಸ್ಥಾನಕ್ಕೇರಲು ಜಡೇಜಗೆ ಅವಕಾಶ

ದುಬೈ: ಭಾರತದ ರವೀಂದ್ರ ಜಡೇಜ ಅವರಿಗೆ ಬೌಲಿಂಗ್ ಮತ್ತು ಆಲ್‌ರೌಂಡ್ ಆಟದಲ್ಲಿ ಅಗ್ರಸ್ಥಾನಕ್ಕೇರಲು ಈಗ ಸುವರ್ಣಾವಕಾಶ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಅವರ ಈ ಕನಸು ನನಸಾಗಲಿದೆ.

ಇಲ್ಲಿಯವರೆಗೆ 32 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜ 155 ವಿಕೆಟ್‌ ಕಬಳಿಸಿದ್ದು 1136 ರನ್‌ ಕಲೆ ಹಾಕಿದ್ದಾರೆ. ಟೆಸ್ಟ್‌ ಬೌಲರ್‌ ಮತ್ತು ಆಲ್‌ರೌಂಡರ್‌ಗಳಲ್ಲಿ ಅವರು ಎರಡನೇ ಸ್ಥಾನಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್‌ಸನ್ ಮತ್ತು ಬಾಂಗ್ಲಾದೇಶದ ಶಕೀಬ್‌ ಅಲ್ ಹಸನ್ ಅವರು ಕ್ರಮವಾಗಿ ಬೌಲಿಂಗ್ ಮತ್ತು ಆಲ್‌ರೌಂಡ್ ಆಟದಲ್ಲಿ ಈಗ ಅಗ್ರ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT