ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

Last Updated 15 ನವೆಂಬರ್ 2017, 6:14 IST
ಅಕ್ಷರ ಗಾತ್ರ

ಸಂಡೂರು: ‘ನಾಲ್ಕೂವರೆ ವರ್ಷಗಳ ಅಧಿಕಾರವಧಿಯಲ್ಲಿ ತಾಲ್ಲೂಕಿನಲ್ಲಿನ ಒಟ್ಟು 576 ಕಿ.ಮೀ ರಸ್ತೆಗಳಲ್ಲಿ 450 ಕಿ.ಮೀ ರಸ್ತೆ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇನ್ನುಳಿದ ಅವಧಿಯಲ್ಲಿ ಉಳಿದ ರಸ್ತೆಯನ್ನು ಪೂರ್ಣಗೊಳಿಸಲಾಗುವುದು’ ಎಂದು ಶಾಸಕ ಈ. ತುಕಾರಾಂ ನುಡಿದರು.

ವಿವಿಧ ಗ್ರಾಮಗಳಲ್ಲಿ ಅಂದಾಜು ₹17.91 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಚೋರುನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲ್ಲೂಕಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರಾಗಿದೆ. ಹಿಂದುಳಿದ ತಾಲ್ಲೂಕೆಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದ ತಾಲ್ಲೂಕು ಅಭಿವೃದ್ಧಿಯತ್ತ ಸಾಗಿದೆ ಎಂದು ತಿಳಿಸಿದರು.

ಆರಂಭವಾದ ಕಾಮಗಾರಿಗಳು: 17–18ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಅನುದಾನ ಅಂದಾಜು ₹ 10 ಕೋಟಿ ವೆಚ್ಚದಲ್ಲಿ ಯಶವಂತನಗರ ಗ್ರಾಮದಿಂದ ಸ್ವಾಮಿಹಳ್ಳಿಯವರೆಗೆ ಒಟ್ಟು 13 ಕಿ.ಮೀ. ರಸ್ತೆಯ ಡಾಂಬರೀಕರಣ, ₹1.90 ಕೋಟಿ ವೆಚ್ಚದಲ್ಲಿ ಚೋರುನೂರು ಗ್ರಾಮದಿಂದ ದೊಡ್ಡ ಉಪ್ಪಾರಹಳ್ಳಿಯವರೆಗಿನ ರಸ್ತೆ, 17–18ನೇ ಸಾಲಿನ ಎಸ್‌ಡಿಪಿ ಯೋಜನೆ ಅಡಿಯಲ್ಲಿ ಚೋರುನೂರು ಗ್ರಾಮದಲ್ಲಿ ಅಂದಾಜು ವೆಚ್ಚ ₹ 99 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ, 17–18ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ಅನುದಾನ ₹ 50 ಲಕ್ಷದಲ್ಲಿ ಚೋರುನೂರು ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

17–18ನೇ ಸಾಲಿನ ಎಚ್‌ಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹ 1.08 ಕೋಟಿ ವೆಚ್ಚದಲ್ಲಿ ವಡೇರಹಳ್ಳಿಯಿಂದ ತಾಲ್ಲೂಕಿನ ಗಡಿಯವರೆಗೆ ಒಟ್ಟು ಐದು ಕಿ.ಮೀ ಗಳ ರಸ್ತೆ ಡಾಂಬರೀಕರಣ, 16–17ನೇ ಸಾಲಿನ ಆರ್‌ಡಿಪಿಆರ್ ಇಲಾಖೆ ಅನುದಾನ ₹ 1.04 ಕೋಟಿ ವೆಚ್ಚದಲ್ಲಿ ವಡ್ಡಿನಕಟ್ಟೆ ಗ್ರಾಮದಲ್ಲಿ ರಸ್ತೆ ಡಾಂಬರಿಕರಣ ಹಾಗೂ 16–17ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಅನುದಾನ ₹2.40 ಕೋಟಿ ವೆಚ್ಚದಲ್ಲಿ ವಡ್ಡಿನಕಟ್ಟೆ ಹತ್ತಿರದ ಕಿತ್ತೂರುರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಹೆಚ್ಚುವರಿ ಶಿಕ್ಷಕರ ವಸತಿ ಗೃಹಗಳ ನಿರ್ಮಾಣ.

ಜಿಲ್ಲಾ ಪಂಚಾಯ್ತಿ ಸದಸ್ಯೆ ನೇತ್ರವತಿ ಕರಿಬಸಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಫರ್ಜಾನಾ ಗೌಸ್ ಅಜಂ, ಉಪಾಧ್ಯಕ್ಷೆ ಗಂಗೂಬಾಯಿ ಚಂದ್ರನಾಯ್ಕ, ಸದಸ್ಯ ಹನುಮಂತಪ್ಪ, , ಎ.ಪಿ.ಎಂ.ಸಿ ಅಧ್ಯಕ್ಷ ಭುವನೇಶ್ ಮೇಟಿ, ಗ್ರಾ.ಪಂ. ಅಧ್ಯಕ್ಷರಾದ ಪುಷ್ಪಲತಾ ಹಾಗೂ ಗಂಗಮ್ಮ , ಮುಖಂಡರಾದ ಹನುಮಂತಪ್ಪ, ನಾಗರಾಜ, ಓ.ಇ. ಚಂದ್ರಪ್ಪ, ನಾಗೇನಹಳ್ಳಿ ಮಂಜುನಾಥ, ಹುಲಿಕುಂಟೆಪ್ಪ, ಮಹಮ್ಮದ್, ಮಾರೆಣ್ಣ, ನಾಗರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT