ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಮಕ್ಕಳ ಕಲರವ

Last Updated 15 ನವೆಂಬರ್ 2017, 8:36 IST
ಅಕ್ಷರ ಗಾತ್ರ

ಧಾರವಾಡ: ನಗರ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಹಾಗೂ ಸರ್ಕಾರೇತರ ವಿವಿಧ ಸಂಘ, ಸಂಸ್ಥೆಗಳಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಕ್ಕಳ ದಿನ ಆಚರಿಸಲಾಯಿತು.

ಎನ್‌ಟಿಎಸ್‌ಎಸ್‌ ಪಿಯು ಕಾಲೇಜು: ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿ ಸಲಾ ಯಿತು. ಉಪನ್ಯಾಸಕ ವೀರಣ್ಣ ಒಡ್ಡೀನ, ಕಾಲೇಜಿನ ಪ್ರಾಚಾರ್ಯ ಮಂಜುನಾಥ ಹಗೇದಾರ, ರಾಘವೇಂದ್ರ ನರಗುಂದ, ವಿಜಯಲಕ್ಷ್ಮಿ ಪಾಟೀಲ, ಶಮಾ ಹನಮಂತಕರ, ದೀಪ್ತಿ ಕಲಾಲ, ಬಸವರಾಜ, ದೀಪಾ, ಯುವರಾಜ, ಪ್ರವೀಣ, ನೀರ್ಮಲಾ, ಅನುರಾಧ ಆರಾಧ್ಯಮಠ ಇದ್ದರು.

ಬಾಸೆಲ್ ಮಿಶನ್ ಪ್ರಾಯೋಗಿಕ ಪಾಠಶಾಲೆ: ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಸಾರ್ವಜನಿಕರ ಗಮನ ಸೆಡಳೆದರು. ಹೆಬಿಕ್ ಸ್ಮಾರಕ ಸಭೆಯ ಸಭಾಪಾಲಕ ರೇ.ಜಿ.ನಂದಕುಮಾರ, ವಿಲ್ಸನ್ ಮೈಲಿ, ಎಂ.ಬಿ. ಗುಂಜಾಳ, ಆರ್. ಸಿ. ಗೋಕಾವಿ ಇದ್ದರು.

ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್: ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು. ಮಕ್ಕಳು ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದರು.

ಸಾಲಿಮಠ ಆಂಗ್ಲ ಮಾಧ್ಯಮ ಶಾಲೆ: ತಾಲ್ಲೂಕಿನ ಮನಸೂರು ಗ್ರಾಮದ ಬಳಿ ಇರುವ ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಮನಸೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರುಕ್ಮೀಣಿ ತೇಗೂರು, ನಿಂಗಪ್ಪ ತೇಗೂರು, ಸಂಸ್ಥೆಯ ಅಧ್ಯಕ್ಷ ಸಿದ್ದೇಶ್ವರ ಸಾಲಿಮಠ, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಯಾವಗಲ್ಲ, ಡಿ.ವಿ. ಕುಲಕರ್ಣಿ, ಸುರೇಶ ಹಂಜಿರವರ, ಗೌರಿ ಹಂಚಿನಾಳ, ಗೀತಾ ನವಲೂರ, ನಾಗರತ್ನಾ ಅಂಗಡಿ ಇದ್ದರು. ಕಾರ್ಯಕ್ರಮಕ್ಕೂ ಮೊದಲು ಮಕ್ಕಳು ಹಾಗೂ ಶಿಕ್ಷಕರಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಮನರಂಜನೆ ಸ್ಪರ್ಧೆಯಲ್ಲಿ ವಿವಿಧ ವೇಷಭೂಷಣ ಧರಿಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT