ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣದಲ್ಲಿ ಹೀಗೊಂದು ಪರಿಸರ ಸ್ನೇಹಿ ಪೊಲೀಸ್ ಠಾಣೆ

Last Updated 15 ನವೆಂಬರ್ 2017, 8:41 IST
ಅಕ್ಷರ ಗಾತ್ರ

ರೋಣ: ರೋಣ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮ ಠಾಣೆಯನ್ನು ಜನ ಸ್ನೇಹಿಯಾಗಿಸುವ ಜತೆ ಪರಿಸರ ಸ್ನೇಹಿಯಾಗಿಸಲು ಶ್ರಮಿಸುತ್ತಿದ್ದು, ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಪಟ್ಟಣದ ಗದಗ ರಸ್ತೆಗೆ ಹೊಂದಿಕೊಂಡಿರುವ 4 ಎಕರೆ 1 ಗುಂಟೆ ವಿಶಾಲ ಜಾಗವನ್ನು ಹೊಂದಿರುವ ಪೊಲೀಸ್ ಠಾಣೆ ಆವರಣದಲ್ಲಿ ಸುಮಾರು 250ಕ್ಕೂ ಹೆಚ್ಚು ವಿವಿಧ ತಳಿಯ ಮರಗಳನ್ನು ಬೆಳೆಸಿದ್ದು, ಅವುಗಳಲ್ಲಿ ಮಾವು, ಚಿಕ್ಕು, ಬೇವು, ತೆಂಗು ಸೇರಿ ಹಲವು ಜಾತಿಯ ಮರಗಳು ಸೇರಿವೆ. ಅವುಗಳಲ್ಲಿ ಕೆಲ ಮರಗಳು ನೆರಳು ಒದಗಿಸಿದರೆ ಇನ್ನೂ ಕೆಲ ಮರಗಳು ಹಣ್ಣು ನೀಡುತ್ತಿವೆ. ಠಾಣೆಯ ಸಿಬ್ಬಂದಿ ಈ ಎಲ್ಲ ಮರಗಳನ್ನು ತಮ್ಮ ಸ್ವಂತ ಹಣದಲ್ಲಿ ನೆಟ್ಟು ಬೆಳೆಸಿರುವುದು ವಿಶೇಷ. ಮರಗಳಿಗೆ ಹನಿ ನೀರಾವರಿ ಮೂಲಕ ನೀರು ಒದಗಿಸಲಾಗುತ್ತಿದೆ.

ಠಾಣೆಯ ಪಿಎಸ್ಐ ವಿಶ್ವನಾಥ ರೋಣ ಹಾಗೂ ಸಿಬ್ಬಂದಿ ಪರಿಸರ ಪ್ರೇಮ ಮೆಚ್ಚಲೇಬೇಕು. ಠಾಣೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅವರು ನೆರಳು ಒದಗಿಸಿದ್ದಾರೆ. ಠಾಣೆಯ ಪರಿಸರವನ್ನು ಹಸಿರಾಗಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಶಿವಪ್ಪ ಕರಲಿಂಗನವರ ಪ್ರಶಂಸಿಸಿದರು.

‘ರೋಣ ಠಾಣೆಯ ಪಿಎಸ್ಐ ವಿಶ್ವನಾಥ ಚೌಗಲೆ ಒಬ್ಬ ಉತ್ತಮ ಅಧಿಕಾರಿ. ಅವರ ಹಾಗೂ ಆ ಠಾಣೆಯ ಸಿಬ್ಬಂದಿಯ ಪರಿಸರ ಪ್ರೇಮ ಪ್ರಶಂಸಾರ್ಹ. ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಸೂಚನೆ ನೀಡದಿದ್ದರೂ ಅವರೇ ಮುತವರ್ಜಿ ವಹಿಸಿ ಪರಿಸರ ರಕ್ಷಣೆಗೆ ಮುಂದಾಗಿರುವುದು ಉತ್ತಮವಾದುದು.

ಅವರ ಪರಿಸರ ಪ್ರೇಮಕ್ಕೆ ಇಲಾಖೆಯಿಂದ ಧನ್ಯವಾದ. ಈ ಕ್ರಮವನ್ನು ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ಅಳವಡಿಸಲು ಸೂಚನೆ ನೀಡುತ್ತನೆ’ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT