ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

Last Updated 15 ನವೆಂಬರ್ 2017, 9:16 IST
ಅಕ್ಷರ ಗಾತ್ರ

ಹೊನ್ನಾವರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

‘ಅಡುಗೆ ಅನಿಲ ದರ ಇಳಿಕೆ ಮಾಡಬೇಕು. ಅಡಿಕೆ- ಮತ್ತು ತೆಂಗಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ವಿಮೆ ಪರಿಹಾರ ನೀಡುವಲ್ಲಿ ಇರುವ ಲೋಪದೋಷ ಸರಿಪಡಿಸಬೇಕು. ಅತಿಕ್ರಮಣ ಜಾಗ ಮಂಜೂರಿ ಮಾಡಿ ಅವರ ಹೆಸರನ್ನು ಪಹಣಿಯ 9ನೇ ಕಾಲಂನಲ್ಲಿ ಸೇರಿಸಬೇಕು. ಕಾಸರಕೋಡ ಟೊಂಕಾ ಅಳಿವೆಯ ಹೂಳೆತ್ತಿ ತಡೆಗೋಡೆ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ ಮುಖಂಡರಾದ ಗಣಪಯ್ಯ ಗೌಡ, ರಾಜು ನಾಯ್ಕ, ಜಿ.ಎನ್.ಗೌಡ, ಬಿ.ಆರ್.ನಾಯ್ಕ, ಇನಾಯಿತ್‌ ಉಲ್ಲಾ ಶಾಬಂದ್ರಿ, ಸುಬ್ರಾಯ ಗೌಡ, ಪಿ.ಟಿ.ನಾಯ್ಕ, ಟಿ.ಟಿ.ನಾಯ್ಕ, ತಿಮ್ಮಪ್ಪ ಮೇಸ್ತ ಹಾಜರಿದ್ದರು.

ವಿ.ಆರ್.ಭಟ್ ಮಕ್ಕಿ 'ಶ್ರೀ ರಾಮನವಮಿ' ಕೃತಿಯಲ್ಲಿನ ಭಕ್ತಿಗೀತೆಗಳನ್ನು ಹಾಡಿದರು. ಸುಬ್ರಹ್ಮಣ್ಯ ಹೆಗಡೆ ನಿರೂಪಿಸಿದರು. ಡಾ.ಜಿ.ಎಸ್.ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT