ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಷಭೂಷಣಗಳಲ್ಲಿ ಸಂಭ್ರಮಿಸಿದ ಚಿಣ್ಣರು

Last Updated 15 ನವೆಂಬರ್ 2017, 9:29 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್‌ವ್ಹೀಲ್‌, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಆಶ್ರಯದಲ್ಲಿ ನಗರದ ಬಾಲಭವನದಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆಯಲ್ಲಿ ಚಿಣ್ಣರು ಹಾಡಿ, ನೃತ್ಯ ಮಾಡಿ ಸಂಭ್ರಮಿಸಿದರು.

ವಿದ್ಯಾರ್ಥಿ ಆಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಜವಾಹರಲಾಲ್ ನೆಹರೂ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಮಕ್ಕಳು ಕೂಡ ಭವಿಷ್ಯದಲ್ಲಿ ದೇಶಕ್ಕೆ ನೆಹರೂ ಅವರಂತೆ ಹೆಚ್ಚಿನದ್ದನ್ನು ನೀಡಲು ಶ್ರಮಿಸಬೇಕು’ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ನಿರ್ದೇಶಕಿ ವಸಂತಿ ಪೊನ್ನಪ್ಪ ಕರೆ ನೀಡಿದರು.

ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಮಾತನಾಡಿ, ‘ಮಕ್ಕಳಿಗೆ ಇಂತಹ ವೇದಿಕೆಗಳು ದೊರೆಯುವುದರಿಂದ ಸಂಕೋಚದ ಭಾವನೆ ಬಿಟ್ಟು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ’ ಎಂದು ಹೇಳಿದರು. ಸರಸ್ವತಿ ನಾಯಕ್, ಲಯನೆಸ್ ಕ್ಲಬ್ ಅಧ್ಯಕ್ಷೆ ಕನ್ನಂಡ ಕವಿತಾ ಮಾತನಾಡಿದರು. ಇದೇ ವೇಳೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರ ವಿವರ ಈ ಕೆಳಕಂಡಂತೆ ಇದೆ.

ಹಸಿರು ಗುಂಪು: ಬಿಟ್ಟಂಗಾಲ ದೇವಯ್ಯ ಮೆಮೊರಿಯಲ್ ಶಾಲೆಯ ದಿಗಂತ್ ಗೌಡ (ಪ್ರ), ಮಡಿಕೇರಿ ಸೇಂಟ್‌ ಮೈಕಲರ ಆಂಗ್ಲ ಮಾಧ್ಯಮ ಶಾಲೆಯ ಬಿ.ಆರ್. ತನಿಷಾ ಶೆಟ್ಟಿ (ದ್ವಿ), ಭಾರತೀಯ ವಿದ್ಯಾಭವನದ ಕುನಾಲ್ ಪ್ರಸಾದ್(ತೃ)ಸ್ಥಾನ ಪಡೆದುಕೊಂಡರು. ಎನ್.ಅದಿತ್ ಅನ್ವಿ, ಅಭಿನವ್, ಅರುಷ್ ಹಾಗೂ ಸಹನಾ ಬಾನು ಸಮಾಧಾನಕರ ಬಹುಮಾನ.

ಬಿಳಿ ಗುಂಪು : ಮಡಿಕೇರಿ ಜವಾಹರ್ ನವೋದಯ ವಿದ್ಯಾಲಯದ ಕೆ.ಕೆ.ಹವ್ಯಾಸ್ (ಪ್ರ), ಪಿ.ಮೋಕ್ಸ್(ದ್ವಿ), ಸಿ.ಟಿ.ಶ್ರೇಯಸ್ಸ್(ತೃ), ಚಿಕ್ಕೇಗೌಡ, ಪ್ರಣವ್ ಆರ್. ಆಚಾರ್ಯ, ಸಾತ್ವಿಕ್, ಕೆ.ಎಂ. ಪ್ರತೀಕ್ಷಾ ಸಮಾಧಾನಕರ ಬಹುಮಾನ.

ನೀಲಿ ಗುಂಪು: ಭಾರತೀಯ ವಿದ್ಯಾಭವನದ ಆರ್ಯ (ಪ್ರ), ಕೆ.ಎ. ರುಚಿ (ದ್ವಿ), ಸಂಜೀವ್ ಭಗತ್ (ತೃ), ಎಸ್.ಪಿ. ಸುಮುಖ್, ಎಂ.ಕೆ. ಸಹಮ್, ಎಂ.ಯು. ಲಕ್ಷ್ಮಿ, ಸಿಂಚನಾ ಸಮಾಧಾನಕರ.

ಮಕ್ಕಳ ಸಡಗರ
ಮಡಿಕೇರಿ: ನಗರದ ಯೂರೋ ಕಿಡ್ಸ್ ಮತ್ತು ಪಬ್ಲಿಕ್‌ ಸ್ಕೂಲ್‌ನಲ್ಲೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಛದ್ಮವೇಷ ಸ್ಪರ್ಧೆ, ದೇಶಭಕ್ತಿಗೀತೆ ಹಾಗೂ ಜಾನಪದ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಶಿಕ್ಷಕರು, ಗಾಯನ ಹಾಗೂ ನೃತ್ಯ ಪ್ರಸ್ತುತ ಪಡಿಸಿ ಮಕ್ಕಳನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT