ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪ್ರೇಮ ಮೆರೆದ ಬಿಸಿಯೂಟ ಸಿಬ್ಬಂದಿ

Last Updated 15 ನವೆಂಬರ್ 2017, 9:43 IST
ಅಕ್ಷರ ಗಾತ್ರ

ಹನುಮಸಾಗರ: ‘ಮಕ್ಕಳ ದಿನಾಚರಣೆಯ ಹಿಂದೆ ಮಕ್ಕಳ ಅಭಿವೃದ್ಧಿಗೆ ಸಂಬಂಧಪಟ್ಟ ಜಾಗೃತಿ, ಉದ್ದೇಶ, ಗುರಿಗಳಿದ್ದು ಅವುಗಳು ಸಾಕಾರಗೊಳ್ಳಲು ಶಿಕ್ಷಕರು, ಪಾಲಕರು ಶ್ರಮಿಸಬೇಕು’ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ವಿಠಲ್‌ ಶ್ರೇಷ್ಠಿ ನಾಗೂರ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜವಾಹರ ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶಿಕ್ಷಕಿ ರೋಹಿಣಿ ಜ್ಯೋತಿ ಮಾತನಾಡಿ, ‘ಮಕ್ಕಳು ಉತ್ತಮ ಶಿಕ್ಷಣ ಪಡೆದು ಪಾಲಕರ ಆಶಯಗಳನ್ನು ಈಡೇರಿಸಬೇಕು’ ಎಂದು ಹೇಳಿದರು.

ಮುಖ್ಯಶಿಕ್ಷಕ ಮಹಾಂತೇಶ ಅರಳಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ರವೀಂದ್ರ ಕೊನಸಾಗರ ಕಾರ್ಯಕ್ರಮ ಉದ್ಘಾಟಿಸಿದರು. ವಿಶಾಲ ರಾಯಬಾಗಿ, ಸಂತೋಷ ಬಸವಾ, ಚನ್ನಬಸವ ಕನಕಗಿರಿ, ಪರಶುರಾಮ ಗುಡಿಗದ್ದಿ, ಸಂತೋಷ, ಮಹಾಂತೇಶ ಗೋನಾಳ, ಮಹ್ಮದ್ ಅಲಿ ಅತ್ತಾರ, ಸುಮಂಗಲಾ ತರಿಕೇರಿ, ಗೀತಾ ದೇವಾಂಗಮಠ, ರಾಜಾಭಕ್ಷಾರ ಪೆಂಡಾರಿ, ಬಾಳಪ್ಪ ಗುಡಿಗದ್ದಿ, ಬಸಮ್ಮ, ಎನ.ಎಸ್.ಹೂಲಗೇರಿಇದ್ದರು.

ಬಿಸಿಯೂಟದ ಸಿಬ್ಬಂದಿ ನಂದಮ್ಮ ಮಜ್ಜಗಿ, ಯಮನಮ್ಮ ತಳವಾರ, ಅಕ್ಕಮ್ಮ, ಲಕ್ಷ್ಮವ್ವ ವಿದ್ಯಾರ್ಥಿಗಳಿಗೆ ಬಿಸಿಯೂಟದ ತಟ್ಟೆ ಹಾಗೂ ಲೋಟಗಳನ್ನು ಉಚಿತವಾಗಿ ನೀಡಿದರು. ನಂತರ ಮಕ್ಕಳಿಗೆ ಹಾಲು ಕುಡಿಸಿ ಮಾತೃ ಪ್ರೇಮ ಮೆರೆದರು.

ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ: ಇಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮುಖ್ಯಶಿಕ್ಷಕರಾದ ಮಹೇಶ ಮಠಪತಿ, ಶರಣಪ್ಪ ಚಿನಿವಾಲರ, ಶಿಕ್ಷಕರಾದ ಚಂದ್ರಶೇಖರ ವಸ್ತ್ರದ, ಬಸವರಾಜ ಚೌಡಾಪೂರ, ಚಂದ್ರಕಲಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮೀ ಸಜ್ಜನ, ಶಿಲ್ಪಾ ಕಂಪ್ಲಿ, ಮಂಜುಳಾ ಅಮಲಿಕೊಪ್ಪ, ವಾಣಿಶ್ರೀ ಸಿನ್ನೂರ, ರೇಣುಕಾ ಬಾಳಿಹಳ್ಳಿಮಠ, ಸುಶೀಲಾ ಕಾಟಾಪೂರ, ರಮೇಶಬಾಬು ಕೋರಿ, ಈರಣ್ಣ ಅಂಗಡಿ, ಕೃಷ್ಣಮೂರ್ತಿ ಕುಲಕರ್ಣಿ ಇದ್ದರು.

ಗುಡದೂರಕಲ್: ಸಮೀಪದ ಗುಡದೂರಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ವೇದಿಕೆಯ ಮೇಲೆ ಶಾಲಾ ಮಂತ್ರಿಮಂಡಲದ ಸದಸ್ಯರು ಅತಿಥಿಗಳಾಗಿದ್ದರು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ಪ್ರಧಾನಮಂತ್ರಿ ಮಹಾದೇವಿ ಮೇಟಿ ಮಾತನಾಡಿದರು. ಮುಖ್ಯಶಿಕ್ಷಕ ರಾಮಣ್ಣ, ಕಂಠಿಬಸವ ಮೇರನಾಳ, ದ್ಯಾಮಣ್ಣ ಗೊಲ್ಲರ, ಗಂಗಪ್ಪ ಜಾಲಿಹಾಳ ಇದ್ದರು. ನಾರಾಯಣ ಹಾಲಿವಾಣದ ಸ್ವಾಗತಿಸಿದರು. ಶಂಕರಪ್ಪ ಉಪ್ಪಾರ ನಿರೂಪಿಸಿ, ವೀರೇಶ ಕೊಪ್ಪಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT