ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕಲ್ಪಿಸಲು ಒತ್ತಾಯ

Last Updated 15 ನವೆಂಬರ್ 2017, 10:04 IST
ಅಕ್ಷರ ಗಾತ್ರ

ರಾಯಚೂರು: ಜನಸಂಖ್ಯೆ ಆಧಾರಿತವಾಗಿ ಬೇರೆ ರಾಜ್ಯಗಳಲ್ಲಿ ಮೀಸಲಾತಿ ಒದಗಿಸಿದ ರೀತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಕರ್ನಾಟಕದಲ್ಲೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 7.5 ಮೀಸಲಾತಿ ಒದಗಿಸಬೇಕು ಎಂದು  ಮಹರ್ಷಿ ವಾಲ್ಮೀಕಿ ಎಸ್‌.ಟಿ.ಫೋರಂ ರಾಯಚೂರು ಘಟಕದ ಅಧ್ಯಕ್ಷ ಗುರುಸ್ವಾಮಿ ಗಾಣಧಾಳ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 371 (ಜೆ) ಅನ್ವಯಿಸಿ ಜನಸಂಖ್ಯಾಧಾರಿತವಾಗಿ ಶೇ 13 ರಷ್ಟು ಮೀಸಲಾತಿ ಜಾರಿಗೊಳಿಸಬೇಕು. ಮೀಸಲಾತಿ ಕಲ್ಪಿಸುವ ಸಂಬಂಧವಾಗಿ ಬೆಳಗಾವಿ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮಂಡಿಸಬೇಕು. ಬೇಡಕೆಗಳನ್ನು ಎಂದು ಹೇಳಿದರು.

ಫೋರಂ ಪದಾಧಿಕಾರಿಗಳಾದ ಗೋವಿಂದ ನಾಯಕ ಉಡಮಗಲ್‌, ರಾಮಪ್ಪ ನಾಯಕ ಮಲಿಯಾಬಾದ್, ರವೀಂದ್ರ ನಾಯಕ ಗುಂಜಹಳ್ಳಿ, ಬೀಮೇಶ ನಾಯಕ ಅಲ್ಕೂರು, ಈರಪ್ಪ ನಾಯಕ ಸಿಂಗನೋಡಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT