ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಮಾರಸ್ವಾಮಿ ಮುಂದಿನ ಸಿಎಂ’

Last Updated 15 ನವೆಂಬರ್ 2017, 10:13 IST
ಅಕ್ಷರ ಗಾತ್ರ

ಮರಳವಾಡಿ (ಕನಕಪುರ): ಕರ್ನಾಟಕ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ರಾಜ್ಯದ ಜನರು ಬದಲಾವಣೆ ಬಯಿಸಿದ್ದು ಜೆ.ಡಿ.ಎಸ್‌. ಅಧಿಕಾರಕ್ಕೆ ಬರಲಿದ್ದು ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಜೆ.ಡಿ.ಎಸ್‌.ನ ಯುವನಾಯಕ ಪ್ರಜ್ವಲ್‌ರೇವಣ್ಣ ಹೇಳಿದರು.

ತಾಲ್ಲೂಕಿನ ಮರಳವಾಡಿ ಗ್ರಾಮದಲ್ಲಿ ಪಕ್ಷದ ಯುವ ಕಾರ್ಯ ಕರ್ತರ ಒತ್ತಾಯದ ಮೇರೆಗೆ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ತುರ್ತು ಏರ್ಪಡಿಸಿದ್ದ ಸಭೆ ಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಕುರಿತು ಮಾತನಾಡಿದರು.

‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದಲ್ಲಿ ಪ್ರತಿ ಮನೆಗೂ ಕುಮಾರಣ್ಣ ಮಾಡಿರುವ ಉತ್ತಮ ಆಡಳಿತ ತಿಳಿಸಿ ಈ ಭಾರಿ ಪಕ್ಷಕ್ಕೆ ಹೆಚ್ಚಿನ ಶಕ್ತಿತುಂಬಿ ಬಹುಮತದೊಂದಿಗೆ ಗೆಲ್ಲಿಸ ಬೇಕೆಂದು ಮನವಿ ಮಾಡಿದರು.

ಮರಳವಾಡಿ ಹೋಬಳಿ ಹಿರಿಯ ಮುಖಂಡ ಭೈರೇಗೌಡ ಮಾತನಾಡಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಪಕ್ಷದ ಹಿರಿಯ ಮುಖಂಡರಾದ ತಮ್ಮಯ್ಯಣ್ಣ, ಶಂಕರ್‌, ವೈ.ಎಸ್. ಅಶೋಕ್, ರ್ಯಾಮತ್‌ಉಲ್ಲಾ, ಪುಟ್ಟರಾಜು, ಯುವ ಮುಖಂಡರಾದ ಕೃಷ್ಣ, ಚಂದ್ರಶೇಖಕರ್, ಕಿರಣ್, ಶಿವ ಶಂಕರ್, ಅಭೀಷೇಕ್, ನರಸಿಂಹ, ನಾರಾಯಣ್, ಸತೀಶ್, ರಾಜು, ಚಲುವರಾಜು, ಮಹೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT