ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹಿಗಳಿಗೆ ‘ಹಸಿರು ಗ್ರೋ ಕಿಟ್’

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಪರಿಸರದ ಕಾಳಜಿ ಬೆಳೆಸುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ‘ಹಸಿರು ಆರ್ಗ್ಯಾನಿಕ್ಸ್’ ಸಂಸ್ಥೆ  ನೂತನ ‘ಹಸಿರು ಗ್ರೋಕಿಟ್’ ಅನ್ನು ಸಿದ್ಧಪಡಿಸಿದೆ. ಗಿಡಗಳು ಬೀಜದಿಂದ ಕೊಯ್ಲಿನವರೆಗೂ ಬೆಳೆಯುವ ಹಂತಗಳನ್ನು ಮಕ್ಕಳು ಗಮನಿಸಲು ಮತ್ತು ಕಲಿಯಲು ಈ ಕಿಟ್‌ ಸಹಾಯ ಮಾಡುತ್ತದೆ. ಪ್ರಗತಿಪರ ಕೃಷಿಕರಾಗಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಸಮೀಪದ ಬಿ.ಸಿ.ಅರವಿಂದ ಭೂತನಕಾಡು ಅವರು ಇದನ್ನು ಸಿದ್ಧಪಡಿಸಿದ್ದಾರೆ.

ಏನೇನು ಇದೆ: 14x18 ಸೆ.ಮೀ. ಸುತ್ತಳತೆಯ ಬಾಕ್ಸ್‌, ನಾಲ್ಕು ಸ್ಟಿಕರ್‌, 300 ಗ್ರಾಂನ ಸಾವಯವ ಗೊಬ್ಬರ ಮಿಶ್ರಣ, ಸೂಕ್ಷ್ಮ ದ್ರವ ಪೋಷಕಾಂಶ, 2 ಪ್ಯಾಕ್‌ ಸಾವಯವ ತರಕಾರಿ ಬೀಜಗಳು ಹಾಗೂ ಸಸಿಯ ಬೆಳವಣಿಗೆಯನ್ನು ದಾಖಲಿಸಲು ಒಂದು ಟ್ರ್ಯಾಕರ್ ಕಾರ್ಡ್‌ ಇದೆ.

ವಿಭಿನ್ನ ವಿನ್ಯಾಸದ ಕಾರ್ಡ್‌ನಲ್ಲಿ ಮಗು ಬೀಜ ನೆಟ್ಟ ದಿನ, ಮೊಳಕೆ ಬಂದ ದಿನ, ಯಾವಾಗ ಕೊಯಿಲು ಮಾಡಿದ್ದು ಹೀಗೆ ಗಿಡದ ಎಲ್ಲ ಬೆಳವಣಿಗೆಯ ಹಂತವನ್ನು ಮಗು ಇಲ್ಲವೇ ಪೋಷಕರು ನಮೂದಿಸಬೇಕು.

ಆಗ ಎಷ್ಟು ದಿನ ಮೊಳಕೆಯೊಡೆಯಲು ಹಿಡಿದಿದೆ ಎಂಬುದು ತಿಳಿಯುತ್ತದೆ. ಮೊದಲ ಎಲೆ ಬಿಟ್ಟಿದ್ದು, ಮೊದಲ ಬಾರಿಗೆ ಮೈಕ್ರೊ ನ್ಯೂಟ್ರಿಯಂಟ್‌ ಕೊಟ್ಟ ದಿನ ದಾಖಲಿಸಬೇಕು.ಇದರಿಂದ ಪ್ರತಿಹಂತದಲ್ಲಿ ಗಿಡದ ಬೆಳವಣಿಗೆಗೆ ಎಷ್ಟು ದಿನ ಹಿಡಿಯಿತು ಎಂಬುದು ತಿಳಿಯುತ್ತದೆ.

ಬಳಕೆ ಮಾಡುವುದು ಹೇಗೆ: ಕಿಟ್‌ ಅನ್ನು ಜಾಗರೂಕತೆಯಿಂದ ತೆರೆಯಬೇಕು. ನಂತರ ಅದರೊಳಗಿರುವ ಎಲ್ಲಾ ವಸ್ತುಗಳನ್ನು ಹೊರಗಿಡಬೇಕು. ‘ರೆಡಿ ಟು ಪ್ಲಾಂಟ್‌ ಮಿಕ್ಸ್’ ಅನ್ನು ಟ್ರೇಗೆ ಸುರಿಯಬೇಕು. ಆನಂತರ ನೀರನ್ನು ನಿಧಾನವಾಗಿ ಸಿಂಪಡಿಸಬೇಕು. ಒಂದು ಸೆ.ಮೀ. ಆಳದಲ್ಲಿ ಬೀಜವನ್ನು ನೆಡಬೇಕು. ಪ್ಲಾಂಟ್‌ ಮಿಕ್ಸ್‌ ಅನ್ನು ಅದರ ಮೇಲೆ ಹಾಕಬೇಕು. ಟ್ರೇ ಅನ್ನು ಗಾಳಿಯಾಡುವ ಮತ್ತು ಸೂರ್ಯನ ಬೆಳಕು ಬೀಳುವ ಜಾಗದಲ್ಲಿ  ಇರಿಸಬೇಕು. ಎರಡು ದಿನ ಇಲ್ಲವೇ ಪ್ಲಾಂಟ್‌ ಮಿಕ್ಸ್‌ ಒಣಗಿದೆ ಎಂದು ಕಾಣಿಸಿದಾಗ ನೀರು ಸಿಂಪಡಿಸುತ್ತಿರಬೇಕು. ಬೀಜದಿಂದ ಮೊಳಕೆ ಒಡೆದು ಮಣ್ಣಿನಿಂದ ಹೊರಬಂದ ನಂತರ ಸೂಕ್ಷ್ಮ ದ್ರವ ಪೋಷಕಾಂಶವನ್ನು ಏಳು ದಿನಗಳಿಗೊಮ್ಮೆ ಹಾಕಬೇಕು.

ಮಕ್ಕಳಲ್ಲಿ ಕುತೂಹಲ ಮೂಡಿಸಿದೆ: ‘ನಾವು ಹಸಿರು ಆರ್ಗ್ಯಾನಿಕ್ಸ್‌’ನ ಫೇಸ್‌ಬುಕ್‌ ಪೇಜ್‌ ನೋಡ್ತಾ ಇರ್ತೀವಿ. ಹಾಗೆ ಒಮ್ಮೆ ನೋಡುವಾಗ ಈ ಗ್ರೀನ್‌ ಗ್ರೋ ಕಿಟ್‌ ಬಗ್ಗೆ ತಿಳಿಯಿತು. ನಂತರ ಅಮೇಜಾನ್‌ನಲ್ಲಿ ತರಿಸಿಕೊಂಡೆವು. ನನ್ನ ಮಗ 5ನೇ ತರಗತಿ ಓದುತ್ತಾನೆ.  ಬೀಜ ಬಿತ್ತಿದ್ದ ದಿನದಿಂದ ಆತನಿಗೆ ಕುತೂಹಲವಿತ್ತು. ಯಾವಾಗ ಮೊಳಕೆ ಬರುತ್ತೆ. ಅದು ಹೇಗೆ ಬೆಳೆಯುತ್ತೆ  ಎಂಬ ಬಗ್ಗೆ ಅವನೇ ನೋಡುತ್ತಾ ಇದ್ದ. ಮಕ್ಕಳಲ್ಲಿ ಇದು ಕುತೂಹಲ ಹುಟ್ಟಿಸುತ್ತದೆ’ ಎನ್ನುತ್ತಾರೆ  ಬೆಂಗಳೂರಿನ ಮಲ್ಲೇಶ್ವರದ ಅರ್ಚಿತ್‌ ಎಂಬ ವಿದ್ಯಾರ್ಥಿಯ ತಾಯಿ ಗೌರಪ್ರಭು.

‘ನನ್ನ ಮಗ ಈ ಕಿಟ್‌ ಬಗ್ಗೆ ಕುತೂಹಲದಿಂದಿದ್ದ. ಈಗಂತೂ ಆತ ಬೆಳೆಸಿದ ಸಸಿಯನ್ನೇ ದಿನವೂ ನೋಡುತ್ತಿರುತ್ತಾನೆ. ಮಗನ ಗೆಳೆಯರಿಗೆ ಈ ಕಿಟ್‌ ಪರಿಚಯ ಮಾಡಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ ಸೌರಭ್‌ ಅಜಯ್‌ ಎಂಬ ವಿದ್ಯಾರ್ಥಿಯ ಪೋಷಕರು. ಕಿಟ್‌ ಬಗ್ಗೆ ಮಾಹಿತಿಗಾಗಿ 9148206300 ಸಂಪರ್ಕಿಸಬಹುದು.

*
ಸಸಿ ಬೆಳೆಸುವ ಪ್ರಾಥಮಿಕ ಜ್ಞಾನ (ಚಿತ್ರ ಬಳಸಿ) ತಿನ್ನುವ ತರಕಾರಿ ಎಲ್ಲಿಂದ ಬರುತ್ತದೆ ಎಂಬ ಕಲ್ಪನೆಯೆ ಇಂದಿನ ಮಕ್ಕಳಿಗೆ ಇಲ್ಲವಾಗಿದೆ.  ಸಸ್ಯ ಬೆಳವಣಿಗೆಯ ಮೊಳಕೆಯಿಂದ ಕೊಯ್ಲಿನವರೆಗಿನ ಹಂತಗಳನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಕಿಟ್‌ ಇದಾಗಿದೆ. ಈ ಕಿಟ್‍ನಿಂದ ಮಕ್ಕಳಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಳ್ಳುವ ಗಿಡ ಬೆಳೆಸುವ ಉತ್ಸಾಹ ಮುಂದೊಂದು ದಿನ ಅರಣ್ಯ ಬೆಳೆಸಿ ಸಂರಕ್ಷಿಸುವ ಮನೋಭಾವ ಬೆಳೆದರೂ ಆಶ್ಚರ್ಯವಲ್ಲ. ಈ ಕಿಟ್ ಆಕರ್ಷಕ, ಉಪಯೋಗಿ ಗುಣವುಳ್ಳದ್ದಾಗಿದ್ದು, ಪರಿಸರ ಸ್ನೇಹಿ, ಸಾಮಾಜಿಕ ಕಳಕಳಿ ಒಳಗೊಂಡಿದೆ. ‌‌


–ಬಿ.ಸಿ.ಅರವಿಂದ ಭೂತನಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT