ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ದಿನಗಳ ಕಲಾಪಕ್ಕೆ ₹ 63 ಕೋಟಿ ಖರ್ಚು!

Last Updated 16 ನವೆಂಬರ್ 2017, 6:57 IST
ಅಕ್ಷರ ಗಾತ್ರ

ಬೆಳಗಾವಿ: ಈಗಿನ ಚಳಿಗಾಲದ ಅಧಿವೇಶನ ಹೊರತುಪಡಿಸಿ ಇದುವರೆಗೆ ಬೆಳಗಾವಿಯಲ್ಲಿ ಏಳು ಬಾರಿ ವಿಧಾನಮಂಡಲದ ಅಧಿವೇಶನ ನಡೆದಿದೆ. ಈ ಅವಧಿಯಲ್ಲಿ 60 ದಿನ ಕಲಾಪ ನಡೆದಿದ್ದು, ₹ 63.36 ಕೋಟಿ ವೆಚ್ಚವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯನ್ನು ಬುಧವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅವರು, ‘ಬೆಳಗಾವಿ ಅಧಿವೇಶನದ ಕಲಾಪ ನಡೆಸಲು ಪ್ರತಿದಿನ ಸರಾಸರಿ ಒಂದು ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಿರುವುದು ತೀರಾ ಕಡಿಮೆ’ ಎಂದು ಟೀಕಿಸಿದ್ದಾರೆ.

ಕರದಂಟಿಗೆ ₹77 ಸಾವಿರ: ‘2006ರ ಸೆ.25ರಿಂದ ಐದು ದಿನಗಳ ಕಾಲ ಮೊದಲ ಅಧಿವೇಶನ ನಡೆಯಿತು. ರಸ್ತೆ ಅಭಿವೃದ್ಧಿ, ಸಭಾಭವನ ನಿರ್ಮಾಣ, ಊಟ, ವಾಹನ, ವಾಸ್ತವ್ಯಕ್ಕಾಗಿ ₹5 ಕೋಟಿ ವೆಚ್ಚ ಮಾಡಲಾಗಿತ್ತು. ಕರದಂಟು ಹಾಗೂ ಲಾಡು ಖರೀದಿಸಲು ₹77 ಸಾವಿರ ಖರ್ಚು ಮಾಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಅಧಿವೇಶನ ಸಂದರ್ಭದಲ್ಲಿ ಮಧ್ಯಾಹ್ನದ ಊಟ ಹಾಗೂ ಕುಡಿಯುವ ನೀರಿನ ವೆಚ್ಚದ ಮಾಹಿತಿ ನೀಡಲು ಸಚಿವಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT