ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ: ರೇಣುಕಾಚಾರ್ಯ

Last Updated 16 ನವೆಂಬರ್ 2017, 9:18 IST
ಅಕ್ಷರ ಗಾತ್ರ

ನ್ಯಾಮತಿ: ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ಬಾಲ್ಯದಿಂದಲೇ ಶಾಲೆಗೆ ಹೋಗುವ ಹವ್ಯಾಸವನ್ನು ಪೋಷಕರು ಮಕ್ಕಳಿಗೆ ರೂಢಿಸಬೇಕು ಎಂದು ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.

ಸಮೀಪದ ಬೆಳಗುತ್ತಿ ಗ್ರಾಮದ ಕಾವೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

-ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಬೋಧನೆಯ ಜೊತೆಗೆ ಸಚ್ಚಾರಿತ್ರ ಮಾನವೀಯ ಮೌಲ್ಯಗಳನ್ನು ಕಲಿಸಿದಲ್ಲಿ ವಿದ್ಯಾರ್ಥಿಗಳು ಈ ನಾಡಿನ ಸತ್ಪ್ರಜೆಗಳಾಗಲು ಸಾಧ್ಯ.

ಕೇಂದ್ರ ಸರ್ಕಾರದ ಪ್ರದಾನಿ ನರೇಂದ್ರ ಮೋದಿಯವರು ಶಿಕ್ಷಣದ ಆಧುನೀಕರಣಕ್ಕೆ ಸಾವಿರಾರು ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದು ಜೊತೆಗೆ ಶಿಕ್ಷಣ ಕ್ಷೇತ್ರದ ಅನೇಕ ತಜ್ಞರ ಜೊತೆಗೆ ಸಮಾಲೋಚಿಸಿ ದೇಶದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಲು ಮಹತ್ತರವಾದ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ.

ಮಕ್ಕಳ ಆರೋಗ್ಯ ದೈಹಿಕ ಮತ್ತು ನೈತಿಕ ಶಿಕ್ಷಣದ ಬಗ್ಗೆ ಒಲವು ಮೂಡಿಸಿ, ಮಕ್ಕಳನ್ನು ಬಾಲಕಾರ್ಮಿಕರಾಗದಂತೆ ಶಾಲೆಗೆ ದಾಖಲಾಗುವಂತೆ ದಾಖಲಾದ ಮಕ್ಕಳು ಮದ್ಯದಲ್ಲಿ ಶಾಲೆ ತೊರೆಯದಂತೆ ನೋಡಿಕೊಳ್ಳುವುದು ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದರು.

ತಮ್ಮ ಅವಧಿಯಲ್ಲಿ ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮೋರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ವಾಜಪೇಯಿ, ಹಾಗೂ ಪ್ರಥಮ ದರ್ಜೆ ಕಾಲೇಜು, ಪ್ರೌಢ ಶಾಲೆಗಳು ಶಾಲಾ ಕಟ್ಟಡಗಳು ಹೀಗೆ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು ಎಂದು ಸ್ಮರಿಸಿಕೊಂಡರು.

ಬೆಳಗುತ್ತಿ ಜಿ.ಪಂ ಸದಸ್ಯ ಎಂ.ಆರ್ ಮಹೇಶ್,ಬೆಳಗುತ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ, ಸದಸ್ಯ ಕರಿಬಸಪ್ಪ , ಚನ್ನಬಸಪ್ಪ ಶಾಲಾ ಮುಖ್ಯ ಶಿಕ್ಷಕ ಹರೀಶ್ ಕುಮಾರ್ ಸಹಶಿಕ್ಷಕರಾದ ಪಂಕಜಾ, ಪವಿತ್ರಾ, ನಂದಿನಿ ತಿಪ್ಪೇಶ್ ಕುಮಾರ್ ಜಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT