ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಗಳೂರಿಗೆ ಮುಳುಗಡೆ ಅಪಾಯ ಅಧಿಕ’

ಕರಾವಳಿ ನಗರಕ್ಕೆ ತಟ್ಟಬಹುದು ಜಾಗತಿಕ ತಾಪಮಾನದ ಬಿಸಿ: ನಾಸಾ
Last Updated 16 ನವೆಂಬರ್ 2017, 20:35 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: ‘ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರಮಟ್ಟ ಹೆಚ್ಚಾದಲ್ಲಿ ಮುಳುಗಡೆಯ ಅಪಾಯ ಕರಾವಳಿ ನಗರ ಮಂಗಳೂರಿಗೆ ಹೆಚ್ಚು’ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ– ನಾಸಾ ಹೇಳಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಯಾವ ಹಿಮನದಿ, ಹಿಮಗಲ್ಲುಗಳು ಕರಗಿದರೆ ಯಾವ ನಗರಗಳ ಭಾಗಗಳು ಮುಳುಗುತ್ತವೆ ಎಂಬುದನ್ನು ಲೆಕ್ಕ ಹಾಕುವ ಆನ್‌ಲೈನ್ ಸಿಮ್ಯುಲೇಟರ್‌ ಅನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದೆ. ಈ ಸಿಮ್ಯುಲೇಟರ್ ಅನ್ನು ಬಳಸಿಕೊಂಡು ವಿಶ್ವದ ಯಾವ ನಗರಗಳು ಎಷ್ಟು ಅಪಾಯ ಎದುರಿಸುತ್ತವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

‘ಈ ಸಿಮ್ಯುಲೇಟರ್‌ ನೀಡುವ ಫಲಿತಾಂಶಗಳನ್ನು ಆಧರಿಸಿ ನಗರ ಯೋಜಕರು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ನಗರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸುವಾಗ ಕನಿಷ್ಠ 100 ವರ್ಷದ ಮುಂದಾಲೋಚನೆ ಇರಬೇಕು’ ಎಂದು ನಾಸಾ ಹೇಳಿದೆ.

ಸಿಮ್ಯಲೇಟರ್ ಬಳಕೆ ಹೇಗೆ

* ಮೌಸ್‌ನ ಕರ್ಸರ್‌ ಅನ್ನು ಚಲಿಸುವ ಮೂಲಕ ಬೇರೆ ಬೇರೆ ನಗರಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆದುಕೊಳ್ಳಬಹುದು

ಏರಿಕೆಯಲ್ಲಿ ವ್ಯತ್ಯಾಸವೇಕೆ

* ಭೂಮಿಯ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಯಾವ ಭಾಗದಲ್ಲಿ ಹಿಮ ಕರಗುತ್ತದೆ ಎಂಬುದರ ಆಧಾರದಲ್ಲಿ, ಕರಗಿದ ನೀರು ಬೇರೆ–ಬೇರೆ ಭೂಭಾಗಗಳತ್ತ ಸರಿಯುತ್ತದೆ

* ಕರಗುತ್ತಿರುವ ಹಿಮಗಲ್ಲು ಮತ್ತು ಹಿಮನದಿಯ ಗಾತ್ರವೂ (ಮುಖ್ಯವಾಗಿ ದಪ್ಪ) ಸಮುದ್ರ ಮಟ್ಟ ಏರಿಕೆಯಲ್ಲಿ ಭಾರಿ ವ್ಯತ್ಯಾಸ ಉಂಟು ಮಾಡುತ್ತದೆ

* ಅಂಟಾರ್ಟಿಕಾದ ಪಶ್ಚಿಮ ಭಾಗದ ಹಿಮ ಮತ್ತು ಗ್ರೀನ್‌ಲ್ಯಾಂಡ್‌ನ ದಕ್ಷಿಣ ಭಾಗದಲ್ಲಿನ ಹಿಮ ಕರಗಿದರೆ ಮಂಗಳೂರು ಇನ್ನಷ್ಟು ಅಪಾಯ ಎದುರಿಸಲಿದೆ.

ಮಂಗಳೂರಿನ ಬಳಿ ಪ್ರತಿ ವರ್ಷ ಏರಿಕೆಯಾಗಲಿರುವ ಸಮುದ್ರದ ಮಟ್ಟ

**

ಸೈನ್ಸ್‌ ಅಡ್ವಾನ್ಸಸ್‌ನಲ್ಲಿ ಈ ಕುರಿತ ಸಂಶೋಧನಾ ಪ್ರಬಂಧ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT