ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕೆರೆ: ತೆರವಿಗೆ ಒತ್ತಾಯ

Last Updated 17 ನವೆಂಬರ್ 2017, 6:02 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಮಲ್ಲದಗುಡ್ಡ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ ಕೆರೆ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಮಲ್ಲದಗುಡ್ಡ ಗ್ರಾಮದ ಸರ್ವೆ ನಂ. 183 ಅಂದಾಜು 4.20 ಎಕರೆ ಜಮೀನಿನಲ್ಲಿ ಈ. ಭಾರ್ಗವ ವೆಂಕಟರಾವ್‌ ಎನ್ನುವರು ರೈತರು ಕಾಲುವೆ ನೀರು ಕಬಳಿಸಲು
ಕೆರೆ ನಿರ್ಮಿಸಿದ್ದು ಕೆಳ ಭಾಗದ ರೈತರ ಜಮೀನುಗಳಿಗೆ ನೀರು ಹಾಯಿಸಲು ಸಾಧ್ಯವಾಗಗುತ್ತಿಲ್ಲ ಎಂದು ರೈತ ಮಲ್ಲಯ್ಯ ಗೋರ್ಕಲ್ ಆರೋಪಿಸಿದರು.

ರೈತರ ದೂರಿನ ಮೇರೆಗೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ನೀಡಿದ ವರದಿಯಲ್ಲಿ ಅಕ್ರಮವಾಗಿ ಕೆರೆ ನಿರ್ಮಿಸಲಾಗಿದೆ ಎಂದು ದೃಢೀಕರಿಸಿದ್ದಾರೆ. ಹೀಗಾಗಿ ಕೆರೆಯನ್ನು ತೆರವುಗೊಳಸಬೇಕು ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುಗೂರಯ್ಯ ಆರ್‌.ಎಸ್‌.ಮಠ ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೇಶ ಅವರು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರಡ್ಡಿ ರಾಜಲಬಂಡ, ಶಿವಕುಮಾರ ಸ್ವಾಮಿ, ಅಮರೇಶಪ್ಪ ನೆಲಹಾಳ, ಪಂಪಾಪತಿ ಸ್ವಾಮಿ, ರಮೇಶ ಗೋರ್ಕಲ್, ಅಮರಪ್ಪ, ಕರಿಬಸ್ಸಯ್ಯಸ್ವಾಮಿ, ಆಂಜನೇಯ, ರಾಮಕೃಷ್ಣ, ಭೀಮಯ್ಯ ಪರಂಗಿ, ದೇವಪ್ಪ ಮರಕಂದಿನ್ನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT