ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಒಳಿತಿಗೆ ಶ್ರಮಿಸಲು ಸಲಹೆ

Last Updated 17 ನವೆಂಬರ್ 2017, 6:54 IST
ಅಕ್ಷರ ಗಾತ್ರ

ಕೆಂಭಾವಿ: ‘ಇಂದಿನ ದಿನಗಳಲ್ಲಿ ಸಂಘಟನೆಗೆ ತುಂಬಾ ಶಕ್ತಿ ಇದೆ. ಸಂಘಟನೆಯಿಂದ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು’ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಹೇಳಿದರು.

ಪಟ್ಟಣದಲ್ಲಿ ಈಚೆಗೆ ನಡೆದ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಐನಾಪುರ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.

‘ಸಮಾಜದ ವರು ಒಗ್ಗಟ್ಟಿನಿಂದ ಇರಬೇಕು. ಗ್ರಾಮಗಳಲ್ಲಿರುವ ಅನೇಕರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಇರುವದಿಲ್ಲ.ನಮ್ಮ ಸಮಾಜಕ್ಕೆ ಸರ್ಕಾರದಿಂದ ಬರುವ ಅನುದಾನದ ಮಾಹಿತಿ ಪಡೆದು ಎಲ್ಲರಿಗೂ ತಿಳಿಸುವ ಕಾರ್ಯವನ್ನು ಪದಾಧಿಕಾರಿಗಳು ಮಾಡಬೇಕು’ ಎಂದು ಹೇಳಿದರು.

ಪದಾಧಿಕಾರಿಗಳು: ವಿಠ್ಠಲ ಹುಜರತಿ (ಗೌರವಾಧ್ಯಕ್ಷ), ವೆಂಕಟೇಶ ಜಾಲಿಬೆಂಚಿ (ಅಧ್ಯಕ್ಷ), ದೇವರಾಜ ಸಾಲವಡಗಿ (ಉಪಾಧ್ಯಕ್ಷ), ಶರಣಗೌಡ ಮಾಲಿಪಾಟೀಲ (ಕಾರ್ಯದರ್ಶಿ), ಹಣಮಂತ್ರಾಯ ಹುಡೇದ (ಸಂಘಟನಾ ಕಾರ್ಯದರ್ಶಿ), ಶರಣಗೌಡ ಬಿರಾದಾರ (ಸಂಚಾಲಕ), ಯಂಕಣ್ಣ ಕರಿಬಾವಿ (ಖಜಾಂಚಿ), ರವಿಕುಮಾರ ಹುಜರತಿ, ಮೌನೇಶ ಜಾಲಿಬೆಂಚಿ, ಹಣಮಂತ್ರಾಯ, ಮಂಜುನಾಥ ಕರೆಕಲ್ಲ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಉಪಾಧ್ಯಕ್ಷ ತಿರುಪತಿಗೌಡ ಚಿಗರಿಹಾಳ, ಭೀಮು ನಾಯಕ ಮಲ್ಲಿಬಾಯಿ, ಕನಕಚಲ ನಾಯಕ, ಹಣಮಂತ ವೆಂಕಟಪೂರ, ಯಂಕೂಬ ದೊರೆ, ನಂದಪ್ಪ ದೊರೆ, ದೇವಿಂದ್ರಪ್ಪ ಜಾಲಿಬೆಂಚಿ, ಬಂಡೆಪ್ಪ ಕರಿಬಾವಿ, ಬಸವರಾಜ ಹುಜರತಿ, ಮಾನಪ್ಪ ಮಲ್ಲಿಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT