ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಸುದ್ದಿಗಳ ವಿಶ್ವಾಸಾರ್ಹತೆ ಹೆಚ್ಚಿಸಲು ‘ದಿ ಟ್ರಸ್ಟ್‌ ಪ್ರಾಜೆಕ್ಟ್‌’ ಜತೆಗೆ ಕೈಜೋಡಿಸಿದ ಗೂಗಲ್, ಫೇಸ್‌ಬುಕ್‌, ಟ್ವಿಟರ್, ಬಿಂಗ್

Last Updated 17 ನವೆಂಬರ್ 2017, 10:06 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಸುದ್ದಿಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಹಾಗೂ ‘ಸುಳ್ಳು ಸುದ್ದಿ’ ತಡೆಯಲು ಗೂಗಲ್, ಫೇಸ್‌ಬುಕ್‌, ಟ್ವಿಟರ್, ಬಿಂಗ್ ಕಂಪೆನಿಗಳು ‘ದಿ ಟ್ರಸ್ಟ್‌ ಪ್ರಾಜೆಕ್ಟ್‌’ ಜತೆಗೆ ಕೈಜೋಡಿಸಿವೆ ಎಂದು ‘ಟೆಕ್ ಕ್ರಂಚ್’ ಸುದ್ದಿತಾಣ ವರದಿ ಮಾಡಿದೆ.

ಪ್ರಕಟಿಸುವ ಸುದ್ದಿಯ ಜತೆಗೆ ‘ಟ್ರಸ್ಟ್‌ ಇಂಡಿಕೇಟರ್’ (ನಂಬಿಕೆಯ ಚಿಹ್ನೆ) ಬಳಸಲು 75ಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ. ಗೂಗಲ್, ಫೇಸ್‌ಬುಕ್‌, ಟ್ವಿಟರ್, ಬಿಂಗ್‌ ಆನ್‌ಲೈನ್‌ ತಾಣಗಳಲ್ಲಿ ಈ ಸುದ್ದಿಗಳು ‘ಟ್ರಸ್ಟ್‌ ಇಂಡಿಕೇಟರ್’ ಜತೆಗೆ ಕಾಣಿಸಿಕೊಳ್ಳಲಿವೆ ಎಂದು ವರದಿ ಹೇಳಿದೆ.

‌‌‘ದಿ ಟ್ರಸ್ಟ್‌ ಪ್ರಾಜೆಕ್ಟ್‌’ ನಿಖರ ಮಾಹಿತಿ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದೆ.

‘ಟ್ರಸ್ಟ್‌ ಇಂಡಿಕೇಟರ್’ ಸುದ್ದಿಯ ಮುಂದೆ ಕಾಣಿಸಿಕೊಳ್ಳಲಿದೆ. ‘ಟ್ರಸ್ಟ್‌ ಇಂಡಿಕೇಟರ್’ ಇರುವ ಸುದ್ದಿಗಳಲ್ಲಿ ಆ ಸುದ್ದಿಯ ಮೂಲ, ಲೇಖಕರ ಮಾಹಿತಿ, ಸುದ್ದಿ ಸಂಸ್ಥೆಯ ಮಾಹಿತಿ ಹಾಗೂ ನಿರ್ದಿಷ್ಟ ಸುದ್ದಿಗೆ ಸಂಬಂಧಿಸಿದ ಲಿಂಕ್‌ಗಳು ಸುದ್ದಿಯ ಜತೆಗೆ ಇರಲಿವೆ ಎಂದು ವರದಿ ತಿಳಿಸಿದೆ.

ವಿಶ್ವಾಸಾರ್ಹ ಸುದ್ದಿಗಳ ಜತೆಗೆ ‘ಟ್ರಸ್ಟ್‌ ಇಂಡಿಕೇಟರ್’ ಹೇಗೆ ಕಾಣಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಗೂಗಲ್‌ ಮತ್ತು ಫೇಸ್‌ಬುಕ್‌ ಈಗಾಗಲೇ ಕಾರ್ಯಪ್ರವೃತ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT