ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಪ್ರಾಣ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಆಂಬುಲೆನ್ಸ್‌ ಓಡಿಸಿದ ಚಾಲಕ

Last Updated 17 ನವೆಂಬರ್ 2017, 15:41 IST
ಅಕ್ಷರ ಗಾತ್ರ

ತಿರುವನಂತಪುರ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ತಿಂಗಳ ಮಗುವಿನ ಪ್ರಾಣ ಉಳಿಸುವ ಉದ್ದೇಶದಿಂದ ಆಂಬುಲೆನ್ಸ್‌ಅನ್ನು ಚಾಲಕ ಕೇರಳದ ಕಣ್ಣೂರಿನಿಂದ ತಿರುವನಂತಪುರ ವರಗೆ 7 ಗಂಟೆಗಳಲ್ಲಿ 516 ಕಿ.ಮೀ ದೂರ ಕ್ರಮಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ಈ ಘಟನೆ ಬುಧವಾರ ರಾತ್ರಿ ನಡೆದಿದೆ. ಸಾಮಾನ್ಯವಾಗಿ ಈ ಮಾರ್ಗವನ್ನು ಕ್ರಮಿಸಲು ಕನಿಷ್ಠ 14 ತಾಸು ತೆಗೆದುಕೊಳ್ಳುತ್ತದೆ.

ಗೂಗಲ್ ಮ್ಯಾಪ್‍ನ ಪ್ರಕಾರ ಗಮಸಿಸುವುದಾದರೆ ಕಡಿಮೆ ಟ್ರಾಫಿಕ್ ನಡುವೆ ಇಷ್ಟು ದೂರ ಕ್ರಮಿಸಲು ಕನಿಷ್ಠ 13 ಗಂಟೆಗಳು ಬೇಕಾಗುತ್ತದೆ. ಅದರಲ್ಲೂ ಕೇರಳದ ಕಿರಿದಾದ ರಸ್ತೆಗಳಲ್ಲಿ ವಾಹನದಟ್ಟಣೆ ನಡುವೆ ಸುಮಾರು 14 ತಾಸು ಬೇಕಾಗುತ್ತದೆ. ಆದರೆ, ಆಂಬುಲೆನ್ಸ್ ಚಾಲಕ ಮಗುವನ್ನು ಕೇವಲ 7 ಗಂಟೆಗಳಲ್ಲಿ ಆಸ್ಪತ್ರೆಗೆ ತಲುಪಿಸಿದ್ದಾರೆ. 15 ನಿಮಿಷಗಳು ವಿರಾಮ ತೆಗೆದುಕೊಂಡಿದ್ದನ್ನು ಹೊರತುಪಡಿಸಿದರೆ ಇವರ ಪ್ರಯಾಣ 6 ಗಂಟೆ 45 ನಿಮಿಷಕ್ಕೆ ಇಳಿಯುತ್ತದೆ. ಆಂದರೆ, ಸರಾಸರಿ ವೇಗ ಗಂಟೆಗೆ 76.4 ಕಿ.ಮೀ ಕ್ರಮಿಸಿದಂತಾಗುತ್ತದೆ.

ಕಾಸರಗೋಡು ಮೂಲದ ತಮೀಮ್‌ ಆಂಬುಲೆನ್ಸ್‌ ಚಾಲಕರಾಗಿದ್ದು, ಅವರಿಗೆ ಬುಧವಾರ ರಾತ್ರಿ 31 ದಿನದ ಫಾತೀಮಾ ಲಬಿಯಾ ಎಂಬ ಮಗುವನ್ನು ಕಣ್ಣೂರಿನಿಂದ ತಿರುವನಂತಪುರದ ಆಸ್ಪತ್ರಗೆ ಕರೆದೊಯ್ಯಬೇಕು ಎಂದು ಕಣ್ಣೂರಿನ ಪರಿಯಾರಂ ಮೇಡಿಕಲ್‌ ಕಾಲೇಜಿನಿಂದ ಕರೆ ಬಂದಿತ್ತು.

ಏರ್ ಆಂಬುಲೆನ್ಸ್ ಸೇವೆಗೆ 5 ಗಂಟೆ: ಮಗು ವಾರದಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತಿತ್ತು. ಹೀಗಾಗಿ, ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.

ವಿಮಾನದಲ್ಲಿ ಹೋಗಲು ಹತ್ತಿರದ ಮಂಗಳೂರು ಅಥವಾ ಕ್ಯಾಲಿಕಟ್ ವಿಮಾನನಿಲ್ದಾಣಗಳ ನಡುವೆ ಪ್ರಯಾಣಿಸಲು 3 ತಾಸು ಬೇಕಿತ್ತು. ಆದರೆ, ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕನಿಷ್ಠ 5 ತಾಸು ಬೇಕಿತ್ತು. ಆದ್ದರಿಂದ, ರಸ್ತೆ ಮಾರ್ಗದಲ್ಲೇ ಮಗುವನ್ನು ಕಣ್ಣೂರಿನಿಂದ ತಿರುವನಂತಪುರಂಗೆ ಕರೆದೊಯ್ಯಲಾಯಿತು.

ಪೊಲೀಸರು ಹಾಗೂ ಎನ್‌ಜಿಒ ಸಹಾಯ: ಕಣ್ಣೂರಿನ ಜಿಲ್ಲಾ ಪೊಲೀಸ್‌ ವರಿಷ್ಠರ ನೇತೃತ್ವದಲ್ಲಿ ಕೇರಳ ಪೋಲಿಸರು ಆಂಬುಲೇನ್ಸ್‌ ಚಲಿಸಲು ಸಂಚಾರ ಮುಕ್ತಗೊಳ್ಳಿಸಿದ್ದರು. ಜತೆಗೆ, ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಅಂಬುಲೇನ್ಸ್‌ ಜತೆಗೆ ಹೋಗಲು ಒಂದು ತಂಡ ಮತ್ತು ರಸ್ತೆಯಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಮತ್ತೊಂದು ತಂಡವನ್ನು ರಚಿಸಿದ್ದರು. ಪೊಲೀಸರೊಂದಿಗೆ ಕೇರಳದ ಮಕ್ಕಳ ರಕ್ಷಣಾ ತಂಡ(ಸಿಪಿಟಿ) ಕೈ ಜೋಡಿಸಿತ್ತು.

ಪ್ರಯಾಣ ಹೀಗಿತ್ತು: ಬುಧವಾರ ರಾತ್ರಿ 8.23ಕ್ಕೆ ತಮೀಮ್‌ ಆಂಬುಲೇನ್ಸ್‌ ಸೈರನ್‌ ಆನ್‌ ಮಾಡಿ ಕಣ್ಣೂರಿನಿಂದ ತಿರುವನಂತಪುರವರೆಗಿನ 516ಕಿ.ಮೀ ಪ್ರಯಾಣವನ್ನು ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT