ಉತ್ತಮ ಅವಕಾಶ

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ - 2018

ಈ ಭಾವನೆಗಳಿಗೆ ಬರಹದ ರೂಪವೂ ಒದಗಿದರೆ ಗದ್ಯವೂ ಕಾವ್ಯವೇ ಸರಿ. ನಿಮ್ಮ ಭಾವನೆಗಳಿಗೆ ಪ್ರಬಂಧದ ರೂಪವನ್ನು ಕೊಡಿ. ಅದನ್ನು ನಮಗೆ ಕಳುಹಿಸಿ; ಬಹುಮಾನವನ್ನು ಗಳಿಸಿ.

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ - 2018

ಸೃಷ್ಟಿಯ ಜೀವಂತ ಕಾವ್ಯವೇ ಹೆಣ್ಣು – ಎಂಬ ಮಾತಿದೆ. ಹೀಗಾಗಿ ಹೆಣ್ಣಿಗೂ ಭಾವನೆಗಳಿಗೂ ಸಹಜ ಸಂಬಂಧ. ಅವಳ ಭಾವನೆಗಳು ಸಾಗರದಷ್ಟು ಆಳವೂ ಹೌದು, ಶಿಖರದಷ್ಟು ಎತ್ತರವೂ ಹೌದು, ಪ್ರಕೃತಿಯಷ್ಟು ವೈವಿಧ್ಯವೂ ಹೌದು; ಅದು ಬೆಳಕಿನಂತೆ ಪಾರದರ್ಶಕ, ಕತ್ತಲೆಯಂತೆ ರಹಸ್ಯ, ಪರಿಮಳದಂತೆ ಮೋಹಕ, ಮುಳ್ಳಿನಂತೆ ಮೊನಚು. ಈ ಭಾವನೆಗಳಿಗೆ ಬರಹದ ರೂಪವೂ ಒದಗಿದರೆ ಗದ್ಯವೂ ಕಾವ್ಯವೇ ಸರಿ. ನಿಮ್ಮ ಭಾವನೆಗಳಿಗೆ ಪ್ರಬಂಧದ ರೂಪವನ್ನು ಕೊಡಿ. ಅದನ್ನು ನಮಗೆ ಕಳುಹಿಸಿ; ಬಹುಮಾನವನ್ನು ಗಳಿಸಿ.

ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾವಾಣಿ ‘ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ಇದರಲ್ಲಿ ಮಹಿಳೆಯರೆಲ್ಲರೂ ಭಾಗವಹಿಸಬಹುದು.

**
ಸ್ಪರ್ಧೆಯ ನಿಯಮಗಳು
* ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.
* ಸ್ವತಂತ್ರ ರಚನೆಯಾಗಿರಬೇಕು.
* ಬ್ಲಾಗ್‌, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ ಪ್ರಕಟ/ಪ್ರಸಾರ ಆಗಿರಕೂಡದು.
* ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
* ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
* ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.
* ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.
* ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು. ಇ–ಮೇಲ್: bhoomika@prajavani.co.in
* ಕೈಬರಹದ ಪ್ರಬಂಧಗಳನ್ನು ಅಂಚೆ/ಕೊರಿಯರ್‌ ಮೂಲಕ ಕಳುಹಿಸಬೇಕು.
ನಮ್ಮ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001.

* ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.
* ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
* ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.
* ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.

**
ಬಹುಮಾನಗಳ ವಿವರ: ಮೊದಲನೆಯ ಬಹುಮಾನ: ₹ 7,500
ಎರಡನೆಯ ಬಹುಮಾನ: ₹ 5,000
ಮೂರನೆಯ ಬಹುಮಾನ: ₹ 2,500

*
ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್‌ 25, 2017

Comments
ಈ ವಿಭಾಗದಿಂದ ಇನ್ನಷ್ಟು
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

ಏನಾದ್ರೂ ಕೇಳ್ಬೋದು
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

21 Apr, 2018
ಮರುಭೂಮಿಯ ಕರೆಯಾಲಿಸಿ...

ಪ್ರವಾಸ ಯಾಕೆ?
ಮರುಭೂಮಿಯ ಕರೆಯಾಲಿಸಿ...

21 Apr, 2018
ಹಗಲಲ್ಲೂ ನಿದ್ದೆ!

ಏನಾದ್ರೂ ಕೇಳ್ಬೋದು
ಹಗಲಲ್ಲೂ ನಿದ್ದೆ!

14 Apr, 2018
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ಮನುಷ್ಯ ಸಂಘಜೀವಿ
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

14 Apr, 2018
ರಜೆಗೊಂದಿಷ್ಟು ನನ್ನ ತಯಾರಿ...

ರಜಾ ಮಜಾ
ರಜೆಗೊಂದಿಷ್ಟು ನನ್ನ ತಯಾರಿ...

14 Apr, 2018