ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ ಐಐಎಸ್‌ಸಿ ಜತೆ ಫೌರೇಶಿಯಾ ಒಪ್ಪಂದ

Last Updated 17 ನವೆಂಬರ್ 2017, 19:29 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಬಿಡಿಭಾಗಗಳ ಪೂರೈಕೆ ಸಂಸ್ಥೆ ಫೌರೆಸಿಯಾ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜತೆ ಕೈಜೋಡಿಸಿದೆ.

ಫೌರೆಸಿಯಾ ಮತ್ತು ಐಐಎಸ್‌ಸಿ, ಹೊಸ ತಂತ್ರಜ್ಞಾನ  ಮತ್ತು ಸೇವೆಗಳನ್ನು ಮೂರು ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಈ ಒಪ್ಪಂದ ನೆರವಾಗಲಿದೆ. ದತ್ತಾಂಶ ವಿಶ್ಲೇಷಣೆ ಮತ್ತು  ಕೈಗಾರಿಕೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಂಶೋಧನೆ ನಡೆಸಲಿವೆ.
‘ನಮ್ಮ ಆಲೋಚನೆಗಳನ್ನು ತಜ್ಞರೊಂದಿಗೆ ಹಂಚಿಕೊಳ್ಳಲು ಈ ಒಪ್ಪಂದದಿಂದ ಸಾಧ್ಯವಾಗಲಿದೆ’ ಎಂದು  ಫೌರೆಸಿಯಾದ ಸಿಇಓ ಪ್ಯಾಟ್ರಿಕ್ ಕೊಲ್ಲರ್ ಹೇಳಿದ್ದಾರೆ. ‘ಐಐಎಸ್‍ಸಿ’ ನಿರ್ದೇಶಕ ಅನುರಾಗ್ ಕುಮಾರ್ ಅವರು ಈ ಪಾಲುದಾರಿಕೆಗೆ ಸಹಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT