ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌: ಫೈನಲ್‌ಗೆ ಸುಶೀಲ್‌, ಸಾಕ್ಷಿ

Last Updated 17 ನವೆಂಬರ್ 2017, 19:50 IST
ಅಕ್ಷರ ಗಾತ್ರ

ಇಂದೋರ್: ಮೂರು ವರ್ಷಗಳ ಬಿಡುವಿನ ಬಳಿಕ ಅಖಾಡಕ್ಕೆ ಇಳಿದಿರುವ ಅನುಭವಿ ಪೈಲ್ವಾನ ಸುಶೀಲ್‌ ಕುಮಾರ್‌ ಅವರು ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್‌ ಕೂಡ ಚಿನ್ನದ ಪದಕದ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ 74 ಕೆ.ಜಿ. ಫ್ರೀಸ್ಟೈಲ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಸುಶೀಲ್‌, ಮಿಜೋರಾಮ್‌ನ ಲಾಲ್‌ಮಲಸ್ವಾಮ ವಿರುದ್ಧ 48 ಸೆಕೆಂಡುಗಳಲ್ಲಿ ಗೆಲುವು ಒಲಿಸಿಕೊಂಡರು.

ನಂತರದ ಹೋರಾಟದಲ್ಲಿ ಅವರು 45 ಸೆಕೆಂಡುಗಳಲ್ಲಿ ಮುಕುಲ್‌ ಮಿಶ್ರಾ ಅವರನ್ನು ‘ಚಿತ್‌’ ಮಾಡಿದರು. ಕ್ವಾರ್ಟರ್‌ ಫೈನಲ್‌ ಮತ್ತು ಸೆಮಿಫೈನಲ್‌ನಲ್ಲಿ ಕ್ರಮವಾಗಿ ಪ್ರವೀಣ್‌ ಮತ್ತು ಸಚಿನ್‌ ದಹಿಯಾ ವಿರುದ್ಧ ಸೆಣಸಬೇಕಿತ್ತು. ಇವರು ಅಖಾಡಕ್ಕೆ ಇಳಿಯದಿದ್ದುದರಿಂದ ಸುಶೀಲ್‌ಗೆ ‘ವಾಕ್‌ ಓವರ್‌‘ ಲಭಿಸಿತು. ಹೀಗಾಗಿ ಫೈನಲ್‌ ಹಾದಿ ಸುಗಮವಾಯಿತು.

ಮಹಿಳೆಯರ 62 ಕೆ.ಜಿ.ವಿಭಾಗದಲ್ಲಿ ಕಣದಲ್ಲಿದ್ದ ಸಾಕ್ಷಿ ಮಲಿಕ್‌ ಸೆಮಿಫೈನಲ್‌ ಹೋರಾಟದಲ್ಲಿ 39 ಸೆಕೆಂಡುಗಳಲ್ಲಿ ಎದುರಾಳಿಯನ್ನು ಮಣಿಸಿದರು.

59 ಕೆ.ಜಿ. ವಿಭಾಗದಲ್ಲಿ ಗೀತಾ ಪೋಗಟ್‌ ಕೂಡ ಫೈನಲ್‌ ಪ್ರವೇಶಿಸಿದರು. 8–4ರಿಂದ ಸರಿತಾ ಮೋರ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT