ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಶತಕದ ಕನಸಿನಲ್ಲಿ ನಿಶ್ಚಲ್

Last Updated 17 ನವೆಂಬರ್ 2017, 20:06 IST
ಅಕ್ಷರ ಗಾತ್ರ

ಕಾನ್ಪುರ: ಬೆಂಗಳೂರಿನ ಡಿ. ನಿಶ್ಚಲ್ ಅವರಿಗೆ ಶತಕವೆಂದರೆ ಅಚ್ಚುಮೆಚ್ಚು. ಜೂನಿಯರ್ ಕ್ರಿಕೆಟ್‌ನ ಎಲ್ಲ ವಯೋಮಿತಿಯ ಹಂತಗಳಲ್ಲಿಯೂ  ಶತಕ ದಾಖಲಿಸಿರುವ ನಿಶ್ಚಲ್ ಈಗ ರಣಜಿ ಟ್ರೋಫಿ ಟೂರ್ನಿಯ ಚೊಚ್ಚಲ ಶತಕದ ಸನಿಹದಲ್ಲಿದ್ದಾರೆ.

ಉತ್ತರ ಪ್ರದೇಶ ತಂಡದ ಎದುರು ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅವರು 90 ರನ್ ಗಳಿಸಿ, ಕ್ರೀಸ್‌ನಲ್ಲಿದ್ದಾರೆ. ಅವರಿಗೆ ಇದು ಪದಾರ್ಪಣೆಯ ರಣಜಿ ಋತು. 15 ದಿನಗಳ ಹಿಂದೆ ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ಅವರು ಆಡಿದ್ದರು. ಆನಂತರ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿದ್ದರಿಂದ ನಿಶ್ಚಲ್ ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಆಡಲು ತೆರಳಿದ್ದರು. ಆದ್ದರಿಂದ ಅವರು ಆಲೂರಿನಲ್ಲಿ ನಡೆದಿದ್ದ ದೆಹಲಿ ಎದುರಿನ ಪಂದ್ಯದಲ್ಲಿ ಇರಲಿಲ್ಲ.

ಇದೀಗ ರಾಹುಲ್ ರಾಷ್ಟ್ರೀಯ ತಂಡದಲ್ಲಿ ಆಡಲು ಹೋಗಿರುವುದರಿಂದ ನಿಶ್ಚಲ್ ಅವರಿಗೆ ಈ ಪಂದ್ಯದಲ್ಲಿ ಸ್ಥಾನ ಲಭಿಸಿದೆ. ಅದನ್ನು ಅವರು ಸಮರ್ಥವಾಗಿ ಬಳಸಿಕೊಂಡರು.

‘ತಂಡದಲ್ಲಿರುವ ಎಲ್ಲ ಅನುಭವಿ ಆಟಗಾರರು  ಉತ್ತಮ ಸ್ನೇಹಿತರಾಗಿದ್ದಾರೆ. ತಂಡಕ್ಕೆ ನಾನು ಹೊಸಬ ಎಂಬ ಭಾವನೆ ಬರದಂತೆ  ನಡೆದುಕೊಂಡಿದ್ದಾರೆ. ಆದ್ದರಿಂದ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಗುತ್ತಿದೆ’ ಎಂದರು.

‘ದಿನದಾಟದ ಎರಡನೇ ಅವಧಿಯಲ್ಲಿ ಎಚ್ಚರಿಕೆಯಿಂದ ಆಡುವ ಅಗತ್ಯವಿತ್ತು. ಮೊದಲ ಅವಧಿಯಲ್ಲಿ ಎರಡು ವಿಕೆಟ್‌ಗಳು ಪತಗೊಂಡಿದ್ದರಿಂದ ಸ್ವಲ್ಪ ಒತ್ತಡ ಇತ್ತು. ಕರುಣ್ ಅವರೊಂದಿಗಿನ ಜೊತೆಯಾಟದಿಂದ ಉತ್ತಮ ಸೇರಿಸಲು ಸಾಧ್ಯವಾಯಿತು’ ಎಂದರು.

‘ಇಲ್ಲಿ ಶತಕ ಗಳಿಸುವುದಷ್ಟೇ ಗುರಿಯಲ್ಲ. ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕ್ರೀಸ್‌ನಲ್ಲಿದ್ದು ದೊಡ್ಡ ಮೊತ್ತ ಪೇರಿಸುವುದು ಯೋಜನೆ’ ಎಂದು 23 ವರ್ಷದ ನಿಶ್ಚಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT