ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದಲ್ಲಿ ಮೋದಿ ಜನಪ್ರಿಯತೆ 95%

ಫೆಬ್ರುವರಿ–ಮಾರ್ಚ್‌ ಅವಧಿಯ ಸಮೀಕ್ಷಾ ವರದಿ ಪ್ರಕಟಿಸಿದ ಪ್ಯೂ ರಿಸರ್ಚ್
Last Updated 17 ನವೆಂಬರ್ 2017, 21:39 IST
ಅಕ್ಷರ ಗಾತ್ರ

‘ಕೇಂದ್ರದಲ್ಲಿ ಸರ್ಕಾರ ರಚಿಸಿ ಮೂರು ವರ್ಷವಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದಾರೆ. ನೋಟು ರದ್ದತಿ ನಿರ್ಧಾರದ ನಂತರವೂ ‘ದೇಶದ ಆರ್ಥಿಕತೆ ಪ್ರಗತಿಯ ಹಾದಿಯಲ್ಲಿದೆ’ ಎಂದು ಮುಕ್ಕಾಲು ಪಾಲು ಭಾರತೀಯರು ಹೇಳಿದ್ದಾರೆ’ ಎಂದು ಪ್ಯೂ ರಿಸರ್ಚ್ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

16: ಸಮೀಕ್ಷೆಗೆ ಒಳಪಡಿಸಿದ ರಾಜ್ಯಗಳು

13: ಸಮೀಕ್ಷೆಗೆ ಒಳಪಡಿಸದ ರಾಜ್ಯಗಳು

2: ಸಮೀಕ್ಷೆಗೆ ಒಳಪಡಿಸಿದ ಕೇಂದ್ರಾಡಳಿತ ಪ್ರದೇಶಗಳು

2,464: ಸಮೀಕ್ಷೆಯಲ್ಲಿ ಭಾಗವಹಿಸಿದ ಸಾರ್ವಜನಿಕರು

21ನೇ ಫೆಬ್ರುವರಿ 2017– 10ನೇ ಮಾರ್ಚ್ 2017/ ಸಮೀಕ್ಷೆ ನಡೆಸಿದ ಅವಧಿ

ದೇಶದ ವಿವಿಧೆಡೆ ಮೋದಿ ಜನಪ್ರಿಯತೆ

ಉತ್ತರ ಭಾರತ 84%

ಪೂರ್ವ ಭಾರತ 85%

ಪಶ್ಚಿಮ ಭಾರತ 92%

ದಕ್ಷಿಣ ಭಾರತ 95%

‘ಸಮಸ್ಯೆಗಳ ನಿರ್ವಹಣೆಯಲ್ಲಿ ಮೋದಿಯೇ ಮುಂದು’

ಒಂದೇ ಸಮಸ್ಯೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ನಿರ್ವಹಿಸಿವೆ ಎಂಬುದನ್ನು ಅಂಕಗಳ ರೂಪದಲ್ಲಿ ಸೂಚಿಸುವಂತೆ ಕೋರಲಾಗಿತ್ತು.

  ನಿರುದ್ಯೋಗ ಭ್ರಷ್ಟಾಚಾರ ಬಡವರಿಗೆ ನೆರವು ವಾಯು ಮಾಲಿನ್ಯ  ಭಯೋತ್ಪಾದನೆ  ಬೆಲೆ ಹೆಚ್ಚಳ  ಕೋಮು ಸೌಹಾರ್ದ  ಕಾಶ್ಮೀರ ಬಿಕ್ಕಟ್ಟು   
ಕಾಂಗ್ರೆಸ್‌ ಪಡೆದ ಅಂಕಗಳು 46 45  48 21 51 35  29 40  
ಬಿಜೆಪಿ ಪಡೆದ ಅಂಕಗಳು 81 78 81 52 78 62 55 65  

ದೇಶದ ಪ್ರಮುಖ ಸಮಸ್ಯೆಗಳು

ಈ ಕೆಳಗಿನ ಸಮಸ್ಯೆಗಳು ದೇಶವನ್ನು ಬಾಧಿಸುತ್ತಿವೆ ಎಂದು ಒಪ್ಪಿಕೊಂಡ ಜನರ ಪ್ರಮಾಣ

ಅಪರಾಧಗಳು 84%

ಭಯೋತ್ಪಾದನೆ 76%

ಭ್ರಷ್ಟ ಅಧಿಕಾರಿಗಳು 74%

ಉದ್ಯೋಗವಕಾಶಗಳ ಕೊರತೆ 73%

ಬೆಲೆ ಹೆಚ್ಚಳ 71%

ಕಾಶ್ಮೀರ ಬಿಕ್ಕಟ್ಟು 62%

ಬಡವರು ಮತ್ತು ಸಿರಿವಂತರ ನಡುವಣ ಅಂತರ 61%

ಭ್ರಷ್ಟ ಉದ್ಯಮಿಗಳು 59%

ವಾಯು ಮಾಲಿನ್ಯ 54%

ಆರೋಗ್ಯ ಸೇವೆ 54%

ಕಳಪೆ ಗುಣಮಟ್ಟದ ಶಾಲೆ–ಶಿಕ್ಷಣ 48%

ದೈನಂದಿನ ವ್ಯವಹಾರದಲ್ಲಿ ನಗದು ಕೊರತೆ 45%

ಕೋಮು ಬಿಕ್ಕಟ್ಟು 37%

**

‘ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ’

ಈ ಸಮೀಕ್ಷೆ ನಡೆದ ನಂತರದ ದಿನಗಳಲ್ಲಿ ಸರ್ಕಾರದ ನೀತಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಸಮೀಕ್ಷೆ ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ

–ಬ್ರೂಸ್ ಸ್ಟೋಕ್ಸ್, ನಿರ್ದೇಶಕ, ಗ್ಲೋಬಲ್ ಎಕನಾಮಿಕ್ ಆಟಿಟ್ಯೂಡ್ಸ್, ಪ್ಯೂ ರಿಸರ್ಚ್‌

**

ಬಹುಶಃ ಇದು ನಿಜವಿದ್ದಿರಬಹುದು. ರಾಜಕಾರಣದಲ್ಲಿ ಒಂದು ವಾರವೂ ಬಹುದೊಡ್ಡ ಅವಧಿ. ಈ ಸಮೀಕ್ಷೆ ನಡೆದದ್ದು ಫೆಬ್ರುವರಿ–ಮಾರ್ಚ್‌ನಲ್ಲಿ. ಇವೆಲ್ಲವೂ ಈಗ ಬದಲಾಗಿರಬಹುದು

–ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ

**

ಸಮೀಕ್ಷೆಯ ವರದಿ ಸರಿಯಾಗಿದೆ. ಮೋದಿ ಅವರ ಜನಪ್ರಿಯತೆ ದೇಶದಾದ್ಯಂತ ಹೆಚ್ಚುತ್ತಿದೆ. ಅವರು ಸರ್ಕಾರ ರಚಿಸಿದ ನಂತರ ಜನರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೆಚ್ಚಾಗಿದೆ

–ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT