ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಂಬೋ ಕಬ್ಬು’ ಬೆಳೆದ ರೈತ ಮಾಯಪ್ಪ

Last Updated 18 ನವೆಂಬರ್ 2017, 6:08 IST
ಅಕ್ಷರ ಗಾತ್ರ

ಮೂಡಲಗಿ: ಗರಿಷ್ಠವೆಂದರೂ 8ರಿಂದ 10 ಅಡಿ ಎತ್ತರ ಕಬ್ಬು ಬೆಳೆದಿರುತ್ತದೆ. ಅದರಲ್ಲಿ 10ರಿಂದ 15 ಗಣಿಕೆಗಳು ಇರುತ್ತವೆ. ಅದರೆ ಇಲ್ಲಿಯ ರೈತ ಮಾಯಪ್ಪ ಕೆಂಚಪ್ಪ ಕಂಕಣವಾಡಿ ತಮ್ಮ ಭೂಮಿಯಲ್ಲಿ ಬೆಳೆದ ಕಬ್ಬು 45 ಗಣಿಕೆಗಳನ್ನು ಹೊಂದಿದ್ದು, 20 ಅಡಿಗಿಂತ ಎತ್ತರ ಬೆಳೆದಿದ್ದಾರೆ. ಮೂರು ಎಕರೆ ಭೂಮಿಯಲ್ಲಿ ಒಂದು ವರ್ಷದ ಹಿಂದೆ ನೀರಾ ತಳಿ ಬೀಜ ನೆಟ್ಟಿದ್ದು, ಈಗ ಬರೋಬರಿ ಈ ಕಬ್ಬು 15 ತಿಂಗಳು ಪೂರೈಸಿದೆ.

ಒಂದು ಎಕರೆಗೆ ಸಾಮಾನ್ಯವಾಗಿ ಕಬ್ಬು 40 ಟನ್‌ ಇಳುವರಿ ನೀಡುತ್ತವೆ. ಆದರೆ ಮಾಯಪ್ಪ ಬೆಳೆದಿರುವ ‘ಜಂಬೋ ಕಬ್ಬು’ ಒಂದು ಎಕರೆಗೆ 80 ಟನ್‌ ಇಳುವರಿ ನೀಡಿದೆ. ಕಳೆದ ವರ್ಷ ಬರಗಾಲದಲ್ಲಿ ನೀರಿನ ಭವಣೆಯಲ್ಲಿ ಬೀಜ ನೆಟ್ಟಿದ್ದರೂ ಸಹ ರೈತ ಮಾಯಪ್ಪನ ವಿಶೇಷ ಕಾಳಜಿಯಿಂದ ಕಬ್ಬು ಇಳುವರಿಯಲ್ಲಿ ಕೈಕೊಟ್ಟಿಲ್ಲ!

‘ಹನಿ ನೀರಾವರಿ ಮತ್ತು ಕೃಷಿಹೊಂಡ ಮಾಡಿದ್ದರಿಂದ ಬ್ಯಾಸಗ್ಯಾಗ್‌ ಕಬ್ಬಿಗೆ ನೀರಿನ ತ್ರಾಸ್‌್ ಆಗಲಿಲ್ಲರ್ರೀ’ ಎಂದು ರೈತ ಮಾಯಪ್ಪ ಹೇಳಿದರು. ‘ಮೂರೂವರೆ ಅಡಿ ಅಂತರದ ಸಾಲಿನಲ್ಲಿ ಕಬ್ಬು ಹಚ್ಚಿದ್ದು, ಪ್ರಾರಂಭದಲ್ಲಿ ಮತ್ತು ಮಧ್ಯದಲ್ಲಿ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಕಿದ್ದು ಅನುಕೂಲವಾಗೈತ್ರಿ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT