ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಯ ಜೀನ್ಸ್‌ಗೆ ಕತ್ತರಿ ಹಾಕಿದ ಶಾಲಾ ಸಿಬ್ಬಂದಿ

ತೊಡೆಗೆ ಗಾಯ
Last Updated 18 ನವೆಂಬರ್ 2017, 10:10 IST
ಅಕ್ಷರ ಗಾತ್ರ

ಲಖನೌ: ಸಮವಸ್ತ್ರ ಧರಿಸದೆ ಜೀನ್ಸ್ ತೊಟ್ಟು ಶಾಲೆಗೆ ಬಂದ ವಿದ್ಯಾರ್ಥಿಯ ಜೀನ್ಸ್‌ನ್ನು ಶಾಲಾ ಸಿಬ್ಬಂದಿ ಕತ್ತರಿಸಿದ್ದು, ಇದರಿಂದ ಗಾಯಗೊಂಡ ವಿದ್ಯಾರ್ಥಿ ನಡೆದಾಡಲು ಕಷ್ಟಪಡುವಂತಾಗಿದೆ.

ಈ ಘಟನೆ ಕಾನ್ಪುರದ ಸಿಕಂಧರ್‌ನಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಪರೀಕ್ಷೆಯ ದಿನ ವಿದ್ಯಾರ್ಥಿ ಸಮವಸ್ತ್ರ ಧರಿಸದೆ ಶಾಲೆಗೆ ಜೀನ್ಸ್, ಶರ್ಟ್ ಹಾಕಿಕೊಂಡು ಬಂದಿದ್ದ. ಇದರಿಂದ ಕೋಪಗೊಂಡ ಶಾಲಾ ನಿರ್ವಾಹಕ ಎರಡು ಕತ್ತರಿ ತೆಗೆದುಕೊಂಡು ವಿದ್ಯಾರ್ಥಿಯ ಜೀನ್ಸ್ ಕತ್ತರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಎರಡು ತೊಡೆಗಳಿಗೆ ಗಾಯವಾಗಿದೆ.

‘ನನ್ನ ಮಗನ ಮಾತುಗಳನ್ನು ಕೇಳಿಸಿಕೊಳ್ಳದ ಶಾಲಾ ಸಿಬ್ಬಂದಿ ಕತ್ತರಿಯಿಂದ ಜೀನ್ಸ್ ಕತ್ತರಿಸಿದ್ದಾರೆ. ಆಗ ಮಗನಿಗೆ ಗಾಯವಾಗಿದೆ. ಅಲ್ಲದೇ ಮಗನನ್ನು ಸಮವಸ್ತ್ರ ಧರಿಸಿ ಬಂದರೆ ಮಾತ್ರ ಶಾಲೆಗೆ ಪ್ರವೇಶ ನೀಡುವಂತೆ ಹೇಳಿ ಮನೆಗೆ  ಕಳುಹಿಸಿದ್ದಾರೆ. ಇವರ ವರ್ತನೆ ಸರಿಯಲ್ಲ’ ಎಂದು ವಿದ್ಯಾರ್ಥಿಯ ತಂದೆ ವಿನೋದ್ ಪಾಲ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT