ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಷ್ಪಕ್ಷಪಾತ ಆಡಳಿತದಿಂದ ಅಭಿವೃದ್ಧಿ’

Last Updated 18 ನವೆಂಬರ್ 2017, 9:46 IST
ಅಕ್ಷರ ಗಾತ್ರ

ತಾಳಿಕೋಟೆ: ‘ಸಹಕಾರಿಗಳ ಉತ್ತಮ ಕಾರ್ಯನಿರ್ವಹಣೆಗೆ ಸೂಕ್ತವಾದ ಕಾನೂನುಗಳ ರಚನೆ ಹಾಗೂ ಅನುಸರಣೆಯಿಂದ ನಿಷ್ಪಕ್ಷಪಾತವಾದ ಆಡಳಿತ ಸಾಧ್ಯ’ ಎಂದು ವಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಿ.ಎಸ್.ಪಾಟೀಲ ಯಾಳಗಿ ಹೇಳಿದರು.

ಪಟ್ಟಣದ ತಾಳಿಕೋಟೆ ಸಹಕಾರಿ ಬ್ಯಾಂಕ್‌ ಸಭಾಂಗಣದಲ್ಲಿರಾಜ್ಯ ಸಹಕಾರಿ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರಿ ಯುನಿಯನ್ ನಿಯಮಿತ, ಸಹಕಾರ ಇಲಾಖೆ, ತಾಳಿಕೋಟಿ ಸಹಕಾರ ಬ್ಯಾಂಕ್ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ‘ಸಹಕಾರ ಅಭಿವೃದ್ದಿಗೆ ಕಾನೂನುಗಳ ರಚನೆ’ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕಾನೂನು ತಿಳಿಯದಿದ್ದರೆ ಶೋಷಣೆಗೆ ಒಳಗಾಗಬಹುದು. ಅದಕ್ಕೆ ಆಸ್ಪದ ಕಲ್ಪಿಸಿಕೊಡದೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಮಾನ ಕರ್ತವ್ಯ ಹಾಗೂ ಅದಕ್ಕೆ ಒಳಪಡುವ ಕಾನೂನು ವಿಷಯವನ್ನು ತಜ್ಞರ ಬಳಿ ಮುಕ್ತವಾಗಿ ಸಮಾಲೋಚಿಸಬೇಕು’ ಎಂದು ತಿಳಿಸಿದರು.

ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ವಿ.ಜಿ.ಜೋಶಿ, ಜಿಲ್ಲಾ ಸಹಕಾರಿ ಯುನಿಯನ್‌ ನಿರ್ದೇಶಕ ಸೋಮನಗೌಡ ಬಿರಾದಾರ, ವೆಂಕನಗೌಡ ಪಾಟೀಲ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಪಿ.ಬಿ.ಕಾಳಗಿ ಮಾತನಾಡಿದರು.

ಜಿಲ್ಲಾ ಸಹಕಾರ ಯುನಿಯನ್ ಕೋಶಾಧ್ಯಕ್ಷ ಆರ್.ಎಂ.ತೋಟದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಸಿಂಗ್‌ ಹಜೇರಿ, ಅಡತ್ ಮರ್ಚಂಟ್ಸ್‌ ಅಸೋಶಿಯೇಷನ್ ಕಾರ್ಯದರ್ಶಿ ಮುರಿಗೆಪ್ಪ ಸರಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ, ಸಹಕಾರಿ ಅಭಿವೃದ್ದಿ ಅಧಿಕಾರಿ ಎಸ್.ಆರ್.ನಾಯಕ, ವ್ಹಿ.ಬಿ.ತಂಗಡಗಿ, ಕೆ.ಬಿ.ಪಾಟೀಲ ಉಪಸ್ಥಿತರಿದ್ದರು. ಬಿ.ಕೆ.ಮಣೂರ ನಿರೂಪಿಸಿದರು. ಸವಿತಾ ಬಿಸನಾಳ ಸ್ವಾಗತಿಸಿದರು. ಶಶಿಕಾಂತ ಮೂಕಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT