ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾರೆಯಲ್ಲಿ ನಾಗರಿಕರ ಬೃಹತ್‌ ಪ್ರತಿಭಟನೆ: ಸೇನೆ ಕಾರ್ಯಕ್ಕೆ ಮೆಚ್ಚುಗೆ

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹರಾರೆ (ಎಎಫ್‌ಪಿ): ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ ರಾಜೀನಾಮೆಗೆ ಮತ್ತೆ ಒತ್ತಡ ಹೆಚ್ಚಿದ್ದು, ದೇಶದ ವಿವಿಧೆಡೆ ಪ್ರತಿಭಟನೆಗಳು ಈಗ ಆರಂಭವಾಗಿವೆ.

ಹರಾರೆಯಲ್ಲಿ ಸಾವಿರಾರು ನಾಗರಿಕರು ಶನಿವಾರ ಬೃಹತ್‌ ರ‍್ಯಾಲಿ ನಡೆಸಿದರು. ಮುಗಾಬೆ ರಾಜೀನಾಮೆಗೆ ಒತ್ತಾಯಿಸಿ ಫಲಕಗಳನ್ನು ಪ್ರದರ್ಶಿಸಿ, ಸೇನೆ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು.

‘ನಮ್ಮ ಸೈನಿಕರು ಜನರ ಜತೆ ಗಿದ್ದಾರೆ. ಮುಗಾಬೆ ಅವರು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವವರೆಗೂ ಸೇನೆ ತನ್ನ ಕಾರ್ಯವನ್ನು ಮುಂದು ವರಿಸಬೇಕು. ನಾವು ಬಹಳಷ್ಟು ಸಂಕ ಷ್ಟಕ್ಕೆ ಒಳಗಾಗಿದ್ದೇವೆ. ಮುಗಾಬೆ ಆಡಳಿತದಿಂದ ಮುಕ್ತಿಗೊಳಿಸಲು ಪ್ರಯ ತ್ನಿಸಿದ ಸೇನೆಗೆ ಅಭಿನಂದನೆಗಳು’ ಎಂದು ನಾಗರಿಕರು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷದ ಮುಖಂಡರು ಸಹ ಮುಗಾಬೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಆಡಳಿತಾರೂಢ ಪಕ್ಷದ ಪ್ರಾದೇಶಿಕ ಘಟಕಗಳ ಮುಖಂಡರು ಸರ್ಕಾರಿ ಸ್ವಾಮ್ಯದ ಟೆಲಿವಿಷನ್‌ನಲ್ಲಿ ಭಾಷಣ ಮಾಡಿ ಮುಗಾಬೆ ರಾಜೀನಾಮೆಗೆ ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟಗಾರರು ಮಾಜಿ ಉಪಾಧ್ಯಕ್ಷ ಎಮ್ಮರ್ಸನ್‌ ನನ್‌ಗವಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ರಾಜೀನಾಮೆ ನೀಡಲು ಇನ್ನೂ ಹೆಚ್ಚಿನ ಸಮಯಾವಕಾಶ ನೀಡುವಂತೆ ಮುಗಾಬೆ ಕೋರಿದ್ದಾರೆ. ರಾಜೀನಾಮೆ ಕುರಿತು ಸೇನೆಯ ಹಿರಿಯ ಅಧಿಕಾರಿಗಳು ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ರಾಜೀನಾಮೆಗೆ ಮುಗಾಬೆ ಒಲವು ತೋರಿಲ್ಲ ಎಂದು ಹೇಳಲಾಗಿದೆ.

ತಕ್ಷಣವೇ ಮುಗಾಬೆ ರಾಜೀನಾಮೆ ನೀಡಿ ತಾತ್ಕಾಲಿಕವಾಗಿ ಬೇರೊಬ್ಬರು ಅಧ್ಯಕ್ಷ ಸ್ಥಾನ ಅಲಂಕರಿಸಲು ಅವಕಾಶ ನೀಡಬೇಕು ಎಂದು ಸೇನಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.

* ಮುಗಾಬೆ ಆಟ ಈಗ ಮುಗಿದಿದೆ. ಸೇನಾಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ.

  - ಕ್ರಿಸ್‌ ಮುತ್ಸಂಗ್ವಾ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT