ಕಲಬುರ್ಗಿ

‘ಕಾಮ’ ಬಿಟ್ಟೇಯಾ ಗ್ರೇಟ್‌ ಕಣಯ್ಯ!

ಕಲಬುರ್ಗಿಯಲ್ಲಿ ಶುಕ್ರವಾರ ಸಿಐಟಿಯು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಮಟ್ಟದ 7ನೇ ಸಮ್ಮೇಳನ ಆರಂಭವಾಗುತ್ತಿದ್ದಂತೆಯೇ ಸಂಘದ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿಯವರಿಗೆ ಮನವಿಪತ್ರ ಸಲ್ಲಿಸಿದರು.

ಕಲಬುರ್ಗಿ: ಕಲಬುರ್ಗಿಯಲ್ಲಿ ಶುಕ್ರವಾರ ಸಿಐಟಿಯು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಮಟ್ಟದ 7ನೇ ಸಮ್ಮೇಳನ ಆರಂಭವಾಗುತ್ತಿದ್ದಂತೆಯೇ ಸಂಘದ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿಯವರಿಗೆ ಮನವಿಪತ್ರ ಸಲ್ಲಿಸಿದರು.

ವೇತನ ಹೆಚ್ಚಳ, ಕಾಯಂ ಉದ್ಯೋಗ, ಬಡ್ತಿ ಮುಂತಾದ ನೌಕರರ ಬೇಡಿಕೆಗೆ ಪ್ರತಿಕ್ರಿಯಿಸಿದ ಹೆಪ್ಸಿಬಾರಾಣಿ, ‘ಸರ್ಕಾರದ ಮಾರ್ಗದರ್ಶನದಂತೆ ಸಾಮಾಜಿಕ ನ್ಯಾಯ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಸಂಕಷ್ಟ, ಸಮಸ್ಯೆಗಳ ಅರಿವು ನನಗಿದೆ’ ಎಂದು ಕಾಳಜಿ ತೋರಿದರು.

ಮರುಕ್ಷಣವೇ ಅವರು, ‘ಕೆಲ ಗ್ರಾಮಪಂಚಾಯಿತಿಗಳಲ್ಲಿ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ. ಕರ ವಸೂಲಿ ಸರಿಯಾಗಿ ಆಗುತ್ತಿಲ್ಲ. ಗ್ರಾಮ ಸಭೆ ನಡೆಯುತ್ತಿಲ್ಲ’ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.

ಇದೆಲ್ಲವನ್ನೂ ಆಲಿಸಿ ಭಾಷಣದಲ್ಲಿ ಮೊನಚಾಗಿ ಪ್ರತಿಕ್ರಿಯಿಸಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೌರಮ್ಮ ಪಾಟೀಲ, ‘ಶಾಲು ಹೊದಿಸಿ ಹೊಡೆಯುವುದು ಅಂದ್ರ ಇದೆ ನೋಡ್ರಿ. ನೌಕರರ ಬೇಡಿಕೆ ಈಡೇರಿಸೋಣ, ಸಮಸ್ಯೆ ಬಗೆಹರಿಸೋಣ ಎಂದೆಲ್ಲ ಹೇಳಿ, ಪಂಚಾಯಿತಿಯಲ್ಲಿ ಕೆಲಸ ಆಗ್ತಾ ಇಲ್ಲ ಅಂತಾನೂ ಹೇಳಿದ್ರು’ ಎಂದರು.

ಆದರೆ, ಈ ಮಾತುಗಳನ್ನು ಕೇಳಲು ಅಲ್ಲಿ ಹೆಪ್ಸಿಬಾರಾಣಿ ಕೊರ್ಲಪಾಟಿಯವರು ಇರಲಿಲ್ಲ. ಮನವಿಪತ್ರ ಸ್ವೀಕರಿಸಿ, ಕೆಲ ಹೊತ್ತು ಮಾತನಾಡಿ ಅವರು ಸಮ್ಮೇಳನದಿಂದ ನಿರ್ಗಮಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಗೌರವದಿಂದ ಬೀಳ್ಕೊಡೋಣ...

ಮುಧೋಳದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ ನಡೆದಿತ್ತು.

15 Apr, 2018

ವಾರೆಗಣ್ಣು
ಇದೊಂದು ಸಲ ನಮ್ಮನ್ನು ನೋಡಿ!

‘ಎಲ್ಲರನ್ನೂ ನೋಡಿದ್ದೀರಲ್ಲ. ಇದೊಂದ್‌ ಸಲ ನಮಗೂ ಅಧಿಕಾರ ಕೊಟ್ಟು ನೋಡಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅರ್ಧ ತಮಾಷೆ, ಅರ್ಧ...

15 Apr, 2018

ವಾರೆಗಣ್ಣು
ಕಳೆ ಎಂದರೆ ಸಾಕು, ಕಾಂಗ್ರೆಸ್‌ ಬೇಡ!

‘ಈ ಬಾರಿ ನೀವ್‌ ಏನಾದ್ರೂ ತಿಳ್ಕೋಳಿ. ನಮ್‌ ಮನಗೂಳಿಗೆ ನಾವು ಹಾರ ಹಾಕೋದು ಖಚಿತ’.

8 Apr, 2018
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

ವ್ಯಕ್ತಿ
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

1 Apr, 2018

ವಾರೆಗಣ್ಣು
ಮೀನಿನ ಊಟ ಮಾಡ್ಸಿಯಪ್ಪ

ಮಧ್ಯಾಹ್ನ 3 ಗಂಟೆ. ಮಂಗಳೂರಿನ ಎಕ್ಕೂರು ಹೊರಾಂಗಣ ಕ್ರೀಡಾಂಗಣದ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮುಖದಲ್ಲಿ ಅಂಥ ಉತ್ಸಾಹ...

1 Apr, 2018