ಶನಿವಾರಸಂತೆ

ಶನಿವಾರಸಂತೆ: ಲಕ್ಷ ದೀಪೋತ್ಸವ ಸಂಭ್ರಮ

ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ, ಪಾರ್ವತಿ ದೇವಿಗೆ ಕುಂಕುಮಾರ್ಚನೆ, ಗಣಪತಿಗೆ ಸುವರ್ಣಾಲಂಕಾರ ಮಾಡಿ ಪೂಜಿಸಲಾಯಿತು.

ಶನಿವಾರಸಂತೆ: ಪಟ್ಟಣದ ಚಂದ್ರಮೌಳೇಶ್ವರ–ಪಾರ್ವತಿ–ಗಣಪತಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ಪ್ರಯುಕ್ತ ವಿಶೇಷ ದೀಪಾರಾಧನೆ ನಡೆಯಿತು.

ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ, ಪಾರ್ವತಿ ದೇವಿಗೆ ಕುಂಕುಮಾರ್ಚನೆ, ಗಣಪತಿಗೆ ಸುವರ್ಣಾಲಂಕಾರ ಮಾಡಿ ಪೂಜಿಸಲಾಯಿತು. ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಅರ್ಚಕ ಮಾಲತೇಶ್ ಭಟ್ ಹಾಗೂ ಶೇಷಾಚಲ ಭಟ್ ಪೂಜಾವಿಧಿಗಳನ್ನು ನೆರವೇರಿಸಿದರು. ದೇವಾಲಯ ಪ್ರಾಂಗಣ ಹಾಗೂ ಆವರಣದಲ್ಲಿ ಭಕ್ತರು ಲಕ್ಷ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಪೂಜೆ, ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.ಬಳಿಕ ನಡೆದ ಸಿಡಿಮದ್ದು ಪ್ರದರ್ಶನ ಜನಮನ ರಂಜಿಸಿತು. ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಶರತ್ ಶೇಖರ್, ಪದಾಧಿಕಾರಿಗಳಾದ ಎನ್.ಪಿ.ರವಿ, ಜಿ.ಬಿ.ಕುಮಾರ್, ಪ್ರದೀಪ್, ಧನಂಜಯ್, ಎನ್.ಬಿ.ರವಿ, ಮಹೇಶ್, ಸಂತೋಷ್, ಪ್ರಕಾಶ್ ಇತರರು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಮಡಿಕೇರಿ
ಜಾಗೃತಿಗಾಗಿ ಯೋಗ ವಾಕ್

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ಯೋಗ ಜಾಗೃತಿ ಜಾಥಾಕ್ಕೆ ಭಾನುವಾರ ಚಾಲನೆ ನೀಡಲಾಯಿತು.

18 Jun, 2018

ಸೋಮವಾರಪೇಟೆ
ದೇವಾಲಯ ನಿರ್ಮಾಣ: ಸಹಾಯಕ್ಕೆ ಮನವಿ

ಸೋಮವಾರಪೇಟೆ ‘ಸಮೀಪದ ಬಜೆಗುಂಡಿಯ ಶನೇಶ್ವರ ದೇವಾಲಯವು ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರವಾಗುತ್ತಿದ್ದು, ಮುಂದಿನ ಆರು ತಿಂಗಳೊಳಗೆ ಲೋಕಾರ್ಪಣೆಗೊಳ್ಳಲಿದೆ’ ಎಂದು ದೇವಾಲಯ ಸಮಿತಿ...

18 Jun, 2018
‘ಮಂಜಿನ ನಗರಿ’ಯತ್ತ ಪ್ರವಾಸಿಗರ ಲಗ್ಗೆ

ಮಡಿಕೇರಿ
‘ಮಂಜಿನ ನಗರಿ’ಯತ್ತ ಪ್ರವಾಸಿಗರ ಲಗ್ಗೆ

18 Jun, 2018

ಸೋಮವಾರಪೇಟೆ
ಸೋರುತಿದೆ ತಾಲ್ಲೂಕು ಕಚೇರಿ ಕಟ್ಟಡ

ಸೋಮವಾರಪೇಟೆ ತಾಲ್ಲೂಕು ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಿ ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆರಂಭವಾದ ಮಿನಿ ವಿಧಾನಸೌಧ ಇಂದು ಸುಣ್ಣ...

17 Jun, 2018
ಬಳಕೆಗೆ ಬಾರದ ‘ಹೈಟೆಕ್‌ ಮಾರುಕಟ್ಟೆ’

ಮಡಿಕೇರಿ
ಬಳಕೆಗೆ ಬಾರದ ‘ಹೈಟೆಕ್‌ ಮಾರುಕಟ್ಟೆ’

17 Jun, 2018