ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಮೆಟ್ಟಿಲಲ್ಲಿ ಸಾದತ್

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಗುಬ್ಬಿಯ ಮಹಮದ್ ಸಾದತ್  ಚೆನ್ನೈನಲ್ಲಿ ಈಚೆಗೆ ನಡೆದ ಪುರುಷರ 57ನೇ ಓಪನ್ ಸೀನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ  100 ಮೀಟರ್ ಓಟವನ್ನು 10.57 ಸೆಕೆಂಡ್‌ನಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸಾದತ್ 2018ರ ಮೇನಲ್ಲಿ ಆಸ್ಟ್ರೇಲಿಯಾದಲ್ಲಿ  ನಡೆಯುವ ಕಾಮನ್ ವೆಲ್ತ್  ಕ್ರೀಡಾಕೂಟದ 4x100 ಮೀಟರ್ ರಿಲೇ ಓಟದಲ್ಲಿ ಓಡಲಿದ್ದಾರೆ. 21 ವರ್ಷದ  ಓಟಗಾರನ ಸಂದರ್ಶನ.

ಆಟದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಶಾಲೆಯಲ್ಲಿ   ಕೊಕ್ಕೊ ಆಡುತ್ತಿದ್ದೆ.  ವೇಗವಾಗಿ ಓಡುತ್ತಿದ್ದೆ.  ಹಲವು ಸಲ ಉತ್ತಮ ಓಟಗಾರನೆಂಬ ಪ್ರಶಂಸೆ ಸಿಕ್ಕಿತ್ತು. 100ಮೀಟರ್ ಓಟದಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾನು ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕ್ರೀಡೆಯಲ್ಲಿ ಸಾಧಿಸಲೆಂದು ಹಟಕ್ಕೆ ಬಿದ್ದು ತಂದೆ-ತಾಯಿಯ ಪ್ರೋತ್ಸಾಹದ ಮೇರೆಗೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಓದಲು ಸೇರಿ ಕ್ರೀಡೆ ಮುಂದುವರಿಸಿದೆ.

ನಿಮ್ಮ ಸಾಧನೆಯ ಓಟವನ್ನು ವಿವರಿಸಿ.
ಪಿಯುಸಿ ಓದುವಾಗ ರಾಷ್ಟ್ಮಮಟ್ಟದ ಆರು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದೇನೆ. ಮೊದಲ ನಾಲ್ಕು ಜೂನಿಯರ್ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ ನಿರಂತರ ಸೋಲಾದರೂ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೊಯಮತ್ತೂರಿನಲ್ಲಿ ನಡೆದ ಐದನೇ ಜೂನಿಯರ್ ನ್ಯಾಷನಲ್‌ನಲ್ಲಿ  ಮೂರನೇ ಸ್ಥಾನ, ರಾಂಚಿಯಲ್ಲಿ ನಡೆದ ಆರನೇ ಜೂನಿಯರ್ ನ್ಯಾಷನಲ್‌ನಲ್ಲಿ ಒಂನೇ ಸ್ಥಾನ ಪಡೆದೆ. ಇದು ಮೊದಲ ಮೆಟ್ಟಿಲಿನ ಸಾಧನೆಗಳು. ಆನಂತರ ಈಚೆಗೆ  ಚೆನ್ನೈನಲ್ಲಿ ನಡೆದ 57ನೇ ಸೀನಿಯರ್ ನ್ಯಾಷನಲ್‌ನಲ್ಲಿ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ.

ನೌಕಾದಳದ ನೌಕರನಾಗಿ ಹೇಗೆ ಆಯ್ಕೆಯಾದಿರಿ?
ರಾಂಚಿಯಲ್ಲಿ ನಡೆದ ಆರನೇ ಜೂನಿಯರ್ ನ್ಯಾಷನಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕಾರಣ (ಕ್ರೀಡಾ ಕೋಟಾದಡಿ) ನೌಕಾದಳದ ಕೇರಳದ ಕೊಚ್ಚಿ ವಿಭಾಗ ನನಗೆ ನೌಕರಿ ನೀಡಿ ಆಯ್ಕೆ ಮಾಡಿಕೊಂಡಿತು. ಎರಡು ವರ್ಷ ನೌಕರಿಯೊಟ್ಟಿಗೆ ಓಟದ ತರಬೇತಿ ಸಿಕ್ಕಿತು. ಓಟದಿಂದ ಗಾಯಗೊಂಡ ಹಿನ್ನೆಲೆ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ. ನೌಕಾಸೇನೆ, ವಾಯುಸೇನೆ ಹಾಗೂ ಭೂ ಸೇನೆಯ ಕ್ರೀಡಾಪಟುಗಳಿಗೆ ನಡೆದ 100ಮೀಟರ್ ಓಟದ ಸೀನಿಯರ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದೆ. ಸೇನಾ ವಿಭಾಗದಿಂದ ಮೂರು ಓಟಗಾರರು ಹಾಗೂ ವಿವಿಧ ರಾಜ್ಯಗಳಿಂದ 50ಕ್ಕೂ ಅಧಿಕ ಆಟಗಾರರು ಚೆನ್ನೈನಲ್ಲಿ ನಡೆದ 57ನೇ  ಸೀನಿಯರ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ನಾನು ಪ್ರಥಮ ಸ್ಥಾನ ಪಡೆದೆ. ಎರಡು ವರ್ಷ ಕೊಚ್ಚಿಯಲ್ಲಿ ಸುಧೀರ್ಘ ತರಬೇತಿ ಸಿಕ್ಕಿತು. 

ಜೂನಿಯರ್ ವಿಭಾಗದಲ್ಲಿ ಓಟದಲ್ಲಿ ಪಾಲ್ಗೊಳ್ಳಲು ಕಾರಣ?
ಗುಬ್ಬಿ ಶ್ರೀಚನ್ನಬಸವೇಶ್ವರ ಯುವಕ ಸಂಘದ ಸಿ.ಆರ್.ಶಂಕರ್ ಕುಮಾರ್ ಹಾಗೂ ಆಳ್ವಾಸ್‌ನಲ್ಲಿ ತರಬೇತಿ ನೀಡಿದ ಶಾಂತಾರಾಮ್ ಸ್ಫೂರ್ತಿ ತುಂಬಿದರು. ಸೀನಿಯರ್ ವಿಭಾಗದಲ್ಲಿ ಚೆನ್ನೈನಲ್ಲಿ 100ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಕುರಿತು ಚೆನ್ನೈನಲ್ಲಿ ನಡೆದ 57ನೇ ಚಾಂಪಿಯನ್‌ಷಿಪ್‌ನಲ್ಲಿ 50ಕ್ಕೂ ಅಧಿಕ ಸ್ಪರ್ಧಿಗಳು ಇದ್ದರು. ಮೂರು ಸುತ್ತುಗಳಲ್ಲಿ ಓಡಿಸಿ ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಯಿತು. ಈ ಹಂತದಲ್ಲಿ ಸೇನಾ ವಿಭಾಗದಿಂದ ಬಂದಿದ್ದ ಮೂವರು ಇದ್ದೆವು. ಇದರಲ್ಲಿ ಪ್ರಥಮ, ತೃತೀಯ ಸ್ಥಾನ ಸೇನೆಗೆ ದಕ್ಕಿದರೆ, ದ್ವಿತೀಯ ಸ್ಥಾನ ತಮಿಳುನಾಡು ಕಾಲೇಜೊಂದರ ವಿದ್ಯಾರ್ಥಿಗೆ ಸಿಕ್ಕಿತು.

ನಿಮ್ಮ ಮುಂದಿನ ಗುರಿ?
ಸಧ್ಯಕ್ಕೆ ಏಷ್ಯನ್ ಗೇಮ್, ಕಾಮನ್ ವೆಲ್ತ್ ಗೆ ಸಿದ್ದತೆ ನಡೆದಿದೆ. ಇಲ್ಲಿ ಉತ್ತಮ ಆಟಕ್ಕಾಗಿ ತರಬೇತಿ, ಮಾರ್ಗದರ್ಶನ ಪಡೆಯುತ್ತಿದ್ದೇನೆ. 2020ರ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ ಗೆ ಭಾರತದ 100 ಮೀಟರ್ ಓಟದ ಆಟಗಾರನಾಗಿ  ಅರ್ಹತೆ ಪಡೆಯಲು ಅಭ್ಯಾಸ ನಡೆಸಿದ್ದೇನೆ. ಈಗ ಪೂರ್ಣ ಸಹಕಾರವನ್ನು ಸೇನಾ ವಿಭಾಗ ವಹಿಸಿಕೊಂಡಿದೆ. ಪೋಷಕರು, ತರಬೇತುದಾರರು, ನಮ್ಮ ಶಿಕ್ಷಕರುಗಳು ಸಹಾಯ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ನಿಮಗೆ ತರಬೇತಿ ನೀಡುತ್ತಿರುವವರು ಯಾರು?
ಆಂಧ್ರ ಪ್ರದೇಶದ ವಿಜಯ್ ಭೂಷಿ ಎನ್ನುವರು ಓಟದ ತರಬೇತಿ ನೀಡುತ್ತಿದ್ದಾರೆ. ಇವರು ಸೇನೆಯಲ್ಲಿನ ಅಥ್ಲಟಿಕ್ ಆಟಗಾರರಿಗೆ ನಿತ್ಯ ತರಬೇತಿ ನೀಡುತ್ತಾರೆ. ಇವರಲ್ಲಿನ ಕ್ರೀಡಾ ಶಿಸ್ತು, ಸಮಯಪಾಲನೆ ನಮ್ಮನ್ನು ಎಚ್ಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT