ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಕಾರ್‌: ಹೊಸ ವಸತಿ ಯೋಜನೆ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈನ ಓಂಕಾರ್‌ ರಿಯಲ್ಟರ್ಸ್‌ ಮತ್ತು ಡೆವಲಪರ್ಸ್‌ ಸಂಸ್ಥೆ, ನವೆಂಬರ್‌ ಅಂತ್ಯದ ವೇಳೆಗೆ ಮುಂಬೈನಲ್ಲಿ  ಹೊಸ ವಸತಿ ಯೋಜನೆ ಉದ್ಘಾಟಿಸುತ್ತಿರುವುದಾಗಿ ತಿಳಿಸಿದೆ.

ರೇರಾ ಕಾಯ್ದೆ ನಿಯಮಗಳಿಗೆ ಅನುಗುಣವಾಗಿ ಈ ವಸತಿ ಯೋಜನೆ ನಿರ್ಮಿಸಲಾಗಿದ್ದು, ‘ಪಾಸ್‌ಕೋಡ್‌ ಅಂಧೇರಿ ಹೈವೆ’ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದೆ. ಇದು ಮುಂಬೈನ ವೆಸ್ಟರ್ನ್‌ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿರುವ ಅಂಧೇರಿ–ಜೋಗೇಶ್ವರಿ ಕಾರಿಡಾರ್‌ ಪ್ರದೇಶದಲ್ಲಿ ಇದೆ.

ಈ ವಸತಿ ಯೋಜನೆಯಲ್ಲಿ 1, 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳಿವೆ. ಇವುಗಳ ಬೆಲೆ ₹87ಲಕ್ಷದಿಂದ ₹1.6 ಕೋಟಿವರೆಗೆ ಇದೆ. ಫ್ಲ್ಯಾಟ್‌ಗಳ ವಿಸ್ತೀರ್ಣ 355 ಚದರ ಅಡಿಯಿಂದ 710 ಚದರ ಅಡಿವರೆಗೆ ಇದೆ.

ಈಜುಕೊಳ, ಟೆನ್ನಿಸ್‌ಕೋರ್ಟ್‌, ಉದ್ಯಾನ, ಬಾಸ್ಕೆಟ್‌ಬಾಲ್ ಕೋರ್ಟ್‌, ಯೋಗ ಮತ್ತು ಧ್ಯಾನ ಕೇಂದ್ರಗಳು, ಜಿಮ್‌ ಹೀಗೆ ಅಗತ್ಯ 30 ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವಿನ್ಯಾಸ ಮತ್ತು ವಾಸ್ತುಶಾಸ್ತ್ರ ವಿಭಾಗದ ಅಧ್ಯಕ್ಷ, ಅಮರ್ ತೆಂಡೂಲ್ಕರ್, "ಈ ಯೋಜನೆಯಲ್ಲಿ ಒಂದು ಕೋಟಿಗಿಂತ ಕಡಿಮೆ ಬೆಲೆಯ ಫ್ಲ್ಯಾಟ್‌ಗಳು ಹಲವು ಇವೆ. ಮೊದಲ ಹಂತದಲ್ಲಿ 1200ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT