ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರೇ ಉತ್ತಮ ಚಾಲಕರು

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಉತ್ತಮ ಚಾಲಕರು ಎಂದು ನಾರ್ವೆಯ ಸಾರಿಗೆ ಸಂಸ್ಥೆ ತಿಳಿಸಿದೆ.

ವಾಹನ ಚಲಾಯಿಸುವಾಗ ಮಹಿಳೆಯರು ತಮ್ಮ ಗಮನವನ್ನು ಬೇರೆಡೆ ಹರಿಸುವ ಸಾಧ್ಯತೆಗಳು ತುಂಬಾ ಕಡಿಮೆ. ಹೀಗಾಗಿ ಏಕಾಗ್ರತೆಯಿಂದ ವಾಹನ ಚಲಾಯಿಸುತ್ತಾರೆ. ಪುರುಷರು ಹೆಚ್ಚು ಚಂಚಲರಾಗುವುದರಿಂದ ತಪ್ಪುಗಳನ್ನು ಮಾಡುತ್ತಾರೆ ಎಂದು ಸಂಸ್ಥೆಯು ನಡೆಸಿದ ಅಧ್ಯಯನ ತಿಳಿಸಿದೆ.

ವಾಹನ ಚಲಾಯಿಸುವಾಗ ಮಹಿಳೆಯರ ಏಕಾಗ್ರತೆ ಮತ್ತು ಅವರ ವರ್ತನೆ ಮುಂತಾದ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಮಹಿಳೆಯರು ಉತ್ತಮ ಚಾಲಕರಲ್ಲ ಎನ್ನುವ ಮನೋದೃಷ್ಟಿಯನ್ನು ಈ ಅಧ್ಯಯನ ಅಲ್ಲಗಳೆದಿದೆ. ಯುವಕರು ಅಥವಾ ನರರೋಗಿಗಳು ವಾಹನ ಚಲಾಯಿಸುವಾಗ ಹೆಚ್ಚು ಚಂಚಲ ಮನಸ್ಥಿತಿ ಹೊಂದಿರುತ್ತಾರೆ. ಹೀಗಾಗಿ ಇವರು ವಾಹನ ಚಲಾಯಿಸುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.

ವಾಹನ ಚಲಾಯಿಸುವವರ ವಯಸ್ಸು ಸಹ ಮುಖ್ಯವಾಗಿದೆ. ಯುವಕ ಮತ್ತು ಯುವತಿಯರಿಗೆ ಹೋಲಿಸಿದರೆ ಹೆಚ್ಚು ವಯಸ್ಸಾದವರು ಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಾರೆ. ಯುವ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಚಂಚಲರಾಗುತ್ತಾರೆ ಎನ್ನುವುದು ಸಹ ತಿಳಿದು ಬಂದಿದೆ.

ಈ ಅಧ್ಯಯನಕ್ಕಾಗಿ ಸಂಸ್ಥೆಯ ಓಲೆ ಜೋಹಾನ್ಸನ್ ಅವರು, ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ವಯಸ್ಕರ ಗುಂಪುಗಳನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT