ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಫರ್‌ ಉತ್ತಮ ರೈಡರ್‌; ಶಬ್ಬೀರ್‌ ವೇಗದ ಚಾಲಕ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ತುಮಕೂರು: ಕಡಿದಾದ ಮಾರ್ಗದಲ್ಲಿ ತಿರುವುಗಳನ್ನು ಚಾಣಾಕ್ಷ್ಯತನದಿಂದ ದಾಟಿದ ಸವಾರರು; ಕೆಲವು ಕಡೆ ಕೆಸರು ಸೀಳಿಕೊಂಡು ಮುನ್ನುಗ್ಗಿದ ಬೈಕ್‌ ಮತ್ತು ಕಾರುಗಳು. ಇಂಥ ರೋಮಾಂಚಕ ರೇಸ್‌ಗೆ ಸಾಕ್ಷಿಯಾದ ಪ್ರೇಕ್ಷಕರಿಂದ ಚಪ್ಪಾಳೆ, ಸಿಳ್ಳೆ, ಕೇಕೆ.

ವಾಸ ಆಟೊ ಕ್ರಾಸ್‌ ಸಂಸ್ಥೆ, ಆಟೊ ಟ್ರ್ಯಾಕ್‌ ಮಾಸ ಪತ್ರಿಕೆ ಆಶ್ರಯದಲ್ಲಿ ಭಾನುವಾರ ಇಲ್ಲಿಗೆ ಸಮೀಪದ ಯಲ್ಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಡರ್ಟ್ ಟ್ರ್ಯಾಕ್ ರೇಸ್‌ ನೂರಾರು ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿತು.

ತುಮಕೂರಿನ ಜಾಫರ್‌ ಸದ್ದು ಅವರು ನೋವೆಸ್‌ ಓಪನ್‌ ವಿಭಾಗದಲ್ಲಿ ತೃತೀಯ, ಇಂಡಿಯನ್‌ ಓಪನ್ ವಿಭಾಗದಲ್ಲಿ ಪ್ರಥಮ ಮತ್ತು ಎಕ್ಸ್‌ಪರ್ಟ್ ಕ್ಲಾಸ್‌ನಲ್ಲಿ ತೃತೀಯ ಸ್ಥಾನ ಗಳಿಸಿದರು. ಈ ಸಾಧನೆ ಅವರಿಗೆ ಉತ್ತಮ ರೈಡರ್‌ ಪ್ರಶಸ್ತಿಯನ್ನು ತಂದುಕೊಟ್ಟಿತು. ಎ.ಆರ್‌.ಶಬ್ಬೀರ್‌ 1:12.00 ನಿಮಿಷದಲ್ಲಿ ಕಾರು ಚಲಾಯಿಸಿ ವೇಗದ ಡ್ರೈವರ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫಲಿತಾಂಶಗಳು
ಬೈಕ್‌ ರೇಸ್‌: ಎಕ್ಸ್‌ಪರ್ಟ್ ಕ್ಲಾಸ್:
ಎಂ.ಡಿ.ಜಹೀರ್‌ (ಬೆಂಗಳೂರು)–1, ಸತೀಶ್‌ (ಬೆಂಗಳೂರು)–2, ಜಾಫರ್‌ ಸದ್ದು (ತುಮಕೂರು)–3; ನೋವೆಸ್‌ ಓಪನ್‌ ವಿಭಾಗ: ಸತೀಶ್‌ (ಬೆಂಗಳೂರು)–1, ಸೈಯದ್‌ ಇಬ್ರಾಹಿಂ (ಬೆಂಗಳೂರು)–2, ಜಾಫರ್‌ ಸದ್ದು (ತುಮಕೂರು)–3; ಇಂಡಿಯನ್‌ ಓಪನ್‌ ವಿಭಾಗ: ಜಾಫರ್‌ ಸದ್ದು (ತುಮಕೂರು)–1, ಸತೀಶ್‌ (ಬೆಂಗಳೂರು)–2, ಎಂ.ಡಿ.ಜಹೀರ್‌ (ಬೆಂಗಳೂರು)–3.

ಕಾರ್ ರೇಸ್‌: 800 ಸಿಸಿ: ರಾಜಶೇಖರ್‌ ಗೌಡ, ಬಬನ್‌ ಖಾನ್‌, ಶ್ರೀ ಹರಿ ಮಧುಗಿರಿ; ನೋವೆಸ್‌ ಓಪನ್‌ ವಿಭಾಗ: ವಿವೇಕ್‌ ಮುದಗೇರಿ, ಫಾರುಖ್‌ ಮುದಗೇರಿ; ಇಂಡಿಯನ್‌ ಓಪನ್‌ ವಿಭಾಗ: ಎ‌.ಆರ್‌.ಶಬ್ಬಿರ್‌, ಲೋಕೇಶ್‌ ಗೌಡ, ಬಬನ್‌ ಖಾನ್‌; ನೋವೆಸ್‌ ಕ್ಲಾಸ್‌: ರಕ್ಷಿತ್‌, ನವೀನ್‌ ಪುಟ್ಟಣ್ಣ; 1001 ರಿಂದ 1400 ಸಿಸಿ: ಬಿ.ಸಿ. ರೂಪೇಶ್‌, ಸಶ್ವೀನ್‌ ರೆಡ್ಡಿ, ಎ.ಆರ್‌.ಶಬ್ಬೀರ್‌; ನೋವೆಸ್‌:ನಿಜಾಮುದ್ದೀನ್‌, ನವೀನ್‌ ಪುಟ್ಟಣ್ಣ; 1401ರಿಂದ 1600ಸಿಸಿ: ಬಬನ್‌ ಖಾನ್‌, ಲೋಕೇಶ್‌ ಗೌಡ, ಬಿ.ಸಿ.ರೂಪೇಶ್‌; ನೋವೆಸ್‌ ಕ್ಲಾಸ್‌: ರಕ್ಷೀತ್‌, ಅವಿನಾಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT