ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಸೇತುವೆ ವಿರೋಧಿಸಿ ಪ್ರತಿಭಟನೆಗೆ ನಿರ್ಧಾರ

Last Updated 19 ನವೆಂಬರ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾನಂದ ವೃತ್ತದ ಬಳಿ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ಮುಂದಿನ ವಾರ ಮತ್ತೆ ಪ್ರತಿಭಟನೆ ನಡೆಸಲು ಸ್ಥಳೀಯ ನಿವಾಸಿಗಳು ನಿರ್ಧರಿಸಿದ್ದಾರೆ.

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ನೇತೃತ್ವದಲ್ಲಿ ಶ್ರೀಕಾಂತ ಬಡಾವಣೆ ಹಾಗೂ ಮಾಧವ ನಗರದ ನಿವಾಸಿಗಳು ಶಿವಾನಂದ ವೃತ್ತದ ಬಳಿ ಶನಿವಾರ ಸಭೆ ನಡೆಸಿದರು.

‘ಈ ವೃತ್ತದ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ. ರೈಲ್ವೆ ಕೆಳಸೇತುವೆ ಬಳಿ ಮಾತ್ರ ದಟ್ಟಣೆ ಇರುತ್ತದೆ. ಅಲ್ಲಿನ ಸೇತುವೆಯನ್ನು ವಿಸ್ತರಣೆ ಮಾಡಬೇಕು. ಆದರೆ, ಮೇಲ್ಸೇತುವೆ ಅಗತ್ಯವಿಲ್ಲ’ ಎಂದು ಚಿತ್ರಾ ವೆಂಕಟೇಶ್‌ ಒತ್ತಾಯಿಸಿದರು.

‘ಉಕ್ಕಿನ ಸೇತುವೆ ಎಂಬ ಕಾರಣಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಯಾವುದೇ ಸೇತುವೆಯೂ ಇಲ್ಲಿ ಅಗತ್ಯವಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT