ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೂರ್‌ ಟ್ವೀಟ್‌ಗೆ ಮಹಿಳಾ ಆಯೋಗ ಆಕ್ಷೇಪ

Last Updated 19 ನವೆಂಬರ್ 2017, 20:08 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರ ಟೀಕಿಸುವ ಭರದಲ್ಲಿ ನೂತನ ವಿಶ್ವ ಸುಂದರಿ ಮಾನುಷಿ ಅವರ ಅಡ್ಡ ಹೆಸರು ‘ಛಿಲ್ಲರ್‌’ ಅನ್ನು ಬಳಸಿ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರು ಮಾಡಿದ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ತರೂರ್‌ ಅವರ ಟ್ವೀಟ್‌ ಅನ್ನು ‘ಅವಹೇಳನಕಾರಿ’ ಎಂದು ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಅವರಿಗೆ ಸಮನ್ಸ್‌ ನೀಡಲು ನಿರ್ಧರಿಸಿದೆ.

‘ನೋಟು ರದ್ದತಿ ನಿರ್ಧಾರ ಎಂತಹ ದೊಡ್ಡ ತಪ್ಪು! ಭಾರತದ ನಗದು ವಿಶ್ವದೆಲ್ಲೆಡೆ ಮಾನ್ಯತೆ ಹೊಂದಿದೆ. ಈಗ ನೋಡಿ, ನಮ್ಮ ‘ಛಿಲ್ಲರ್‌’ ಕೂಡ ವಿಶ್ವ ಸುಂದರಿ’ ಎಂದು ವ್ಯಂಗವಾಗಿ ತರೂರ್‌ ಟ್ವೀಟ್‌ ಮಾಡಿದ್ದರು.

ತಮ್ಮ ಟ್ವೀಟ್‌ಗೆ ಕ್ಷಮೆ ಕೋರಿರುವ ತರೂರ್‌ ಅದೊಂದು ಲಘು ಹಾಸ್ಯದ ಟ್ವೀಟ್‌ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT