ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

Last Updated 20 ನವೆಂಬರ್ 2017, 5:55 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಅನುಬಂಧ– ಇ ಮತ್ತು ಎಸ್‌ಸಿಎಸ್‌ಪಿ ಯೋಜನೆಗಳಡಿ ಕ್ಷೇತ್ರದ ವಿವಿಧೆಡೆ ₹ 20 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಮೇಳಾಪುರ ಬಳಿ ಚಂದಗಾಲು– ಮಹದೇವಪುರ– ಬಿದರಹಳ್ಳಿ ಸಂಪರ್ಕ ರಸ್ತೆಯ 4,63 ಕಿ.ಮೀ ನಿಂದ 8.63ನೇ ಕಿ.ಮೀ. ವರೆಗಿನ ರಸ್ತೆ ಹಾಗೂ ಮೈಸೂರು ಮಾರ್ಗದ ಕೊತ್ತತ್ತಿ ರಸ್ತೆಯಿಂದ ಹಂಪಾಪುರ ಸಂಪರ್ಕ ರಸ್ತೆ ವರೆಗೆ ಒಟ್ಟು ರೂ. 5.20 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘₹ 1.20 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಬಿ.ಎಂ. ರಸ್ತೆಯಿಂದ ಆಲಗೂಡು– ಕೊಡಿಯಾಲ– ಯಲಿಯೂರು ವೃತ್ತ ಸಂಪರ್ಕ ರಸ್ತೆ, ರೂ.80 ಲಕ್ಷ ವೆಚ್ಚದಲ್ಲಿ ದೊಡ್ಡಪಾಳ್ಯ–ಬಸವನಪುರ–ಮುಂಡುಗದೊರೆ– ನೀಲನಕೊಪ್ಪಲು ರಸ್ತೆ, ರೂ.2 ಕೋಟಿ ವೆಚ್ಚದಲ್ಲಿ ಹುಂಜನಕೆರೆಯಿಂದ ಕೆರೆಮೇಗಲಕೊಪ್ಪಲು ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

‘ಬಿ.ಎನ್‌. ರಸ್ತೆಯಿಂದ ಚಂದಗಿರಿಕೊಪ್ಪಲು– ರಾಂಪುರ– ಆರತಿಉಕ್ಕಡ ಸಂಪರ್ಕ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡ 900 ಮೀಟರ್‌ ಸಿಸಿ ಚರಂಡಿಯನ್ನು ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮದ್ರಾಸ್‌– ಕಣ್ಣಾನೂರು ರಸ್ತೆಯಿಂದ ಬಲಮುರಿ ಫಾಲ್ಸ್‌ ವರೆಗೆ 1790 ಮೀಟರ್‌ ಉದ್ದದ ರಸ್ತೆ ಹಾಗೂ 680 ಮೀಟರ್ ಉದ್ದ ಸಿಸಿ ಚರಂಡಿಯನ್ನು ₹ 2.50 ಕೋಟಿ ವೆಚ್ಚದಲ್ಲಿ, ಗೌಡಹಳ್ಳಿ– ಜಕ್ಕನಹಳ್ಳಿ ಸಂಪರ್ಕ ರಸ್ತೆಯ ಸರಪಳಿ 3ರಿಂದ 5.80 ಕಿ.ಮೀ. ವರೆಗಿನ ರಸ್ತೆ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ’ ಎಂದು ಅವರು ತಿಳಿಸಿದರು.

‘ಪರಿಶಿಷ್ಟ ಜಾತಿ ಉಪ ಯೋಜನೆಯಡಿ ತಾಲ್ಲೂಕಿನ ಬೊಂತಗಹಳ್ಳಿ, ಚಿಕ್ಕಅಂಕನಹಳ್ಳಿ ಹಾಗೂ ಬೆಳವಾಡಿ ಗ್ರಾಮ ವ್ಯಾಪ್ತಿಯ 850 ಮೀಟರ್‌ ರಸ್ತೆ ಹಾಗೂ 620 ಮೀಟರ್‌ ಸಿಸಿ ಚರಂಡಿಯನ್ನು ₹ 75 ಲಕ್ಷದಲ್ಲಿ; ಮರಳಾಗಾಲದಲ್ಲಿ 410 ಮೀಟ ಉದ್ದದ ರಸ್ತೆ ಹಾಗೂ ಸಿಸಿ ಚರಂಡಿಯನ್ನು ರೂ.47.27 ಲಕ್ಷ ವೆಚ್ಚದಲ್ಲಿ; ಹುರಳಿ ಕ್ಯಾತನಹಳ್ಳಿ, ಹೆಬ್ಬಾಡಿ, ಬಾಬುರಾಯನಕೊಪ್ಪಲು ಮತ್ತು ದೊಡ್ಡೇಗೌಡನಕೊಪ್ಪಲು ಗ್ರಾಮಗಳ ಒಟ್ಟು 895 ಮೀಟರ್‌ ರಸ್ತೆ ಮತ್ತು 610 ಮೀಟರ್‌ ಸಿಸಿ ಚರಂಡಿಯನ್ನು ರೂ. 70 ಲಕ್ಷದಲ್ಲಿ ಹಾಗೂ ಎಂ. ಶೆಟ್ಟಹಳ್ಳಿ ಮತ್ತು ಬೆಳಗೊಳ ಗ್ರಾಮಗಳ 190 ಮೀಟರ್‌ ರಸ್ತೆ, 335 ಮೀಟರ್‌ ಸಿಸಿ ಚರಂಡಿಯನ್ನು ₹ 30 ಲಕ್ಷದಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಚಿನ್ನಮಾರೇಗೌಡ, ಜೂನಿಯರ್‌ ಎಂಜಿನಿಯತರ್‌ ಉದಯ್‌, ಯಜಮಾನ್‌ ಪಾಪೇಗೌಡ, ಮುದ್ದೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವೀಣಾ, ಇಂದ್ರಮ್ಮ, ಮಾಜಿ ಸದಸ್ಯ ಲಕ್ಷ್ಮಣ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಎನ್‌.ವಿ. ಚಲುವರಾಜು, ಜಿ.ಎಲ್‌. ಲಕ್ಷ್ಮೇಗೌಡ, ಎಂ. ಜಯರಾಂ, ಹುಸೂರು ಶೇಖರ್‌, ಶಿವಮಲ್ಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT