ಶಿಗ್ಗಾವಿ

ಒಗ್ಗಟ್ಟು ಮೂಡಿಸುವ ಹಬ್ಬ ಹರಿದಿನಗಳು

ಪರಂಪರಾಗತವಾಗಿ ಆಚರಣೆ ಮಾಡುತ್ತಿರುವ ಹಬ್ಬ ಹರಿದಿನಗಳು ಸರ್ವ ಜನಾಂಗದಲ್ಲಿ ಒಗ್ಗಟ್ಟು, ಸಹಬಾಳ್ವೆ ಮೂಡಿಸುತ್ತಿವೆ. ಹೀಗಾಗಿ ಅವುಗಳನ್ನು ಇಂದಿಗೂ ಆಚರಿಸುತ್ತಾ ಬರಲಾಗಿದೆ

ಶಿಗ್ಗಾವಿ: ಪರಂಪರಾಗತವಾಗಿ ಆಚರಣೆ ಮಾಡುತ್ತಿರುವ ಹಬ್ಬ ಹರಿದಿನಗಳು ಸರ್ವ ಜನಾಂಗದಲ್ಲಿ ಒಗ್ಗಟ್ಟು, ಸಹಬಾಳ್ವೆ ಮೂಡಿಸುತ್ತಿವೆ. ಹೀಗಾಗಿ ಅವುಗಳನ್ನು ಇಂದಿಗೂ ಆಚರಿಸುತ್ತಾ ಬರಲಾಗಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪಿ.ಎ.ಸಂಜಯ್‌ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಮಂಜುನಾಥ ನಗರದಲ್ಲಿ ಮಂಜುನಾಥಸ್ವಾಮಿ ಟ್ಟಸ್ಟ್‌ ಕಮಿಟಿ ಆಶ್ರಯದಲ್ಲಿ ಕಾರ್ತೀಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ನಡೆದ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಶಂಕರಯ್ಯ ಮಹಾಂತಿನಮಠ ಸಾನಿಧ್ಯ ವಹಿಸಿದ್ದರು. ಮಂಜುನಾಥಸ್ವಾಮಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಮಾಲತೇಶ ಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಂಗಾಧರ ಗುಡಿಮನಿ, ಮಂಜುನಾಥ ಗುಡಿಮನಿ, ಶಿವಾನಂದ ಗೌಡರ, ಪುರಸಭೆ ಮುಖ್ಯಾಧಿಕಾರಿ ಎಚ್‌.ಎ.ಕುಮಾರ, ಸದಸ್ಯೆ ಸುನೀತಾ ಬೆಟಗೇರಿ, ಮಾತನೇಶ ನರಗುಂದ, ನಾಗಪ್ಪ ಬೆಟಗೇರಿ ಮತ್ತಿತರರು ಇದ್ದರು.

ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ, ದೀಪಾರಾಧನೆ ಹಾಗೂ ಮಂಜುನಾಥಸ್ವಾಮಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಇದೇ ವೇಳೆ ಸಮಿತಿ ವತಿಯಿಂದ ಸೇವಾಧಾರಿಗಳನ್ನು ಸನ್ಮಾನಿಸಲಾಯಿತು. ಭದ್ರಾವತಿ ಆರ್‌.ಹರೀಶ ಮತ್ತು ಕಲಾತಂಡದಿಂದ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿತು.

Comments
ಈ ವಿಭಾಗದಿಂದ ಇನ್ನಷ್ಟು
ಮೂಢನಂಬಿಕೆ ನಿರ್ಮೂಲನೆಗೆ ಕಾಂತ್ರಿ ಅಗತ್ಯ

ಹಾನಗಲ್
ಮೂಢನಂಬಿಕೆ ನಿರ್ಮೂಲನೆಗೆ ಕಾಂತ್ರಿ ಅಗತ್ಯ

24 Jan, 2018

ಅಕ್ಕಿಆಲೂರ
‘ರೈತನ ಹೆಗಲ ಮೇಲೆ ಸಾಲದ ಹೊರೆ’

‘ಕೃಷಿ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದೆ. ಆದರೆ, ರೈತನ ಉತ್ಪನ್ನಗಳು ಮಾತ್ರ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ. ಇದನ್ನೇ ಸರ್ಕಾರಗಳು ಕೃಷಿ ಸಂಸ್ಕೃತಿಯ ಅವನತಿಯ ಸೂತ್ರವನ್ನಾಗಿಸಿಕೊಂಡಿವೆ’

24 Jan, 2018

ರಾಣೆಬೆನ್ನೂರು
ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು

‘ಬೆಳೆವಿಮೆ ತುಂಬಿದ ರೈತರ ದಾಖ ಲಾತಿಗಳನ್ನು ಪರಿಶೀಲನೆ ಮಾಡಲು ಕೃಷಿ ಇಲಾಖೆಗೆ ಭೇಟಿ ನೀಡಿದ್ದ ವಿಮಾ ಕಂಪೆನಿಯ ಅಧಿಕಾರಿಗಳನ್ನು ಕೂಡಿ ಹಾಕಲಾಗಿದೆ.

24 Jan, 2018

ಹಾವೇರಿ
ಕೈದಿ ಮಗಳಿಗೆ ಹೆಸರಿಟ್ಟ ಜಿಲ್ಲಾಧಿಕಾರಿ

ಮಗುವಿನ ತಾಯಿಯ ಮೊಗದಲ್ಲಿ ನೋವು ಮರೆಯಾಗಿ, ಮಂದಹಾಸ ಮೂಡಿದರೆ, 2 ವರ್ಷದ ಆರುಷಿ (ಮೊದಲ ಮಗಳು) ಅತಿಥಿಗಳನ್ನೇ ಸಂಭ್ರಮದಿಂದ ನೋಡುತ್ತಿದ್ದಳು.

24 Jan, 2018
ಸಾಲಗಾರರು ನಾವಲ್ಲ, ಸರ್ಕಾರವೇ ಬಾಕಿದಾರ

ಹಾವೇರಿ
ಸಾಲಗಾರರು ನಾವಲ್ಲ, ಸರ್ಕಾರವೇ ಬಾಕಿದಾರ

23 Jan, 2018