ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಗೀತೆಗಳ ನೃತ್ಯ ವೈಭವ: ವಿಚಾರಗೋಷ್ಠಿ ಗೌಣ

Last Updated 20 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕನ್ನಡ ನಾಡಿನ ಶ್ರೀಮಂತ ಪರಂಪರೆಯನ್ನು ಸಾರುವ ಕನ್ನಡ ಗೀತೆಗಳ ನೃತ್ಯ ವೈಭವ ಪ್ರೇಕ್ಷಕರ ಕಣ್ಮನಗಳನ್ನು ತಣಿಸಿತು. ಪೊನ್ನಂಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕನ್ನಡದ ವೈವಿಧ್ಯಮಯ ಹಾಡುಗಳಿಗೆ ನೃತ್ಯ ರೂಪಕದ ಮೂಲಕ ಸಭಿಕರನ್ನು ರಂಜಿಸಿದರು. ಸಮ್ಮೇಳನದಲ್ಲಿ ವಿದ್ಯಾರ್ಥಿಗಳದ್ದೇ ಸಂಭ್ರಮ. ಬೆಳಗಿನಿಂದ ಆರಂಭವಾದ ನೃತ್ಯ– ಸಂಗೀತ ರಾತ್ರಿ 10 ಗಂಟೆವರೆಗೂ ನಡೆಯಿತು.

ವಿಚಾರ ಗೋಷ್ಠಿ ಗೌಣ: ವಿಚಾರಗೋಷ್ಠಿಗಳ ಮಧ್ಯದಲ್ಲಿಯೇ ಸಾಂಸ್ಕೃತಿಕ ನೃತ್ಯಗಳನ್ನು ಆಯೋಜಿಸಲಾಗಿತ್ತು. ಒಂದು ಭಾಷಣ ಮತ್ತೊಂದು ನೃತ್ಯ. ಹೀಗೆ ಕಾರ್ಯಕ್ರಮ ಜರುಗಿತು. ಇದರಿಂದ ಭಾಷಣಕಾರರು ಸ್ವಲ್ಪ ಕಿರಿಕಿರಿ ಅನುಭವಿಸಿದರೆ; ಆಯೋಜಕರು ‘ಕೇವಲ ಭಾಷಣ ಏರ್ಪಡಿಸಿದರೆ ಸಭಾಂಗಣ ಖಾಲಿಯಾಗುತ್ತದೆ. ಆದ್ದರಿಂದ ಭಾಷಣಗಳ ಜತೆಯಲ್ಲಿಯೇ ನೃತ್ಯ, ಸಂಗೀತಗಳನ್ನು ಆಯೋಜಿಸಲಾಗಿದೆ.

ನೋಡಿ ಸ್ವಲ್ಪ ಕುರ್ಚಿಗಳಾ ದರೂ ತುಂಬಿವೆ’ ಎಂದು ಸಮಜಾಯಿಷಿ ಕೊಟ್ಟರು. ‘ಇದು ಸಾಹಿತ್ಯ ಸಮ್ಮೇಳನವಲ್ಲ. ಕಲಾ ಮೇಳ’ ಎಂದು ಜನತೆ ಮಾತನಾಡಿ ಕೊಳ್ಳುತ್ತಿದ್ದರು. ಭಾಷಣಕಾರರು ಮಾತ ನಾಡುತ್ತಿದ್ದರೆ ನೃತ್ಯಕ್ಕೆ ಸಿದ್ಧವಾಗಿದ್ದ ವಿದ್ಯಾರ್ಥಿಗಳು ವೇದಿಕೆ ಏರಲು ತದಿಗಾಲಲ್ಲಿ ನಿಲ್ಲುತ್ತಿದ್ದರು. ಹೀಗಾಗಿ, ಸಮ್ಮೇಳನದಲ್ಲಿ ಕೃಷಿ ಸಂಸ್ಕೃತಿ ಮತ್ತು ಶೈಕ್ಷಣಿಕ ಗೋಷ್ಠಿಗಳಿಗೆ ಮಹತ್ವವೇ ಇರಲಿಲ್ಲ.

ಮಧ್ಯಾಹ್ನ 2.30ಕ್ಕೆ ಆರಂಭವಾಗಬೇಕಿದ್ದ ಮೊದಲ ಗೋಷ್ಠಿ ಶುರುವಾದದ್ದು ಸಂಜೆ 5ಗಂಟೆಗೆ. ಅತಿಥಿಗಳು ಕಾದು ಸುಸ್ತಾಗಿ ಮನೆ ಕಡೆಗೆ ಹಿಂದುರುಗಬೇಕು ಎನ್ನುವಷ್ಟರಲ್ಲಿ ಗೋಷ್ಠಿಗಳು ಆರಂಭವಾದವು. ಪ್ರಬಂಧ ಮಂಡಕರಿಗೆ ಬಿಟ್ಟರೆ ಉಳಿದ ಅತಿಥಿಗಳ ಮಾತಿಗೆ ಅವಕಾಶ ಇರಲಿಲ್ಲ.

ಭಾಷೆ ಉಳಿವಿನ ಚರ್ಚೆ ನಡೆಯಲಿ
ಗೋಣಿಕೊಪ್ಪಲು: ಕನ್ನಡ ಭಾಷೆ ಉಳಿವಿನ ಬಗ್ಗೆ ವಿಶ್ವವಿದ್ಯಾನಿಲಯ ಹಂತದಲ್ಲಿ ಚರ್ಚೆ ನಡೆಯಲಿ ಎಂದು ಸಾಹಿತಿ ಕೆ.ಪಿ.ಬಾಲಸುಬ್ರಮಣ್ಯ ಕಂಜರ್ಪಣೆ ಹೇಳಿದರು. ಸಾಹಿತ್ಯ ಸಮ್ಮೇಳನದ ಶೈಕ್ಷಣಿಕ ಗೋಷ್ಠಿ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾಷೆ ಉಳಿಯಬೇಕಾದರೆ ಅದು ನಾಲಿಗೆಯ ಮೇಲೆ ಉಲಿಯ ಬೇಕು. ಕನ್ನಡ ಭಾಷೆ ಬಗೆಗಿನ ವ್ಯಾಮೋಹ ಮನಸ್ಸಿನಲ್ಲಿ ಮೂಡಬೇಕು. ಇಂಗ್ಲಿಷ್ ಬಗ್ಗೆ ತಿರಸ್ಕಾರ ಬೇಡ. ಇಂಗ್ಲಿಷ್‌ಗೆ ಸಂವಾದಿಯಾದ ಕನ್ನಡ ಶಬ್ದಗಳನ್ನು ಬಳಸಿ ಅದನ್ನು ಮತ್ತಷ್ಟು ಗಟ್ಟಿಗೊಳಿಸೋಣ’ ಎಂದು ಹೇಳಿದರು.

‘ಕನ್ನಡ ಸಂವರ್ಧನೆಯ ಮಾರ್ಗೋಪಾಯಗಳು’ ವಿಷಯ ಕುರಿತು ಜೆ.ಸೋಮಣ್ಣ, ‘ಸಮಾನ ಶಿಕ್ಷಣ ನೀತಿಯ ಸಾಧ್ಯತೆಗಳು’ ಕುರಿತು ದಯಾನಂದ, ಕನ್ನಡ ಮಾಧ್ಯಮ ಶಾಲೆಯ ಅಳಿವು– ಉಳಿವು ಕುರಿತು ಉ.ರಾ.ನಾಗೇಶ್ ಪ್ರಬಂಧ ಮಂಡಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮೋಹನ್, ಸಿ.ಎನ್.
ವಿಶ್ವನಾಥ್, ಕವನ್ ಕಾರ್ಯಪ್ಪ, ನಾಗರಾಜು ಹಂಡ್ರಂಗಿ, ಪಿಲಿಪ್ ವಾಸ್ ಹಾಜರಿದ್ದರು.

ಕನ್ನಡ ಭಾಷೆ ಉಳಿವಿನ ಬಗ್ಗೆ ಚರ್ಚೆ ನಡೆಯಲಿ
ಗೋಣಿಕೊಪ್ಪಲು: ಕನ್ನಡ ಭಾಷೆ ಉಳಿವಿನ ಬಗ್ಗೆ ವಿಶ್ವವಿದ್ಯಾನಿಲಯ ಹಂತದಲ್ಲಿ ಚರ್ಚೆ ನಡೆಯಲಿ ಎಂದು ಸಾಹಿತಿ ಕೆ.ಪಿ.ಬಾಲಸುಬ್ರಮಣ್ಯ ಕಂಜರ್ಪಣೆ ಹೇಳಿದರು. ಪೊನ್ನಂಪೇಟೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಶೈಕ್ಷಣಿಕ ಗೋಷ್ಠಿ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾಷೆ ಉಳಿಯಬೇಕಾದರೆ ಅದು ನಾಲಿಗೆಯ ಮೇಲೆ ಉಲಿಯ ಬೇಕು. ಕನ್ನಡ ಭಾಷೆ ಬಗೆಗಿನ ವ್ಯಾಮೋಹ ಮನಸ್ಸಿನಲ್ಲಿ ಮೂಡಬೇಕು. ಇಂಗ್ಲಿಷ್ ಬಗ್ಗೆ ತಿರಸ್ಕಾರ ಬೇಡ. ಇಂಗ್ಲಿಷ್‌ಗೆ ಸಂವಾದಿಯಾದ ಕನ್ನಡ ಶಬ್ದಗಳನ್ನು ಬಳಸಿ ಅದನ್ನು ಮತ್ತಷ್ಟು ಗಟ್ಟಿಗೊಳಿಸೋಣ’ ಎಂದು ಹೇಳಿದರು.

‘ಕನ್ನಡ ಸಂವರ್ಧನೆಯ ಮಾರ್ಗೋಪಾಯಗಳು’ ಕುರಿತು ಜೆ.ಸೋಮಣ್ಣ, ‘ಸಮಾನ ಶಿಕ್ಷಣ ನೀತಿಯ ಸಾಧ್ಯತೆಗಳು’ ಕುರಿತು ದಯಾನಂದ, ಕನ್ನಡ ಮಾಧ್ಯಮ ಶಾಲೆಯ ಅಳಿವು– ಉಳಿವು ಕುರಿತು ಉ.ರಾ.ನಾಗೇಶ್ ಪ್ರಬಂಧ ಮಂಡಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮೋಹನ್, ಸಿ.ಎನ್.ವಿಶ್ವನಾಥ್, ಕವನ್ ಕಾರ್ಯಪ್ಪ, ನಾಗರಾಜು ಹಂಡ್ರಂಗಿ, ಪಿಲಿಪ್ ವಾಸ್ ಹಾಜರಿದ್ದರು.

‘ನೆಲದ ನಿಜವಾದ ಆತ್ಮ ಕಾವ್ಯ’
ಈ ನೆಲೆದ ನಿಜವಾದ ಆತ್ಮ ಕಾವ್ಯ ಎಂದು ಮೈಸೂರು ಅಕ್ಕಮಹಾದೇವಿ ಸಂಶೋಧನಾ ಪೀಠದ ಗೌರವ ನಿರ್ದೇಶಕಿ ಕವಿತಾ ರೈ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಉದ್ಘಾಟಿಸಿದ ಅವರು, ‘ವ್ಯಕ್ತ ಸಂಬಂಧಗಳು ತುಂಬ ಪೇಲವವಾಗುತ್ತಿರುವ ಇಂದಿನ ವಾತಾವರಣದಲ್ಲಿ ನಾವಿದ್ದೇವೆ. ಹಣವೇ ಮುಖ್ಯವೆಂಬುದರ ಪೈಶಾಚಿಕ ಪರಿಸರದಲ್ಲಿ ನಾವು ಜೀವಿಸುತ್ತಿದ್ದೇವೆ. ಇಂತಹ ವ್ಯವಸ್ಥೆಯನ್ನು ಹೋಗಲಾಡಿಸಿ ಮನಸುಗಳನ್ನು ಬೆಸೆಯುವ ಸಾಹಿತ್ಯ ಸಮ್ಮೇಳನಗಳಿಗೆ ಅರ್ಥವಿದೆ’ ಎಂದು ನುಡಿದರು.

‘ಆಯಾಯ ಸಂದರ್ಭಗಳಲ್ಲಿ ಮೂಡುವ ಕಾವ್ಯ ಮುಂದಿನ ತಲೆಮಾರಿಗೆ ರವಾನಿಸುವ ಅರ್ಥಪೂರ್ಣವಾದ ಮಾನವ ಪ್ರಜ್ಞೆಯನ್ನು ಮೂಡಿಸುತ್ತದೆ. ವಿಶ್ವಾಸ ಪೂರ್ವಕವಾದ ನೆಲೆಯಲ್ಲಿ ಚಿಂತಿಸುವ ಕವಿಗಳು ಎಲ್ಲ ಎಲ್ಲೆಗಳ ಗಡಿ ದಾಟಿದವರು’ ಎಂದು ಹೇಳಿದರು.

‘ಗೌರಿಯ ಕೊಲೆ ದೇಶದ ಚಾರಿತ್ರಿಕ ಹಿನ್ನೆಡೆಗೆ ಸಿಕ್ಕಿದ ಅಲ್ಪರ ತುಚ್ಚ ನೀತಿ’ ಎಂದು ಹೇಳಿದ ಅವರು, ಗೌರಿ ಹತ್ಯೆಯನ್ನು ಖಂಡಿಸಿ ಬರೆದ ‘ಬಾ ಗೌರಿ ಚಂಡಿಕೆಯೆ’ ಎಂಬ ಕವಿತೆಯನ್ನು ವಾಚಿಸಿದರು.

ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿದ್ದ ಗೋಷ್ಠಿಯ ಕವಿತೆಗಳಲ್ಲಿ ನಿರಾಶೆ, ಹತಾಶೆಗಳೇ ಹೆಚ್ಚಾಗಿ ಮೂಡಿಬಂದವು. ಕನ್ನಡ ಶಾಲೆಯ ದುಸ್ಥಿತಿಯನ್ನು ಜೀವಿತಾ ರವೀಂದ್ರ ಮನೋಜ್ಞವಾಗಿ ವಾಚಿಸಿದರು. ರಾಣಿ ರವೀಂದ್ರ, ಚಾರ್ಲ್ಸ್ ಡಿಸೋಜ, ಸಂಗೀತ ರವಿರಾಜ್, ವಿನೋದ್ ಮೂಡಗದ್ದೆ, ಮಂಡೀರ ದಿವ್ಯಾ, ಕೃಪಾ ದೇವರಾಜ್, ವಿ.ಟಿ.ಶ್ರೀನಿವಾಸ್, ರಂಜಿತಾ ಕಾರ್ಯಪ್ಪ, ಈ.ಸುಲೈಮನ್, ತುಳಸಿ, ಕೆ.ಟಿ.ಕೌಶಲ್ಯಾ, ಮಾಲಾದೇವಿ ಮೂರ್ತಿ, ಕನ್ನಡಿಗ ಟಾಮಿ ಥೋಮಸ್, ಲೀಲಾ ದಯಾನಂದ್ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಿದ್ದರು. ಕಡೇಮಾಡ ಕುಸುಮಾ ಜೋಯಪ್ಪ, ಕುಡೇಕಲ್ ಸಂತೋಷ್, ಫ್ಯಾನ್ಸ್ ಮುತ್ತಣ್ಣ, ಕಿಗ್ಗಾಲು ಗಿರೀಶ್, ಸುನಿತಾ ಲೋಕೇಶ್ ಹಾಜರಿದ್ದರು.

ಸಮ್ಮೇಳನದ ನಿರ್ಣಯಗಳು

4ಎಲ್ಲ ಸೌಲಭ್ಯಗಳನ್ನು ಹೊಂದಿರುವ ಪೊನ್ನಂಪೇಟೆ ಮತ್ತು ಕುಶಾಲನಗರವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು.

4ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳ ಮುಂದೆ ಮೊದಲ ಆದ್ಯತೆಯಾಗಿ ನಾಮ ಫಲಕವನ್ನು ಕನ್ನಡದಲ್ಲಿ ಬರೆಸಬೇಕು

4ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಬೋಧಿಸಬೇಕು.

4ಜಿಲ್ಲೆಯ ಗಡಿಭಾಗದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.

4ಕನ್ನಡ ಶಾಲೆಯನ್ನು ಉಳಿಸಬೇಕು

4ಜಿಲ್ಲೆಯ ಬರಹಗಾರರ ಕನ್ನಡ ಪುಸ್ತಕ ಗಳನ್ನು ಸರ್ಕಾರ ಖರೀದಿಸಿ ರಾಜ್ಯಜ ಎಲ್ಲ ಗ್ರಂಥಾಲಯಗಳಿಗೆ ಹಂಚಬೇಕು.

4ಜಿಲ್ಲೆಯ ಕನ್ನಡ ವಾರ ಪತ್ರಿಕೆ ಹಾಗೂ ದಿನಪತ್ರಿಕೆಗಳಿಗೆ ಸರ್ಕಾರ ಧನಸಹಾಯ ನೀಡಬೇಕು.

4ಜಿಲ್ಲೆಯ ಜಮ್ಮಾ ಆಸ್ತಿಯನ್ನು ಪರಭಾರೆ ಮಾಡುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ ಮಾಡಬಾರದು.

4ಜಿಲ್ಲೆಯ ಜೀವನದಿಗಳು ಕಲುಶಿತವಾಗದಂತೆ ಸಂರಕ್ಷಣೆ ಮಾಡಬೇಕು.

4ಜಿಲ್ಲೆಯ ಯಾವುದೇ ಭಾಗವನ್ನು ಹುಲಿ ಸಂರಕ್ಷಣಾ ಕೇಂದ್ರವೆಂದಾಗಲಿ, ಕಸ್ತೂರಿ ರಂಗನ್ ವರದಿ ಪರಿಸರ ಸಂರಕ್ಷಿತಾ ಪ್ರದೇಶವೆಂದಾಗಲಿ ಘೋಷಿಸಬಾರದು.

4ಅಪಾಯಕಾರಿ ಜಲಪಾತಗಳ ಬಳಿ ಕನ್ನಡದಲ್ಲಿ ಎಚ್ಚರಿಕೆಯ ಫಲಕವನ್ನು ಹಾಕಬೇಕು.

4ಪ್ರವಾಸಿ ತಾಣಗಳಲ್ಲಿ ವಸೂಲಿ ಮಾಡುತ್ತಿರುವ ದುಬಾರಿ ಶುಲ್ಕವನ್ನು ತಡೆಗಟ್ಟಬೇಕು. ಪ್ರವಾಸಿಗರ ಜತೆ ಸೌಜನ್ಯ ಹಾಗೂ ಸಭ್ಯತೆಯಿಂದ ವರ್ತಿಸುವಂತೆ ಆದೇಶಿಸಬೇಕು.

ಮರೆತ ಪೊನ್ನಪ್ಪನ ಹೆಸರು: ತಾಲ್ಲೂಕು ಅಧ್ಯಕ್ಷರ ಕ್ಷಮೆ
‘ಸಾಹಿತ್ಯ ಸಮ್ಮೇಳನದಲ್ಲಿ ಪೊನ್ನಂಪೇಟೆ ಸೃಷ್ಟಿಗೆ ಕಾರಣರಾದ ಚೆಪ್ಪುಡೀರ ಪೊನ್ನಪ್ಪ ಅವರನ್ನು ಮರೆತಿದ್ದಾರೆ. ಅವರ ಹೆಸರಿನಲ್ಲಿ ಎಲ್ಲಿಯೂ ಒಂದು ದ್ವಾರವನ್ನು ನಿರ್ಮಿಸಿಲ್ಲ’ ಎಂದುಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪಡೀರ ಪೊನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಸಂಭ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಇದಕ್ಕೆ ಸಮ್ಮೇಳನ ಆಯೋಜಕರು ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದರು. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಧೋಶ್ ಪೂವಯ್ಯ, ‘ಕಣ್ತಪ್ಪಿನಿಂದ ಅಚಾತುರ್ಯ ನಡೆದಿದೆ. ಇದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ’ ಎಂದು ಹೇಳಿ ಪೊನ್ನಪ್ಪನವರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT