ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂತಕರ ಬಂಧಿಸುವಲ್ಲಿ ಸಿ.ಎಂ ಅಸಹಾಯಕ’

Last Updated 20 ನವೆಂಬರ್ 2017, 9:51 IST
ಅಕ್ಷರ ಗಾತ್ರ

ರಾಯಚೂರು: ‘ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯಲ್ಲಿ ಪ್ರಭಾವಿಗಳ ಕೈವಾಡವಿದ್ದು, ಈ ಕೊಲೆಯಲ್ಲಿ ರಹಸ್ಯ ಅಡಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ’ ಎಂದು ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಆರೋಪಿಸಿದರು.

ಸುರಭಿ ಸಾಂಸ್ಕೃತಿಕ ಬಳಗದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ ಹತ್ಯೆ ಖಂಡಿಸಿ ಅಕ್ಷರ ಪ್ರತಿರೋಧದ ‘ಆಕ್ರಂದನ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಗೌರಿ ಲಂಕೇಶ ಅವರ ಹತ್ಯೆ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳಲ್ಲಿ ಆಕ್ರಂದನ ಮೊಳಗಿಸಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೌನ ಅರ್ಥವಾಗುತ್ತಿಲ್ಲ’ ಎಂದರು.

‘ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ ಸೇರಿದಂತೆ ವಿಚಾರವಾದಿಗಳ ಕೊಲೆ ಮಾಡಿರುವ ಇದುವರೆಗೂ ಬಂಧಿ ಸಲು ಆಗದಿರುವುದು ಆತಂಕಕಾರಿ ಸಂಗತಿ. ಗೌರಿ ಲಂಕೇಶ ಅವರನ್ನು ಕೊಲೆ ಮಾಡಿರುವ ಹಂತಕರ ಬಗ್ಗೆ ಸರ್ಕಾರಗಳಿಗೆ ಗೊತ್ತಿದೆ. ಆದರೆ, ಇಂದು ಅಥವಾ ನಾಳೆ ಹಂತಕರನ್ನು ಹಿಡಿಯಲಾಗುತ್ತದೆ ಎಂದು ಸರ್ಕಾರ ಸಮಾಧಾನ ಪಡಿಸುವ ಮೂಲಕ ಜನರಿಗೆ ದಾರಿ ತಪ್ಪಿಸುತ್ತಿದೆ’ ಎಂದು ದೂಷಿಸಿದರು.

‘ವೈಚಾರಿಕ ದಾರಿದ್ರ್ಯದಿಂದ ಹಿಂಸೆಯನ್ನು ಪರಮ ಅಸ್ತ್ರವನ್ನಾಗಿ ಮಾಡಿಕೊಂಡು ಮಾಡುತ್ತಿರುವ ಕೃತ್ಯಗಳು ಖಂಡನೀಯವಾಗಿದ್ದು, ಹಿಂಸೆ ಯಿಂದ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಮಾನವೀಯತೆ ಎಲ್ಲಿ ಹೋಗಿದೆ, ಇಂತಹವುಗಳನ್ನು ಧರ್ಮವೆಂದು ಒಪ್ಪಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾವಿತ್ರ ಮುಜುಮದಾರ, ಸಾಹಿತಿ ವೀರಹನುಮಾನ ಮಾತನಾಡಿದರು. ಸಾಹಿತಿ ಮಹಾಂತೇಶ ಮಸ್ಕಿ ಅಧ್ಯಕ್ಷತೆ ವಹಿಸಿದ್ದರು. ಸುರಭಿ ಸಾಂಸ್ಕೃತಿಕ ಬಳಗ ಅಧ್ಯಕ್ಷ ಜಿ.ಸುರೇಶ, ಎಸ್‌.ದೇವೇಂದ್ರಗೌಡ, ಪತ್ರಕರ್ತ ಕುಮಾರ ಬುರಡಿಕಟ್ಟಿ, ದಸ್ತಗೀರ್‌ಸಾಬ್‌ ದಿನ್ನಿ, ಈರಣ್ಣ ಬೆಂಗಾಲಿ ಇದ್ದರು.

* * 

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಪ್ರಯತ್ನಗಳು ವೇಗವಾಗಿ ನಡೆಯುತ್ತಿದ್ದು, ಇದರಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ವಿಠ್ಠಪ್ಪ ಗೋರಂಟ್ಲಿ, ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT