ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಮತ್ತೊಂದು ಸಾಧನೆ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ರನ್‌ ಮೆಷಿನ್‌

Last Updated 20 ನವೆಂಬರ್ 2017, 10:35 IST
ಅಕ್ಷರ ಗಾತ್ರ

ಕೋಲ್ಕತ್ತ: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಕೊನೆಯ ದಿನ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರೆಯಲು ವಿಫಲವಾಗಿದ್ದ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಶತಕ ಸಿಡಿಸಿದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ 18ನೇ ಶತಕ.

ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 32 ಬಾರಿ ಮೂರಂಕಿ ದಾಟಿರುವ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 50ನೇ ಶತಕ ಸಿಡಿಸಿ, ಈ ಸಾಧನೆ ಮಾಡಿದ ವಿಶ್ವದ 8ನೇ ಬ್ಯಾಟ್ಸ್‌ಮನ್‌ ಎನಿಸಿದರು.

ಸದ್ಯ ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ ಸೇರಿ ಒಟ್ಟು 318 ಪಂದ್ಯಗಳನ್ನಾಡಿರುವ ಕೊಹ್ಲಿ ವೇಗವಾಗಿ 50ಶತಕ ಸಿಡಿಸಿದವರ ‍ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲಾ ಮೊದಲ ಸ್ಥಾನದಲ್ಲಿದ್ದಾರೆ. ಆಮ್ಲಾ ಕೇವಲ 310ಪಂದ್ಯಗಳಲ್ಲೇ 54 ಶತಕ ಸಿಡಿಸಿದ್ದಾರೆ.

ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕಟ್‌ನಲ್ಲಿ ಅತಿ ಹೆಚ್ಚು(100) ಶತಕ ಗಳಿಸಿರುವ ದಾಖಲೆ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ.

ಹೆಚ್ಚು ಶತಕ ಗಳಿಸಿರುವ ಹತ್ತು ಕ್ರಿಕೆಟಿಗರು

ಆಟಗಾರ ಪಂದ್ಯ ಶತಕ
ಸಚಿನ್‌ ತೆಂಡೂಲ್ಕರ್‌ (ಭಾರತ) 664 100
ರಿಕಿ ಪಾಂಟಿಂಗ್‌ (ಆಸ್ಟ್ರೇಲಿಯಾ) 560 71
ಕುಮಾರ ಸಂಗಕ್ಕಾರ (ಶ್ರೀಲಂಕಾ) 594  63
ಜಾಕ್‌ ಕಾಲಿಸ್‌ (ದಕ್ಷಿಣ ಆಫ್ರಿಕಾ) 519  62
ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) 310  54
ಮಹೇಲ ಜಯವರ್ಧನೆ (ಶ್ರೀಲಂಕಾ) 652  54
ಬ್ರಿಯಾನ್‌ ಲಾರಾ (ವೆಸ್ಟ್‌ ಇಂಡೀಸ್‌) 430  53
ವಿರಾಟ್‌ ಕೊಹ್ಲಿ (ಭಾರತ) 318 50
ರಾಹುಲ್‌ ದ್ರಾವಿಡ್‌ (ಭಾರತ) 509 48
ಎಬಿ ಡಿ ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ) 409  46

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT