ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಗಿಂಗ್: 54 ವಿದ್ಯಾರ್ಥಿನಿಯರಿಂದ ಸಂಗ್ರಹವಾದ ದಂಡದ ಮೊತ್ತ ₹13.50ಲಕ್ಷ!

ಪ್ರತಿ ವಿದ್ಯಾರ್ಥಿನಿಯರಿಗೆ ₹25 ಸಾವಿರ ದಂಡ
Last Updated 20 ನವೆಂಬರ್ 2017, 12:46 IST
ಅಕ್ಷರ ಗಾತ್ರ

ದರ್ಬಾಂಗ/ಬಿಹಾರ: ಇಲ್ಲಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವಿದ್ಯಾರ್ಥಿನಿಯರಿಗೆ ರ‍್ಯಾಗಿಂಗ್ ಮಾಡಿದ ಕಾರಣಕ್ಕೆ ಒಟ್ಟು 54 ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿ 25 ಸಾವಿರ ದಂಡ ವಿಧಿಸಿದ್ದು, ಇದರಿಂದ 13.50 ಲಕ್ಷ ಸಂಗ್ರಹವಾಗಿದೆ.

‌ಮೊದಲ ವರ್ಷದ ವಿದ್ಯಾರ್ಥಿನಿಯು ವಸತಿ ನಿಲಯದಲ್ಲಿ ರ‍್ಯಾಗಿಂಗ್ ನಡೆದಿರುವ ಬಗ್ಗೆ ನವೆಂಬರ್ 11ರಂದು ಇ–ಮೇಲ್ ಮೂಲಕ ದೂರು ನೀಡಿದ್ದರು. ಇವರ ದೂರನ್ನು ಗಣನೆಗೆ ತೆಗೆದುಕೊಂಡ ಆಡಳಿತ ಮಂಡಳಿ ರ‍್ಯಾಗಿಂಗ್ ಮಾಡಿದ ಪ್ರತಿ ಹಿರಿಯ ವಿದ್ಯಾರ್ಥಿನಿಯರಿಗೆ ₹25 ಸಾವಿರ ದಂಡ ವಿಧಿಸಿದೆ.

ಇನ್ನು ಕೆಲವು ಯುವತಿಯರ ದಂಡ ಬಾಕಿ ಉಳಿದಿದೆ. ಇವರು ದಂಡ ನೀಡುವಲ್ಲಿ ವಿಫಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರಬೀಂದ್ರ ಕುಮಾರ್ ಸಿನ್ಹಾ ಎಚ್ಚರಿಕೆ ನೀಡಿದ್ದಾರೆ. 

ವೈದ್ಯಕೀಯ ಕಾಲೇಜಿನ ರ‍್ಯಾಗಿಂಗ್ ನಿಗ್ರಹ ಸಮಿತಿಯು, ಇದುವರೆಗೂ ರ‍್ಯಾಗಿಂಗ್‌ನಲ್ಲಿ ಭಾಗಿಯಾದ ಹಾಗೂ ಒಳಗಾದ ವಿದ್ಯಾರ್ಥಿನಿಯರ ಹೆಸರನ್ನು ಬಹಿರಂಗಪಡಿಸಿಲ್ಲ. ಕೆಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಮಾಹಿತಿ ಕಲೆಹಾಕಿದ್ದೇವೆ. ಮೊದಲ ಸೆಮಿಷ್ಟರಿನ 27 ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT