ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಕಥೆ ಬೋರು

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಆತ್ಮಕಥೆ ಬರೆದುಕೊಳ್ಳುವ ಸಂಸ್ಕೃತಿ ಬಾಲಿವುಡ್‌ ಮಂದಿಯಲ್ಲಿ ಹೆಚ್ಚುತ್ತಿದೆ. ತಮ್ಮ ಬದುಕಿನ ಏಳು ಬೀಳು, ನೋವು ನಲಿವುಗಳನ್ನು ಪುಸ್ತಕದ ಮೂಲಕ ಜನತೆಗೆ ತಿಳಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದೇ ವರ್ಷದಲ್ಲಿ ಕರಣ್‌ ಜೋಹರ್‌, ಆಶಾ ಪರೇಖ್‌, ರಿಷಿ ಕಪೂರ್‌ ಆತ್ಮಕಥೆಯ ಪುಸ್ತಕಗಳೂ ಬಿಡುಗಡೆಯಾಗಿವೆ.

ಆದರೆ ವಿಭಿನ್ನ ಪಾತ್ರಗಳ ಮೂಲಕ ಸಿನಿಮಂದಿಯ ಮನಸೆಳೆಯುತ್ತಿರುವ ಇರ್ಫಾನ್‌ ಖಾನ್‌ಗೆ ಮಾತ್ರ ತನ್ನ ಬದುಕಿನ ಕ್ಷಣಗಳನ್ನು ನಮೂದಿಸುವುದು ತುಂಬಾ ಬೇಸರದ ಕೆಲಸವಂತೆ. ಇತ್ತೀಚೆಗಷ್ಟೇ ನವಾಜುದ್ದೀನ್‌ ಸಿದ್ದಿಕಿ ತಮ್ಮ ಪುಸ್ತಕವನ್ನು ಹಿಂತೆಗೆದುಕೊಂಡ ಬಗ್ಗೆಯೂ ಪ್ರಸ್ತಾಪ ಮಾಡಿರುವ ಇರ್ಫಾನ್‌ ‘ಇದು ತುಂಬಾ ಬೇಸರದ ಕೆಲಸ.

ಯಾರಾದರೂ ಉತ್ತಮ ಲೇಖಕರು ಸಿಕ್ಕರೆ ಆತ್ಮಕಥೆ ಬರೆಸುವ ಯೋಚನೆ ಮಾಡುತ್ತೇನೆ. ಆದರೆ ಅದರಲ್ಲಿ ನನಗಿಂತ ನನ್ನ ಪಯಣಕ್ಕೆ ನೆರವಾದವರ ಕುರಿತೇ ಹೆಚ್ಚಾಗಿರುತ್ತದೆ. ಆತ್ಮಕಥೆ ಎಂದರೆ ಅಂದಿನ ಸಮಯ, ಸನ್ನಿವೇಶಗಳ ಕಥೆಯಾಗಬೇಕೆ ಹೊರತು, ನನ್ನ ಬಗೆಗಿನ ಕಥೆಯಾಗಬಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT