ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾನಾ ಬಳಸುತ್ತಿದ್ದ ಆಭರಣ ಬ್ಯಾಗ್‌ ₹ 7.81 ಲಕ್ಷ ಕ್ಕೆ ಹರಾಜಾಗುವ ನಿರೀಕ್ಷೆ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಬ್ರಿಟನ್‌ನ ರಾಜಕುಮಾರಿ ಡಯಾನಾ ಅವರು 1980ರಲ್ಲಿ ಬಳಸಿದ ಸೊಗಸಾದ ಆಭರಣದ ಬ್ಯಾಗ್‌ ಅಮೆರಿಕದಲ್ಲಿ ನಡೆಯಲಿರುವ ಹರಾಜಿನಲ್ಲಿ ₹7.81ಲಕ್ಷಕ್ಕೆ (12 ಸಾವಿರ ಡಾಲರ್‌) ಮಾರಾಟವಾಗುವ ನಿರೀಕ್ಷೆಯಿದೆ.

ಉಣ್ಣೆಯ ಬಟ್ಟೆಯಿಂದ ಮುಚ್ಚಿದ ಬೆಳ್ಳಿಚೀಲವನ್ನು ಕೆನ್ಸಿಂಗ್ಟನ್‌ ಅರಮನೆಯ ಕೆಲಸದಾಳು ಶೆಯ್ಲಾ ಟಿಲ್ಲೆ ಅವರು  ಹರಾಜು ಸಂಸ್ಥೆಗೆ ವರ್ಗಾಯಿಸಿದರು.

‘ಚೀಲವು ಅತ್ಯಂತ ಸುಂದರವಾಗಿದ್ದು, ಯಾವುದೂ ಅದಕ್ಕೆ ಸಮನಾಗಿಲ್ಲ. ಡಯಾನಾ ಅವರ ಅಸಾಧಾರಣ ಶೈಲಿ ಹಾಗೂ ಅಭಿರುಚಿಯನ್ನು ವ್ಯಕ್ತಪಡಿಸುವ ವಸ್ತು’ ಇದಾಗಿದೆ ಎಂದು ಹರಾಜು ಸಂಸ್ಥೆ ಆರ್‌ಆರ್ ತಿಳಿಸಿದೆ.

‘ನಾನು ರಾಜಕುಮಾರ ಚಾರ್ಲ್ಸ್ ಹಾಗೂ ರಾಣಿ ಡಯಾನಾ ಅವರು ತಂಗಿದ್ದ ಕೆನ್ಸಿಂಗ್ಟನ್‌ ಅರಮನೆಯಲ್ಲಿ 1981ರಿಂದ 1983ರ ತನಕ ಉದ್ಯೋಗಿಯಾಗಿದ್ದೆ. ಆಗ ಅಲ್ಲಿದ್ದ ಬಾಣಸಿಗ ಅಲನ್‌ ಫಿಶರ್‌ ಅವರು ಡಯಾನಾ ಅವರಿಗೆ ಅನಗತ್ಯವಾಗಿದ್ದ ವಸ್ತುಗಳನ್ನು ಹಂಚಿದಾಗ ಈ ಬ್ಯಾಗ್‌ ನನಗೆ ಸಿಕ್ಕಿತು’ ಎಂದು ಶೆಯ್ಲಾ ಅವರ ಹೇಳಿಕೆಯನ್ನು ಚೀಲಕ್ಕೆ ಅಳವಡಿಸಲಾದ ವಿವರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT