ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳಲ್ಲಿ ಬದಲಾದ ಭೂಮಿ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: 20 ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲ್ಮೈ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಇದಕ್ಕೆ ವಿವಿಧ ಉಪಗ್ರಹಗಳ ಮಾಹಿತಿಯನ್ನು ಪಡೆಯಲಾಗಿದೆ.

1970ರಿಂದಲೇ ಉಪಗ್ರಹಗಳು ಭೂಮಿಯ ಮೇಲೆ ನಿಗಾ ಇಟ್ಟಿವೆ. ಆದರೆ 1997ರಲ್ಲಿ ಸೀ ವೀವಿಂಗ್ ವೈಡ್ ಫೀಲ್ಡ್ ಸೆನ್ಸರ್‌ಗಳನ್ನು ಉಡಾವಣೆ ಮಾಡಿದ ಬಳಿಕ ಭೂ ಮೇಲ್ಮೈ ಹಾಗೂ ಸಾಗರದ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ.

ಈ 20 ವರ್ಷ ಅವಧಿಯಲ್ಲಿ ಉಪಗ್ರಹಗಳು ನೀಡಿದ ದತ್ತಾಂಶಗಳಿಂದ ಸಾಗರದ ಸೂಕ್ಷ್ಮ ಸಸ್ಯವರ್ಗದ ಅಧ್ಯಯನ, ಭೂ ಮೇಲ್ಮೈನ ಬೆಳೆ ಇಳು
ವರಿ ಮೇಲೆ ನಿಗಾ ಹಾಗೂ ಆರ್ಕಟಿಕ್ ಸಸ್ಯವರ್ಗದಲ್ಲಿ ಆಗಿರುವ ಬದಲಾವಣೆ ಅರಿಯಲು ಸಹಾಯಕವಾಗಿದೆ. ಆರ್ಕಟಿಕ್‌ನಲ್ಲಿ ಹಸಿರು ಹೆಚ್ಚುತ್ತಿರುವುದನ್ನು ಪ್ರಮುಖವಾಗಿ ಗಮನಿಸಲಾಗಿದೆ. ಹವಾಮಾನ ವೈಪರೀತ್ಯಕ್ಕೆ ಪರಿಸರ ಹೇಗೆ ಸ್ಪಂದಿಸಿದೆ ಎಂದೂ ವಿಜ್ಞಾನಿಗಳು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT