ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಾಬೆ ವಾಗ್ದಂಡನೆಗೆ ಸಿದ್ಧತೆ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹರಾರೆ: ಜಿಂಬಾಬ್ವೆ ಅಧ್ಯಕ್ಷ ಹುದ್ದೆ ತೊರೆಯಲು ನಿರಾಕರಿಸಿರುವ ರಾಬರ್ಟ್ ಮುಗಾಬೆ ವಿರುದ್ಧ ಮಂಗಳವಾರದಿಂದ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಲಿದೆ. ಅದರ ಟಿಪ್ಪಣಿಯೂ ಸಿದ್ಧವಾಗಿದೆ.

ಅಸ್ಥಿರತೆಯ ಮೂಲ: ‘ಮುಗಾಬೆ ಅಸ್ಥಿರತೆಯ ಮೂಲ. ಅವರು ದೇಶದ ಕಾನೂನಿಗೆ ಅಗೌರವ ತೋರಿದ್ದಾರೆ. ಕಳೆದ 15 ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಅವರು ದಿಕ್ಕುತಪ್ಪಿಸಿದ್ದಾರೆ’ ಎಂದು ಆಡಳಿತಾರೂಢ ಪಕ್ಷ ಸಿದ್ಧಪಡಿಸಿರುವ ವಾಗ್ದಂಡನೆ ನಿಲುವಳಿ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಬಗ್ಗದ ಮುಗಾಬೆ: ಅಧ್ಯಕ್ಷ ಹುದ್ದೆ ತೊರೆಯಲು ಸೋಮವಾರ ಮಧ್ಯಾಹ್ನದವರೆಗೆ ನೀಡಿದ್ದ ಗಡುವನ್ನು ರಾಬರ್ಟ್ ಮುಗಾಬೆ ಮುರಿದಿದ್ದಾರೆ. ರಾಜೀನಾಮೆ ನೀಡಿ ಅಥವಾ ವಾಗ್ದಂಡನೆ ಎದುರಿಸಿ ಎಂದು ಆಡಳಿತಾರೂಢ ಪಕ್ಷ ತಾಕೀತು ಮಾಡಿದ್ದರೂ, ಅವರು ಬಗ್ಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT