ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಲಕ್ಷ ಅಲ್ಫರ್ಡ್‌ ಪುಸ್ತಕ ಡೌನ್‌ಲೋಡ್

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: 18 ತಿಂಗಳುಗಳಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ 10 ಲಕ್ಷ ಅಲ್ಫರ್ಡ್‌ ಪುಸ್ತಕಗಳನ್ನು ಜನರು ಉಚಿತವಾಗಿ ಡೌನ್‌ಲೋಡ್ ಮಾಡಿದ್ದಾರೆ.

ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅಲ್ಫರ್ಡ್‌ ಪುಸ್ತಕಗಳು ಸಹಾಯಕವಾಗಿದ್ದು, ಈ ಪುಸ್ತಕಗಳನ್ನು ಡಗ್ಲಾಸ್ ಜೆ. ಅಲ್ಫರ್ಡ್‌ ಎಂಬುವರು ಬರೆದಿದ್ದಾರೆ. 170 ಅಂತರರಾಷ್ಟ್ರೀಯ ಭಾಷೆಗಳಲ್ಲಿ ಈ ಪುಸ್ತಕಗಳು ಪ್ರಕಟಗೊಂಡಿವೆ.

ಅಲ್ಫರ್ಡ್‌ ಪುಸ್ತಕಗಳು ಸುಲಭ, ಮಧ್ಯಮ ಹಾಗೂ ಸುಧಾರಿತ ಎಂಬ ಮೂರು ಹಂತಗಳಲ್ಲಿ ಲಭ್ಯ ಇವೆ. ಸುಲಭ ವಿಜ್ಞಾನ, ಬಾಹ್ಯಾಕಾಶ ಬೆನ್ನತ್ತಿ, ಕಂಪ್ಯೂಟರ್‌ಗಳು ಅರ್ಥ ಮಾಡಿಕೊಳ್ಳಲು ಸುಲಭ, ಆಮೆ ಜಿಗಿತ ಇವು ಈ ಪುಸ್ತಕಗಳ ಪ್ರಮುಖವಾದ ಹೆಸರುಗಳು. ಏಷ್ಯಾದಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಬಳಸಿ ಈ ಪುಸ್ತಕಗಳನ್ನು ಹೆಚ್ಚಾಗಿ ಡೌನ್‌ಲೋಡ್ ಮಾಡಲಾಗಿದೆ.

ಈ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು www.ALFORDeBooks.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT